ಹಿರಿಯರ ಅನುಭವದ ಮಾತುಗಳು, ಜಲೀಲ ಅಂಬರೀಶ್ ಅವರ ನೆನಪು, ಸಾಧಕರ ಸಾಧನೆಯ ಪಯಣ, ಸ್ಯಾಂಡಲ್‌ವುಡ್‌ನ ಶ್ರೇಷ್ಠ ನಟ ನಟಿಯರಾದ ರಮೇಶ್ ಅರವಿಂದ್, ಯಶ್, ಪುನೀತ್ ರಾಜ್‌ಕುಮಾರ್, ರಚಿತಾ ರಾಮ್, ಪ್ರಿಯಾಂಕ ಉಪೇಂದ್ರ, ಸುಮಲತಾ ಅಂಬರೀಶ್ ಅವರ ಉಪಸ್ಥಿತಿ, ರಂಗು ರಂಗಿನ ಕಾರ್ಯಕ್ರಮಗಳು, ಹಾಡು, ನೃತ್ಯ, ಹಿರಿತೆರೆ-ಕಿರುತೆರೆ ಕಲಾವಿದಾರ ಸೂಪರ್ ಪರ್ಫಾರ್ಮೆನ್ಸ್‌ಗಳು, ಹೀಗೇ ಸಾಕಷ್ಟು ಮನರಂಜನೆಯನ್ನು ಒಂದೇ ವೇದಿಕೆಯ ಮೇಲೆ ಕಟ್ಟಿಕೊಡಲಿದೆ ಜೀ಼ ಕನ್ನಡ ವಾಹಿನಿಯ ಹೆಮ್ಮೆಯ ಕನ್ನಡಿಗ-2019 ಕಾರ್ಯಕ್ರಮ.
ಸಾಕಷ್ಟು ವರ್ಷಗಳಿಂದ ವಿಭಿನ್ನ ಹಾಗೂ ಅತ್ಯುತ್ತಮ ಕಾರ್ಯಕ್ರಮಗಳನ್ನು ಕನ್ನಡ ಜನತೆಗೆ ಉಣಬಡಿಸಿ ಮನರಂಜಿಸುತ್ತಿರುವ ಜೀ಼ ಕನ್ನಡ ವಾಹಿನಿ ಮತ್ತೊಂದು ಅಭೂತಪೂರ್ವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಕನ್ನಡ ನಾಡು ನುಡಿಗಾಗಿ, ಕನ್ನಡ ರಾಜ್ಯದ ಹಿರಿಮೆಯನ್ನು ಎಲ್ಲೆಡೆ ಪ್ರಚುರ ಪಡಿಸಲು ಪ್ರತಿ ದಿನ ಶ್ರಮಿಸುತ್ತಿರುವ ಸಾಧಕರಿಗೆ ಗೌರವ ಸಲ್ಲಿಸುವ ಸಲುವಾಗಿ “ಹೆಮ್ಮೆಯ ಕನ್ನಡಿಗ-2019 ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಕಳೆದ ವರ್ಷದ ಹೆಮ್ಮೆಯ ಕನ್ನಡಿಗ ಕಾರ್ಯಕ್ರಮಕ್ಕೆ ಸಿಕ್ಕ ಭಾರೀ ಯಶಸ್ಸಿನ ನಂತರ ಈಗ ನಿಮ್ಮ ಮುಂದೆ ಹೆಮ್ಮೆಯ ಕನ್ನಡಿಗ-2019 ಕಾರ್ಯಕ್ರಮವನ್ನು ಇಡಲು ಮುಂದಾಗಿದೆ ಜೀ಼ ಕನ್ನಡ ವಾಹಿನಿ. ತಮ್ಮ ಮಹಾನ್ ಕಾರ್ಯಗಳ ಮೂಲಕ ಸಮಾಜಕ್ಕೆಕೊಡುಗೆ ನೀಡಿರುವ ಸಾಧಕರಿಗೆ, ಬೆಳ್ಳಿ ಪರದೆ ಹಾಗೂ ಸಿನಿಮಾ ರಂಗದಲ್ಲಿ ಸಾಧನೆ ಮಾಡಿರುವ ಎಲ್ಲಾ ಸಾಧಕರಿಗೂ ಗೌರವ ಸಲ್ಲಿಸುವ ಅದ್ಭುತ ಕಾರ್ಯಕ್ರಮವೇ ಹೆಮ್ಮೆಯ ಕನ್ನಡಿಗ – 2019.
ಕಳೆದ ವರ್ಷ ಕರುನಾಡಿನ ನಡೆದಾಡುವ ದೇವರೆನಿಸಿರುವ ಶ್ರೀಸಿದ್ಧಗಂಗಾ ಮಠದ ಪರಮಪೂಜ್ಯ ಶ್ರೀ ಡಾ||ಶಿವಕುಮಾರ ಸ್ವಾಮೀಜಿಯವರಿಗೆ ‘ಕನ್ನಡದ ಹೆಮ್ಮೆ’ ಗೌರವವನ್ನು ಸಮರ್ಪಿಸಲಾಗಿತ್ತು. ಈ ವರ್ಷ ನಡೆದಾಡುವ ದೇವರು ನಮ್ಮ ನಡುವಲ್ಲಿ ಇಲ್ಲ ಎನ್ನುವುದು ವಿಷಾದಕರ. ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ಸಾಲು ಮರದ ತಿಮ್ಮಕ್ಕ, ನಿಸಾರ್ ಅಹಮ್ಮದ್, ಗಾಯಕ ವಿಜಯ ಪ್ರಕಾಶ್, ಪತ್ರಕರ್ತ ವಿಶ್ವೇಶ್ವರ ಭಟ್, ಕೃಷಿಕ ನಾರಾಯಣ ರೆಡ್ಡಿ, 5 ರೂಪಾಯಿ ವೈದ್ಯರೆಂದೇ ಖ್ಯಾತಿ ಪಡೆದಿರುವ ಡಾ.ಶಂಕರೇಗೌಡ, ಐಪಿಎಸ್ ಆಫಿಸರ್ ರೂಪಾ ಮೌದ್ಗಿಲ್ ಹೀಗೇ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಎಲ್ಲಾ ಸಾಧಕರಿಗೂ ಜೀ಼ ವಾಹಿನಿ ಕಳೆದ ವರ್ಷ ಗೌರವ ಸಲ್ಲಿಸಿದ್ದು ಈ ವರ್ಷವೂ ಆ ಮಹಾ ಕಾರ್ಯವನ್ನು ಮುಂದುವರಿಸಿಕೊಂಡು ಬಂದಿದೆ.
ಹೆಮ್ಮೆಯ ಸಾಹಿತಿ, ಹೆಮ್ಮೆಯ ಪತ್ರಕರ್ತ, ಹೆಮ್ಮೆಯ ಮಹಿಳಾ ಸಾಧಕಿ, ಹೆಮ್ಮೆಯ ರೈತ ಸೇರಿದಂತೆ 20 ಕ್ಷೇತ್ರಗಳಲ್ಲಿ ಅನನ್ಯ ಸಾಧನೆ ಮಾಡಿರುವ ಸಾಧಕರನ್ನು ಆಹ್ವಾನಿಸಿ, ಅಭಿನಂದಿಸಲಾಯಿತು. ಈ ಎಲ್ಲಾ ವಿಭಿನ್ನ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಗಣ್ಯಾತಿಗಣ್ಯರೇ ಈ ಸಾಧಕರಿಗೆ ಸನ್ಮಾನಿಸಿ ಗೌರವ ಸಲ್ಲಿಸಿದ್ದು ಕಾರ್ಯಕ್ರಮದ ವಿಶೇಷತೆಗಳಲ್ಲಿ ಒಂದಾಗಿತ್ತು. ಕಾರ್ಯಕ್ರಮದ ಚಿತ್ರೀಕರಣ ಈಗಾಗಲೇ ಮುಗಿದಿದ್ದು ಇದೇ ಶನಿವಾರ ಹಾಗೂ ಭಾನುವಾರ ಸಂಜೆ7:00pm ಗಂಟೆಗೆ ನಿಮ್ಮ ನೆಚ್ಚಿನ ಜೀ ವಾಹಿನಿಯಲ್ಲಿ ಕಾರ್ಯಕ್ರಮವನ್ನು ಪ್ರಸಾರಮಾಡಲಾಗುವುದು.
ಯಾರಿಗೆಲ್ಲಾಗೌರವ?
ಜನಪದ ಕವಿ, ಪದ್ಮಶ್ರೀ ಪುರಸ್ಕೃತ ದೊಡ್ಡರಂಗೇಗೌಡ ಅವರಿಗೆಹೆಮ್ಮೆಯ ಸಾಹಿತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು . ಸುದ್ದಿ ವಾಹಿನಿಯಲ್ಲಿ ತನಿಖಾ ಕಾರ್ಯಕ್ರಮದ ಮೂಲಕ ಬಾಲ ಕಾರ್ಮಿಕತೆ, ಲಾಟರಿ ಹಗರಣ, ಜಲ ಹಗರಣ, ಹೀಗೇ ಸಾಕಷ್ಟು ಹಗರಣಗಳ ಜಾಲಗಳನ್ನ್ನು ಪತ್ತೆಹಚ್ಚುವ ಮೂಲಕ ಜನರಿಗೆ ಕರಾಳತೆಯ ಪರಿಚಯ ಮಾಡಿಕೊಟ್ಟಿರುವ ದಿಟ್ಟ, ಧೈರ್ಯವಂತೆ ಪತ್ರಕರ್ತೆ ವಿಜಯಲಕ್ಷ್ಮಿ ಶಿಬರೂರು ಅವರಿಗೆ ಹೆಮ್ಮೆಯ ಪತ್ರಕರ್ತೆ ಪ್ರಶಸ್ತಿಯನ್ನುನೀಡಿ ಗೌರವಿಸಲಾಯಿತು. ಇಸ್ರೋದ ಹಿರಿಯ ಮಹಿಳಾ ವಿಜ್ಞಾನಿ ಹಾಗೂ ಮೊಟ್ಟ ಮೊದಲ ಮಹಿಳಾ ಉಪಗ್ರಹ ಯೋಜನ ನಿರ್ದೇಶಕಿ ಅನುರಾಧ ಅವರಿಗೆಹೆಮ್ಮೆಯ ಸಾಧಕಿ ಪ್ರಶ್ತಿಯನ್ನು ನೀಡಿಗೌರವಿಸಲಾಯಿತು. ಕ್ರಿಕೆಟ್‌ನಲ್ಲಿ ಸಾಧನೆ ಮಾಡಿರುವ ಮಾಡುತ್ತಿರುವ ಯುವ ಪ್ರತಿಭೆ ಕೆ.ಎಲ್ ರಾಹುಲ್ ಅವರಿಗೆ ಹೆಮ್ಮೆಯ ಕ್ರೀಡಾಪಟು ಪ್ರಶ್ತಿಯನ್ನು ನೀಡಿ ಗೌರವಿಸಲಾಯಿತು. ಇನ್ಫೂಸಿಸ್ ಸಂಸ್ಥಾಪಕಿ, ಸಮಾಜ ಸೇವಕಿ, ಪ್ರಭಾವಶಾಲಿ ಸುಧಾಮೂರ್ತಿ ಅವರಿಗೆಹೆಮ್ಮೆಯ ವ್ಯಕ್ತಿತ್ವ ಪ್ರಶಸ್ತಿಯನ್ನುನೀಡಿ ಗೌರವಿಸಲಾಯಿತು. ಸಮಾಜ ಸೇವಕ ಕಲ್ಲಯ್ಯ ಅಜ್ಜ ಅವರಿಗೆ ಹೆಮ್ಮೆಯ ಸಮಾಜ ಸೇವಕರು ಪ್ರಶಸ್ತಿಯನ್ನುನೀಡಿ ಗೌರವಿಸಲಾಯಿತು. ರಂಗಾಯಣದ ರಂಗಕರ್ಮಿ ಮೈಮ್ ರಮೇಶ್ ಅವರಿಗೆ ಹೆಮ್ಮೆಯ ರಂಗಸೇವೆಪ್ರಶಸ್ತಿಯನ್ನುನೀಡಿಗೌರವಿಸಲಾಯಿತು.
ಕೃಷಿಗೆ ಸಂಬಂಧಿಸಿದ ಸರಕಾರದ ಎಲ್ಲಾ ಸವಲತ್ತುಗಳನ್ನೂ ಬಳಸಿಕೊಂಡು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಉತ್ತಮ ಕೃಷಿ ಮಹಿಳೆ ಎಂದು ಗುರುತಿಸಿಕೊಂಡಿರುವ ಕ್ಯಾಪ್ಸಿಕಮ್ ಕಮಲಮ್ಮ ಅವರಿಗೆ ಹೆಮ್ಮೆಯ ರೈತ ಪ್ರಶಸ್ತಿಯನ್ನುನೀಡಿ ಗೌರವಿಸಲಾಯಿತು. ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಎಚ್.ಗುರು ಅವರಕುಟುಂಬಕ್ಕೆ ಹೆಮ್ಮೆಯ ಸ್ಪೂರ್ತಿಪ್ರಶಸ್ತಿಯನ್ನುನೀಡಿ ಗೌರವಿಸಲಾಯಿತು. ಸಮಾಜ ಸೇವಕ, ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಅವರಿಗೆ ಹೆಮ್ಮೆಯ ಜೀವಮಾನ ಸಾಧಕ ಪ್ರಶಸ್ತಿಯನ್ನು ನೀಡಿಗೌರವಿಸಲಾಯಿತು. ತಮ್ಮ ವಿಭಿನ್ನ ಸಾಹಿತ್ಯದ ಮೂಲಕ ಕನ್ನಡ ಸಿನಿಮಾ ಕ್ಷೇತ್ರದಲ್ಲಿ ಹೊಸ ಅಲೆ ಸೃಷ್ಟಿ ಮಾಡಿರುವ ಸಾಹಿತಿ ವಿ.ನಾಗೇಂದ್ರ ಪ್ರಸಾದ್ ಅವರಿಗೆ ಹೆಮ್ಮೆಯಚಿತ್ರ ಸಾಹಿತಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಅತ್ಯುತ್ತಮ ಹಾಡುಗಾರಿಗೆ ಮೂಲಕ 2018-19 ಸಾಲಿನಲ್ಲಿ ಕನ್ನಡ ಜನರಿಗೆ ಉತ್ತಮ ಹಾಡುಗಳನ್ನು ಕೇಳಿಸಿದ ಗಾಯಕ ವಿಜಯ್ ಪ್ರಕಾಶ್ ಅವರಿಗೆ ಹೆಮ್ಮೆಯ ಧ್ವನಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಇನ್ನು 2018-19ನೇ ಸಾಲಿನಲ್ಲಿ ಅತ್ಯುತ್ತಮ ಸಂಗೀತ ಸಂಯೋಜಿಸಿದ ಅರ್ಜುನ್ ಜನ್ಯ ಅವರಿಗೆ ಹೆಮ್ಮೆಯ ಸಂಗೀತನಿರ್ದೇಶಕಪ್ರಶಸ್ತಿಯನ್ನು ನೀಡಲಾಯಿತು. ಟಗರು ಸಿನಿಮಾದಲ್ಲಿ ನಟಿಸಿ ಡಾಲಿ ಎಂದೇ ಖ್ಯಾತಿ ಪಡೆದ ಧನಂಜಯ ಅವರಿಗೆಹೆಮ್ಮೆಯ ಪೋಷಕ ನಟ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಉಗ್ರಂ ಹಾಗೂ ಕೆ.ಜಿ.ಎಫ್ ನಂತಹ ವಿಭಿನ್ನ ಸಿನಿಮಾಗಳನ್ನು ನೀಡಿ ಕನ್ನಡ ಚಿತ್ರರಂಗದ ಗರಿಮೆಯನ್ನು ದೇಶದುದ್ದಕ್ಕೂ ಸಾರಿದ ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಹೆಮ್ಮೆಯ ನಿರ್ದೇಶಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಡಾರ್ಲಿಂಗ್ ಸಿನಿಮಾದಿಂದ ಹಿಡಿದು ನಟ ಸಾರ್ವಭೌಮ ಸಿನಿಮಾವೊರೆಗೂ ತನ್ನ ನಟನಾ ಕೌಶಲ್ಯದಿಂದಲೇ ಎಲ್ಲರನ್ನೂ ತನ್ನತ್ತ ಸೆಳೆದ ಡಿಂಪಲ್ ಬೆಡಗಿ ರಚಿತಾ ರಾಮ್ ಅವರಿಗೆ ಹೆಮ್ಮೆಯ ನಾಯಕನಟಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಕೆ.ಜಿ.ಎಫ್ ಸಿನಿಮಾ ಮೂಲಕ ಇಡೀ ದೇಶದಲ್ಲಿ ಸಂಚಲನ ಸೃಷ್ಟಿಸಿದ ರಾಕಿ ಭಾಯ್ ಅಲಿಯಾಸ್ ಯಶ್ ಅವರಿಗೆ ಹೆಮ್ಮೆಯ ನಾಯಕನಟ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ನಾಗರಹಾವು ಸಿನಿಮಾದ ಮೂಲಕ ಜಲೀಲನಾಗಿ ಬಂದು ಸಾಕಷ್ಟು ಬುಲ್ ಬುಲ್‌ಗಳ ನಿದ್ದೆ ಗೆಡಿಸಿ ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾ ಮೂಲಕ ತಮ್ಮ ಖದರ್ ತೋರಿಸಿದ ರೆಬಲ್ ಸ್ಟಾರ್ ಅಂಬರೀಶ್ ಅವರು ಇಂದು ನಮ್ಮ ನಡುವೆ ಇಲ್ಲ. ನೋ ವೇ ಚಾನ್ಸ್‌ಯೇ ಇಲ್ಲ ಎಂದು ಹೇಳಿ ಎಲ್ಲರ ಮನಗೆದ್ದಿದ್ದ ಶ್ರೇಷ್ಠ ನಟ, ಶ್ರೇಷ್ಠ ವ್ಯಕ್ತಿ ರೆಬೆಲ್ ಸ್ಟಾರ್ ಅಂಬರೀಶ್ ಅವರಿಗೆ ಹೆಮ್ಮೆಯ ಗೌರವವನ್ನು ಸಲ್ಲಿಸಲಾಯಿತು. ನಟನೆ, ರಾಜಕೀಯ, ವಯಕ್ತಿಕ ವಿಚಾರ ಎಲ್ಲದರಲ್ಲೂ ತಮ್ಮದೇ ಸ್ಟೈಲ್ ಹಾಗೂ ಖದರ್ ಸೃಷ್ಟಿ ಮಾಡಿದ್ದ ಅಂಬರೀಶ್ ಅವರಿಗೆ ನಮ್ಮ ಕಡೆಯಿಂದ ದೊಡ್ಡ ಸೆಲ್ಯೂಟ್.
ಐದು ಭಾಷೆಗಳಲ್ಲಿ ಡಬ್ ಆಗಿ ಬಿಡುಗಡೆ ಆಗಿ ಇಡೀ ಜಗತ್ತೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ ಸಿನಿಮಾ ಕೆ.ಜಿ.ಎಫ್ಹೊಂಬಾಳೆಪಿಲ್ಮ್ಸ್ ಈ ಸಿನಿಮಾಗೆ ಈ ವರ್ಷದ ಹೆಮ್ಮೆಯ ಚಲನಚಿತ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರಿಕ್ಕಿ, ಕಿರಿಕ್ ಪಾರ್ಟಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ಬೆಲ್ ಬಾಟಮ್ ಹೀಗೆ ಕನ್ನಡ ಚಿತ್ರರಂಗಕ್ಕೆ ಉತ್ತಮ ಸಿನಿಮಾಗಳನ್ನು ನೀಡಿರುವ ರಿಷಬ್ ಶೆಟ್ಟಿ ಅವರಿಗೆ ಹೆಮ್ಮೆಯ ಪ್ರತಿಭೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಹಾಸ್ಯದ ಮೂಲಕ ಕಾಮಿಡಿ ಕಚಗುಳಿ ನೀಡಿ ಎಲ್ಲರೂ ಹೊಟ್ಟೆ ಹುಣ್ಣಾಗುವಂತೆ ನಗುವ ಹಾಗೇ ಮಾಡಿದ ಚಿಕ್ಕಣ್ಣ ಅವರಿಗೆ ರ್ಯಾಂಬೋ 2 ಚಿತ್ರದ ನಟನೆಗಾಗಿ ಹೆಮ್ಮೆಯ ಹಾಸ್ಯನಟಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಭಾರತೀಯ ಚಿತ್ರರಂಗದಲ್ಲೇ ಹೊಸ ಅಲೆಯನ್ನು ಸೃಷ್ಟಿಮಾಡಿದ ಹೆಮ್ಮೆಯ ಕನ್ನಡ ಸಿನಿಮಾ ಕೆ.ಜಿ.ಎಫ್ ಚಿತ್ರದ ಬ್ಯಾಗ್ರೌಂಡ್ ಮ್ಯೂಸಿಕ್‌ಗಾಗಿ ಹೆಮ್ಮೆಯ ಹಿನ್ನಲೆ ಸಂಗೀತನಿರ್ದೇಶಕ ಪ್ರಶಸ್ತಿಯನ್ನುರವಿ ಬಸ್ರೂರು ಅವರು ಸ್ವೀಕರಿಸಿದ್ರೆ ಅದೇ ಸಿನಿಮಾದಲ್ಲಿ ಗರುಡನಾಗಿ ಅಬ್ಬರಿಸಿ ಬೊಬ್ಬಿರಿದ ರಾಮ್ ಅವರಿಗೆ ಹೆಮ್ಮೆಯ ಖಳನಟಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಇನ್ನು ಕೆ.ಜಿ.ಎಫ್ ಸಿನಿಮಾದ ಹೈಲೈಟ್ ಅಂದ್ರೆ ಅದು ಛಾಯಾಗ್ರಹಣ ಅದಕ್ಕಾಗಿ ಭುವನ್ ಗೌಡ ಅವರಿಗೆ ಹೆಮ್ಮೆಯ ಛಾಯಾಗ್ರಾಹಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ವಿಶೇಷತೆಗಳು
ರೆಡ್ ಕಾರ್ಪೆಟ್ ಫೋಟೋ ಬೂತ್ ಹೆಮ್ಮೆಯ ಕನ್ನಡಿಗ-2019 ಕಾರ್ಯಕ್ರಮದ ವಿಶೇಷತೆಗಳಲ್ಲಿ ಒಂದಾಗಿತ್ತು. ಕಿರುತೆರೆ ಹಾಗೂ ಹಿರಿತೆರೆಯಲ್ಲಿ ತಮ್ಮ ಮನೋಜ್ಞ ಅಭಿನಯದ ಮೂಲಕ ಎಲ್ಲರ ಮನಸೆಳೆದ ನಟ ನಟಿಯರು ರೆಡ್ ಕಾರ್ಪೆಟ್ ಮೇಲೆ ಹೆಮ್ಮೆಯ ಹೆಜ್ಜೆ ಹಾಕಿದರು. ವೀರೇಂದ್ರ ಹೆಗಡೆ, ಸುಧಾಮೂರ್ತಿ, ಪ್ರಕಾಶ್ ಬೆಳವಾಡಿ, ಐಂದ್ರಿತ ರೇ, ದಿಗಂತ್, ಸೃಜನ್ ಲೋಕೇಶ್, ಗಿರಿಜಾ ಲೋಕೇಶ್, ತಾರಾ ಅನುರಾಧ, ವಿ. ಹರಿಕೃಷ್ಣ, ಅರ್ಜುನ್ ಜನ್ಯ, ಹಂಸಲೇಖ, ಗುರುಕಿರಣ್, ಪ್ರಿಯಾಂಕ ಉಪೇಂದ್ರ, ಗರುಡ ರಾಮ್, ಕೆ.ಜಿ.ಎಫ್ ಸಿನಿಮಾ ತಂಡ, ಅರುಂದತಿ ನಾಗ್, ವಿಜಯಲಕ್ಷ್ಮಿ ಶಿಬರೂರು, ವಿನಯ ಪ್ರಸಾದ್, ಶ್ರೀ ಮುರಳಿ, ಮೋಕ್ಷಿತ ಪೈ, ಶರತ್ ಭಾರದ್ವಾಜ, ರೂಪಾ ಮೌದ್ಗಿಲ್, ಟೆನ್ನಿಸ್ ಕೃಷ್ಣ, ಬ್ಯಾಂಕ್ ಜನಾರ್ಧನ್, ವಿ. ನಾಗೇಂದ್ರ ಪ್ರಸಾದ್, ಆಶಾ ರಾಣೀ, ರಾಕಿಂಗ್ ಸ್ಟಾರ್ ಯಶ್, ಜಯಂತ್ ಕಾಯ್ಕಿಣಿ, ಅರ್ಜುನ್ ಸರ್ಜಾ, ಮೈಮ್ ರಮೇಶ್, ರಚಿತಾ ರಾಮ್ ಹೀಗೇ ಸ್ಯಾಂಡಲ್‌ವುಡ್ ಹಾಗೂ ಜೀ ವಾಹಿನಿಯ ಎಲ್ಲಾ ನಟ ನಟಿಯರ ಸಮಾಗಮ ಹೆಮ್ಮೆಯ ಕನ್ನಡಿಗ 2019 ಕಾರ್ಯಕ್ರಮದಲ್ಲಿ ನಡೆಯಿತು. ಇವರ ಜೊತೆಗೆ ಆಟೋ ಶಿವಕುಮಾರ್ ಸಹ ತಮ್ಮ ಹೆಮ್ಮೆಯ ಆಟೋವನ್ನು ಕಾರ್ಯಕ್ರಮದಲ್ಲಿ ತಂದಿದ್ದು ವಿಶೇಷವಾಗಿತ್ತು.
ಜೀ಼ ಕನ್ನಡ ವಾಹಿನಿಯಹೆಮ್ಮೆಯ ಕನ್ನಡಿಗ -2019 ಕಾರ್ಯಕ್ರಮವನ್ನು ರಮೇಶ್ ಅರವಿಂದ್ ಹಾಗೂ ಅನುಶ್ರೀ ಅವರು ಅಚ್ಚುಕಟ್ಟಾಗಿ ನಿರೂಪಣೆ ಮಾಡಿದರು. ನಟಿ ಹರಿಪ್ರಿಯ, ನಟಿ ಪ್ರಿಯಾಂಕ ಉಪೇಂದ್ರ, ರಚಿತಾ ರಾಮ್, ರಘು ದೀಕ್ಷಿತ್, ಭಾವನಾ ಅದ್ಭುತ ನೃತ್ಯ ಪ್ರದರ್ಶನವನ್ನು ನೀಡಿದರು. ಇನ್ನು ಈ ವರ್ಷ ಇಡೀ ದೇಶವೇ ಕನ್ನಡ ಸಿನಿಮಾ ರಂಗದತ್ತ ಮುಖ ಮಾಡಿ ನೋಡುವಂತೆ ಮಾಡಿದ ಕೆ.ಜಿ.ಎಫ್ ಸಿನಿಮಾ ಹಾಡುಗಳಿಗೆ ಜೀ ಕುಟುಂಬದ ನಟರು ಹೆಜ್ಜೆ ಹಾಕಿದರು. ಜೊತೆಗೆ ಜೋಡಿಹಕ್ಕಿ ಧಾರಾವಾಹಿಯ ಚೈತ್ರ ರಾವ್, ಬ್ರಹ್ಮಗಂಟು ಗೀತಾ ಹಾಗೂ ಇನ್ನುಳಿದ ಜೀ಼ ವಾಹಿನಿಯ ನಟಿಯರು ಜಾನಪದ ನೃತ್ಯ ಮಾಡಿ ಗಮನ ಸೆಳೆದರು. ಕಳೆದ ವರ್ಷದ ಹಾಗೇ ಈ ವರ್ಷದ ಹೆಮ್ಮೆಯ ಕನ್ನಡಿಗ ಕಾರ್ಯಕ್ರಮದ ಮೂಲಕ ಜೀ಼ ವಾಹಿನಿ ಕನ್ನಡ ವೀಕ್ಷಕರೂ ನಿಜಕ್ಕೂ ಹೆಮ್ಮೆ ಪಡುವಂತಹ ಕೆಲಸ ಮಾಡಿದ್ದು ಈ ಕಾರ್ಯಕ್ರಮವನ್ನು ನೀವು ಇದೇ ಶನಿವಾರ ಹಾಗೂ ಭಾನುವಾರ ಸಂಜೆ 7:00pmಕಣ್ತುಂಬಿಕೊಳ್ಳಬಹುದು.
Leave a Reply
You must be logged in to post a comment.