ಟಾಲಿವುಡ್ ನಲ್ಲಿ ಸದ್ಯ ಬೇಡಿಕೆಯ ನಟರ ಗತ್ತನ್ನು ಉಳಿಸಿಕೊಂಡಿರುವ ಅಲ್ಲು ಅರ್ಜುನ್ ಎಷ್ಟರಮಟ್ಟಿಗೆ ಅಭಿಮಾನಿಗಳ ಪ್ರೀತಿಯನ್ನು ಗಳಿಸಿಕೊಂಡಿದ್ದಾರೋ, ಅಷ್ಟೇ ಪ್ರಮಾಣದಲ್ಲಿ ಕೌಟುಂಬಿಕವಾಗಿಯೂ ವಿಶೇಷ ಸ್ಥಾನವನ್ನು ಪಡೆದಿದ್ದಾರೆ. ಅಲ್ಲದೇ ರೀಲ್ ಲೈಫ್ ನಲ್ಲಿ ತೋರುವಂತೆಯೇ ರಿಯಲ್ ಲೈಫ್ ನಲ್ಲಿಯೂ ಕುಟುಂಬಕ್ಕೆ ಆದ್ಯತೆಯನ್ನು ನೀಡುತ್ತಾರೆ ಎನ್ನುವುದಕ್ಕೆ ಬಹುತೇಕ ಉದಾಹರಣೆಗಳು ನಮ್ಮ ಕಣ್ಣಮುಂದಿದೆ.

View this post on Instagram

Daddy Cool 😎

A post shared by Allu Arjun (@alluarjunonline) on

ಸದಾ ಶೂಟಿಂಗ್ ನಲ್ಲಿಯೇ ಬ್ಯುಸಿಯಾಗಿರುವ ಬನ್ನಿ, ತುಸು ಫ್ರೀ ಮಾಡಿಕೊಂಡು ಹೆಂಡತಿ ಸ್ನೇಹಾ ರೆಡ್ಡಿ ಮತ್ತು ಮಕ್ಕಳ ಜತೆಗೆ ಹಾಲಿಡೇ ಮೂಡ್ ನಲ್ಲಿದ್ದಾರೆ. ಸದ್ಯ ಸ್ವಿಡ್ಜರ್ ಲೆಂಡ್ ನಲ್ಲಿ ರಜೆಯ ಮೋಜಿನಲ್ಲಿರುವ ಅಲ್ಲು ಕುಟುಂಬದ ಜತೆಗೆ ಕಾಲ ಕಳೆಯುತ್ತಿದ್ದಾರೆ. ಈ ಕುರಿತು ಪೋಟೋಗಳನ್ನು ಶೇರ್ ಮಾಡಿರುವ ಅಲ್ಲು ಅರ್ಜುನ್ ಕೆಲ ಪೋಟೋಗಳನ್ನು ಇನ್ ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ. ಸದ್ಯ ಅಲ್ಲು ಅರ್ಜುನ್ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನವೊಂದರ ಸಿನಿಮಾದಲ್ಲಿ ನಟಿಸುತ್ತಿದ್ದು, ಚಿತ್ರೀಕರಣಕ್ಕೆ ಭಾಗಿಯಾಗಲಿದ್ದಾರೆ.

Arun Kumar

ಅನನ್ಯಾ ಪಾಂಡೆ ಈಗ ಫ್ಯಾಷನ್ ಬ್ರಾಂಡ್ ರಾಯಭಾರಿ!

Previous article

ರಜನಿ ಮುಂದಿನ ಸಿನಿಮಾ ಬಾಬ 2

Next article

You may also like

Comments

Leave a reply

Your email address will not be published. Required fields are marked *