Connect with us

cbn

ಅಂಬಿ ಜೊತೆ ಶಿವಣ್ಣ!

Published

on

ಅಂಬಿ ನಿಂಗೆ ವಯಸಾಯ್ತೋ ಚಿತ್ರವೀಗ ರಾಜ್ಯಾದ್ಯಂತ ಯಶಸ್ವೀ ಪ್ರದಶನ ಕಾಣುತ್ತಿದೆ. ಅಂಬರೀಶ್ ಅವರ ಸಹಜಾಭಿನಯ, ಇಡೀ ಚಿತ್ರವನ್ನು ರೀಮೇಕ್ ಎಂಬ ಭಾವವೇ ಕಾಡದಂತೆ ನಿರ್ದೇಶನ ಮಾಡಿರೋ ಗುರುದತ್ತ ಗಾಣಿಗರ ಕಸುಬುದಾರಿಕೆ… ಇವೆಲ್ಲವೂ ಸೇರಿ ಈ ಚಿತ್ರ ಹೌಸ್‌ಫುಲ್ ಪ್ರದರ್ಶನ ಕಾಣುವಂತೆ ಮಾಡಿದೆ. ಕನ್ನಡ ಚಿತ್ರರಂಗದ ತಾರೆಯರೂ ಕೂಡಾ ಅಂಬಿ ನಿಂಗೆ ವಯಸಾಯ್ತೋ ಚಿತ್ರವನ್ನು ವೀಕ್ಷಿಸಿ ಮುಕ್ತ ಕಂಠದಿಂದ ಮೆಚ್ಚಿಕೊಳ್ಳುತ್ತಿದ್ದಾರೆ.

ಇದೀಗ ತಮ್ಮ ಚಿತ್ರಗಳ ಚಿತ್ರೀಕರಣಕ್ಕೊಂದು ಬ್ರೇಕ್ ಕೊಟ್ಟು ಈ ಚಿತ್ರವನ್ನು ನೋಡಲು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮುಂದಾಗಿದ್ದಾರೆ. ಇಂದು ಮಧ್ಯಾಹ್ನ ೧.೩೦ಕ್ಕೆ ಶಿವಣ್ಣ ಒರಾಯನ್ ಮಾಲ್‌ನಲ್ಲಿ ಅಂಬಿ ನಿಂಗೆ ವಯಸಾಯ್ತೋ ಚಿತ್ರವನ್ನು ವೀಕ್ಷಿಸಲಿದ್ದಾರೆ. ಇವರ ಜೊತೆಗೆ ಕನ್ನಡದ ಯುವ ನಿರ್ದೇಶಕರಾದ ಸಂತೋಷ್ ಆನಂದ್‌ರಾಮ್, ತರುಣ್ ಸುಧೀರ್, ಪವನ್ ಒಡೆಯರ್ ಸೇರಿದಂತೆ ಕೆಸಿಸಿ ಸದಸ್ಯರೆಲ್ಲರೂ ಈ ಸಿನಿಮಾವನ್ನು ವೀಕ್ಷಿಸಲಿದ್ದಾರೆ.

ಈಗಾಗಲೇ ಕನ್ನಡದ ಬಹುತೇಕ ನಟ ನಟಿಯರು ಈ ಚಿತ್ರವನ್ನು ವೀಕ್ಷಿಸಿದ್ದಾರೆ. ಅಂಬರೀಶ್ ಅವರ ಸಹಜಾಭಿನಯಕ್ಕೆ ಮನ ಸೋತಿದ್ದಾರೆ. ರೀಮೇಕ್ ಬಗ್ಗೆ ಇರೋ ಭಾವನೆಗಳನ್ನು ಬುಡ ಮೇಲು ಮಾಡುವಂತೆ ಕಥೆಯನ್ನು ನೇಟಿವಿಟಿಗೆ ಒಗ್ಗಿಸಿಕೊಂಡು ದೃಶ್ಯ ಕಟ್ಟಿರುವ ಗುರುದತ್ ಬಗ್ಗೆಯೂ ಎಲ್ಲರಲ್ಲಿಯೂ ಮೆಚ್ಚುಗೆ ಇದೆ. ಈ ಮೂಲಕವೇ ಕನ್ನಡ ಚಿತ್ರರಂಗಕ್ಕೊಬ್ಬ ಪ್ರತಿಭಾವಂತ ಯುವ ನಿರ್ದೇಶಕನ ಆಗಮನವಾಗಿದೆ ಎಂಬ ಅಭಿಪ್ರಾಯಗಳೇ ಎಲ್ಲೆಡೆ ಕೇಳಿ ಬರುತ್ತಿವೆ.

ಒಟ್ಟಾರೆಯಾಗಿ ಅಂಬಿ ಈ ಚಿತ್ರದ ಮೂಲಕ ಮತ್ತೊಮ್ಮೆ ನಾಯಕನಾಗಿ ಪ್ರೇಕ್ಷಕರನ್ನು ಆವರಿಸಿಕೊಂಡಿದ್ದಾರೆ. ಕಿಚ್ಚಾ ಸುದೀಪ್ ತಮ್ಮೆಲ್ಲ ಕೆಲಸ ಕಾರ್ಯಗಳ ನಡುವೆಯೂ ಈ ಚಿತ್ರವನ್ನು ಬಲು ಆಸ್ಥೆಯಿಂದ ಪೊರೆದಿದ್ದರು. ನಿರ್ಮಾಣದ ಜೊತೆಗೆ ಜ್ಯೂನಿಯರ್ ಅಂಬಿಯಾಗಿಯೂ ನಟಿಸಿದ್ದರು. ಇಮೇಜುಗಳಾಚೆಗಿನ ಅವರ ನಟನೆಯೂ ಜನ ಮನ ಗೆದ್ದಿದೆ. ಈ ಮೂಲಕ ಗುರುದತ್ ಗಾಣಿಗ ಮೇಲೆ ಅವರಿಟ್ಟಿದ್ದ ನಂಬಿಕೆಯೂ ನಿಜವಾಗಿದೆ.

#

cbn

ರಾಜಣ್ಣನ ಹೆಮ್ಮೆಯ ಮಗ ರಾಘಣ್ಣ!

Published

on

ಜೀ ಕನ್ನಡದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಸ್ಟಾರ್ಟ್ ಆಗುವವರೆಗೂ ಒಂದು ರೀತಿಯದಾದರೆ ಆದಮೇಲೆ ಮತ್ತೊಂದು ರೀತಿ. ಪ್ರೇಕ್ಷಕರು ಇಂತಿಂತಹವರನ್ನು ಸಾಧಕರ ಸೀಟಿಗೆ ಕರೆಯಿರಿ ಎಂಬ ಬೇಡಿಕೆಯ ಪಟ್ಟಿ ದಿನೇ ದಿನೇ ಬೆಳೆಯುತ್ತಾ ಸಾಗುತ್ತಲೇ ಇರುತ್ತದೆ. ಅವರು ನಿರೀಕ್ಷಿಸಿದ ವ್ಯಕ್ತಿಯನ್ನು ಕರೆಯದ ಮಾತ್ರಕ್ಕೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಕುರಿತಾಗಿ ಇಲ್ಲಸಲ್ಲದ ಮಾತುಗಳನ್ನಾಡುವುದು  ಉತ್ಪ್ರೇಕ್ಷೆಯಲ್ಲವೇ.

ಇಷ್ಟೆಲ್ಲ ವಿಚಾರ ಈಗ ಯಾಕಪ್ಪ ಅಂದರೆ ವೀಕೆಂಡ್ ವಿತ್ ರಮೇಶ್ ಸೀಜನ್ 4ರ ಎರಡನೇ ಸಾಧಕರಾಗಿ ದೊಡ್ಮನೆ ಕುಡಿ ರಾಘವೇಂದ್ರ ರಾಜ್ ಕುಮಾರ್ ಅವರನ್ನು ಕರೆಸಲಾಗಿದ್ದು, ಶೂಟಿಂಗ್ ಸಹ ಮುಗಿದಿದೆ. ಮೇಲಾಗಿ ಕಾರ್ಯಕ್ರಮದ ಪ್ರೋಮೋ ಕೂಡ ವಾಹಿನಿಯಲ್ಲಿ ಪ್ರಸಾರವಾಗಲೂ ಪ್ರಾರಂಭವಾಗಿದೆ. ಈತನ್ಮಧ್ಯೆ ರಾಘಣ್ಣನವರನ್ನು ಸಾಧಕರ ಸೀಟಿನಲ್ಲಿ ಕೂರಿಸಿರುವುದನ್ನೇ ಪ್ರಮಾಧವೆಂಬಂತೆ ಬಿಂಬಿಸಲಾಗಿದ್ದು, ಅವರ ವಿರೋಧವಾಗಿ ಸಾಕಷ್ಟು ಮಿಶ್ರಪ್ರತಿಕ್ರಿಯೆಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಚರ್ಚೆಗೆ ಗ್ರಾಸವಾಗಿದೆ.

“ರಾಘಣ್ಣ ಅಂತಹ ಮಹಾನ್ ಸಾಧಕನೇನಲ್ಲ. ಮಾಡಿರುವುದು ಕೆಲವೇ ಚಿತ್ರಗಳಾಗಿದ್ದರೂ, ಅಣ್ಣಾವ್ರ ಮಗ ಅಂದ ಮಾತ್ರಕ್ಕೆ ಅವರನ್ನು ಸಾಧಕನೆಂದು ಪರಿಗಣಿಸುವುದು ಸರಿಯಲ್ಲ.”

“ಅವರ ಸಾಧನೆಯ ಪಟ್ಟಿಯೇನು ದೊಡ್ಡದಿಲ್ಲವಲ್ಲ”

“ಸೆಲೆಬ್ರೆಟಿಗಳು ಮಾತ್ರ ಸಾಧಕರ ಸೀಟಿನಲ್ಲಿ ಕೂರಲು ಯೋಗ್ಯರೇ”

“ಬರೀ ಸಿನಿಮಾ ನಿರ್ಮಾಣ ಮಾಡಿದ ಮಾತ್ರಕ್ಕೆ ಸಾಧಕನೆಂದು ಪರಿಗಣಿಸಬಹುದೇ”

ಈ ಎಲ್ಲ ಪ್ರಶ್ನೆಗಳು, ಗೊಂದಲಗಳನ್ನು ಗಮನಿಸಿದರೆ ಇವೆಲ್ಲವೂ ಚರ್ಚೆಗೆ ಯೋಗ್ಯವಾದವುಗಳೇ ಅಲ್ಲ. ಯಾಕೆಂದರೆ ರಾಘವೇಂದ್ರ ರಾಜ್ ಕುಮಾರ್ ಅವರು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಂತರದಿಂದ ಸಾಕಷ್ಟು ವರ್ಷಗಳ ಕಾಲ ಸಮಕಾಲೀನ ಹೀರೋಗಳಿಗೆ ಸೆಡ್ಡು ಹೊಡೆದವರು. ಅಲ್ಲದೇ ಶ್ರೀನಿವಾಸ ಕಲ್ಯಾಣದ ಮೂಲಕ ಬಾಲ ನಟನಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಅವರು ನಂಜುಂಡಿ ಕಲ್ಯಾಣ, ಚಿರಂಜೀವಿ ಸುಧಾಕರ, ಗಜಪತಿ ಗರ್ವಭಂಗ, ಅನುಕೂಲಕ್ಕೊಬ್ಬ ಗಂಡ, ಕಲ್ಯಾಣ ಮಂಟಪ, ಭರ್ಜರಿ ಗಂಡು, ಅನುರಾಗದ ಅಲೆಗಳು, ಆಟ ಹುಡುಗಾಟ, ಗೆಲುವಿನ ಸರದಾರ, ಟುವ್ವಿ, ಟುವ್ವಿ, ಟುವ್ವಿ, ಸ್ವಸ್ತಿಕ್ ಸಿನಿಮಾಗಳಲ್ಲಿ ನಟಿಸಿ ತನ್ನದೇ ಆದ ವೈಶಿಷ್ಟ್ಯತೆಯನ್ನು ಕಾಯ್ದುಕೊಂಡಿದ್ದಾರೆ. ಮೇಲಾಗಿ ತಮ್ಮ ಮೊದಲನೇ ಚಿತ್ರದಿಂದಲೇ ಅಣ್ಣಾವ್ರಂತೆ ಗಾಯನದಲ್ಲೂ ಸೈ ಎನಿಸಿಕೊಂಡಿದ್ದಾರೆ. ಇನ್ನು ನೃತ್ಯದ ವಿಚಾರದಲ್ಲೂ ಅಣ್ಣ ತಮ್ಮನಿಗೆ ಸಾಥ್ ಕೊಡುವ ಮಟ್ಟಿಗೆ ಸಬಲರಾಗಿದ್ದಾರೆ. ಡಾ. ರಾಜ್ ಕುಮಾರ್ ಅವರು ಸಿನಿಮಾಗಳಿಂದ ದೂರ ಉಳಿದ ಮೇಲಂತೂ ಅವರಿಗೆ ಊರು ಗೋಲಾಗಿ, ಅವರ ನಂತರದಲ್ಲಿ ತಾಯಿ ಪಾರ್ವತಮ್ಮನವರಿಗೆ ಹೆಗಲುಕೊಟ್ಟು, ವಜ್ರೇಶ್ವರಿ ಎನ್ನುವ ಬೃಹತ್ ಸಂಸ್ಥೆಯೊಂದನ್ನು ನಡೆಸುವುದೇನು ಸುಲಭಸಾಧ್ಯವಾದ ಮಾತಲ್ಲ. ವಜ್ರೇಶ್ವರಿ ಕಂಬೈನ್ಸ್ ಎಂದಾಕ್ಷಣ ಕನ್ನಡಿಗರ ಮುಖವರಳಲು ಕಾರಣಕರ್ತರಾದವರ ಪೈಕಿ ರಾಘಣ್ಣ ಕೂಡ ಒಬ್ಬರು. ನಿರ್ಮಾಪಕರಾಗಿಯೂ ತಮ್ನನ್ನು ಗುರುತಿಸಿಕೊಂಡಿರುವ ರಾಘವೇಂದ್ರ ರಾಜ್ ಕುಮಾರ್ ಶೃತಿ ಸೇರಿದಾಗ, ಜಾಕಿ, ಅಣ್ಣಾ ಬಾಂಡ್, ಯಾರೇ ಕೂಗಾಡಲಿ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

 

ಇವೆಲ್ಲದರ ಜತೆ ಜತೆಗೆ ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ರಾಜಣ್ಣನ ಸ್ಥಾನ ತುಂಬಿ ಪುನೀತ್ ರಾಜ್ ಕುಮಾರ್ ಅವರ ಪ್ರತಿ ಹೆಜ್ಜೆಯಲ್ಲೂ ಜತೆಯಾಗಿ ಪುನೀತ್ ರಾಜ್ ಕುಮಾರ್ ಅವರ ಸಕ್ಸಸ್ ಗೆ ಮೂಲ ಪ್ರೇರಣೆ ರಾಘವೇಂದ್ರ ರಾಜ್ ಕುಮಾರ್ ಅವರಲ್ಲವೇ.

ಇನ್ನು ಆಕಸ್ಮಿಕವಾಗಿ ಆದಂತಹ ದುರ್ಘಟನೆ ರಾಘಣ್ಣನವರ ಬದುಕನ್ನೇ ಕಿತ್ತು ತಿನ್ನುವುದೆಂಬ ದಿಗಿಲಿನಲ್ಲಿರುವಾಗ ದೇವರ ದಯೆ, ರಾಘಣ್ಣನ ಪುಣ್ಯ ಅವರನ್ನು ಪುನಃ ಬದುಕಿ ಬಣ್ಣದ ಲೋಕದ ಕಡೆ ಮುಖ ಮಾಡುವಂತೆ ಮಾಡಿದ್ದು ಯಾರು ತಾನೆ ಮರೆಯಬಲ್ಲರು.

ದುಡಿಯಲು ಶಕ್ತರಾಗಿದ್ದರೂ ಕೈಲಾಗದವರಂತೆ ಮೂಲೆಗೆ ಕೂರುವ, ನಿವೃತ್ತಿಯನ್ನು ಪಡೆಯಲು ಹವಣಿಸುವ ಜನರ ಮಧ್ಯೆ ತನ್ನ ನೋವನ್ನು ನುಂಗಿ, ತನಗಾಗುತ್ತಿರುವ ಸಂಕಟವನ್ನು ಮರೆಮಾಚಿ ಪುನಃ ನಟನೆಯತ್ತ ಮುಖ ಮಾಡಿ ಈಗಾಗಲೇ ಅಮ್ಮನ ಮನೆ, ತ್ರಯಂಬಕಂ ಸಿನಿಮಾಗಳಲ್ಲಿ ನಟಿಸಿ, ಪೊಗರು, ಆಡಿಸಿದಾತ, ಅಪ್ಪನ ಅಂಗಿ ಸಿನಿಮಾಗಳಲ್ಲಿ ನಟಿಸಲು ಅಣಿಯಾಗುತ್ತಿದ್ದಾರೆ.

ಮನರಂಜನೆಯ ಮೂಲಕ ಸಮಾಜಕ್ಕೆ ಆರೋಗ್ಯಕರ ವಾತಾವರಣ ನಿರ್ಮಾಣವಾಗಲು ಸಹಕರಿಸುವ ಸೆಲೆಬ್ರೆಟಿಗಳು ಸಾಧಕರೇ. ನೋಡುಗರ ಕಣ್ಣಿಗೆ ಮುದ ನೀಡಲು ಎಂತಹ ದುಸ್ಸಾಹಸಕ್ಕೂ ಕೈ ಹಾಕಿ, ಕಾಲು ಮುರಿದುಕೊಂಡು, ಕೈ ಮುರಿದುಕೊಂಡು, ಕೊನೆ ಕೊನೆಗೆ ಪ್ರಾಣವನ್ನೇ ಬಿಟ್ಟು ತಮ್ಮ ಸೇವೆಯನ್ನು ನೀಡುವ ಸಿನಿ ತಾರೆಯರು ಸೆಲೆಬ್ರೆಟಿಗಳಲ್ಲದೇ ಮತ್ತೇನು.

ಇನ್ನು ಸಿನಿಮಾ ನಿರ್ಮಾಣ ಮಾಡಿದರಷ್ಟೇ ಸಾಧಕರೇ. ಪರೋಕ್ಷವಾಗಿ ಹೌದು. ನಿರ್ಮಾಣ ಕಾರ್ಯ ಟಿಕೇಟ್ ತೆಗೆದುಕೊಂಡು ಥಿಯೇಟರ್ ನಲ್ಲಿ ಕುಳಿತು ಸೀಟಿ ಹೊಡೆದಷ್ಟು ಸುಲಭವಲ್ಲವಲ್ಲ. ವೀಕ್ಷಕನ ಖುಷಿಗೆ ಬಲಕೊಡಲು ಹಣವನ್ನು ನೀರಿನಂತೆ ವ್ಯಯಿಸುವ ಹಾಗೂ ಸಾವಿರಾರು ತಂತ್ರಜ್ಞರಿಗೆ ಉದ್ಯೋಗದಾತರಾಗಿರುವ ನಿರ್ಮಾಪಕರು ಸಾಧಕರೇ ಅಲ್ಲವೇ. ಅವರೇನಾದರೂ ನಿರ್ಮಾಣ ಕಾರ್ಯವನ್ನೇ ಸ್ಥಗಿತಗೊಳಿಸಿದ್ದೇ ಆದಲ್ಲಿ ಬಣ್ಣವನ್ನೇ ನಂಬಿ ಬದುಕುತ್ತಿರುವ ಸಾವಿರಾರು ಮಂದಿಯ ಬದುಕು ಮೂರಾಬಟ್ಟೆಯಾಗುವುದರಲ್ಲಿ ಸಂಶಯವೇ ಇಲ್ಲ.

ರಾಜಕುಮಾರ್ ಅವರು ಸದಾ ಅವರಿಗೆ ಏನೂ ಮಾಡಲ್ಲ, ಏನೂ ಆಗಲ್ಲ ಅಂತ ಬೈಯ್ಯುತ್ತಿದ್ದರಂತೆ. ಅದನ್ನು ಹುಸಿ ಮಾಡಲು ಡಾ. ರಾಜ್ ಕುಮಾರ್ ಸಿವಿಲ್ ಸರ್ವೀಸ್ ಅಕಾಡೆಮಿಯಂತಹ ಬೃಹತ್ ಸಂಸ್ಥೆಯೊಂದನ್ನು ಸ್ಥಾಪಿಸಿ, ಅದಕ್ಕೆ ತಮ್ಮ ಕಿರಿಯ ಮಗ ಯುವ ರಾಜಕುಮಾರ್ ಅವರನ್ನೂ ವಾರಸುದಾರನನ್ನಾಗಿ ಮಾಡಿ, ಸಾವಿರಾರು ಐಎಎಸ್ ಆಕಾಂಕ್ಷಿಗಳ ಕನಸಿಗೆ ಬಲಕೊಡುವ ಕೆಲಸ ಮಾಡುತ್ತಿರುವುದು ಸಾರ್ಥಕತೆಯ ಕೆಲಸವಲ್ಲದೇ ಮತ್ತೇನು. ಜತೆಗೆ ಆರ್ಥಿಕವಾಗಿ ತೀರ ಹಿಂದುಳಿದ ವಿದ್ಯಾರ್ಥಿಗಳಿಗೂ ಅವಕಾಶ ನೀಡುವ ಸಲುವಾಗಿ ವಿದ್ಯಾರ್ಥಿ ವೇತನದ ಪರೀಕ್ಷೆಯನ್ನು ಏರ್ಪಡಿಸಿ ಸಾಕಷ್ಟು ವಿದ್ಯಾರ್ಥಿಗಳಿಗೆ ಉಚಿತವಾಗಿ ಐಎಎಸ್ ಟ್ರೇನಿಂಗ್ ನೀಡುವ ಹೃದಯವಂತಿಕೆ ರಾಘಣ್ಣನವರದ್ದು. ಇಷ್ಟು ಸಾಕಲ್ಲವೇ ಅವರು ಸಾಧಕರ ಸೀಟಿನಲ್ಲಿ ರಾಜಗಾಂಭೀರ್ಯದಿಂದ ವೀಕ್ ಎಂಡ್ ವಿತ್ ರಮೇಶ್ ಸೀಟ್ ನಲ್ಲಿ ಆಸೀನರಾಗಲು.

ಕೆಲವು ವ್ಯಕ್ತಿಗಳಿಗಷ್ಟೇ ವೀಕೆಂಡ್ ವಿತ್ ರಮೇಶ್ ಸೀಟಿನಲ್ಲಿ ಕೂತಾಗ ಆ ಸೀಟಿನ ಮೌಲ್ಯವನ್ನು ಹೆಚ್ಚಿಸುವಂತಹ ವ್ಯಕ್ತಿತ್ವವಿರುತ್ತದೆ. ಅಂತಹ ಮೇರು ವ್ಯಕ್ತಿತ್ವಗಳಲ್ಲಿ ರಾಘಣ್ಣನವರದ್ದು ಒಂದೂ ಎಂಬುದನ್ನು ಟೈಮ್ ಪಾಸಿಗೆ ಕಾಲೆಳೆಯುವುದನ್ನೇ ಕೆಲಸವೆಂದುಕೊಂಡವರು ಮನವರಿಕೆ ಮಾಡಿಕೊಳ್ಳಬೇಕಿದೆ. ಇದೇ ಶನಿವಾರ ಮತ್ತು ಭಾನುವಾರ ವೀಕೆಂಡ್ ವಿತ್ ರಮೇಶ್ ಸಾಧಕರ ಸೀಟಿನಲ್ಲಿ ರಾಜಣ್ಣನ ಹೆಮ್ಮೆಯ ಮಗ ರಾಘಣ್ಣನ ಎಪಿಸೋಡನ್ನು ನೋಡುವುದನ್ನು ಮರೆಯಬೇಡಿ..

Continue Reading

cbn

ಮೆಲೋಡಿ ಡೈರೆಕ್ಟರ್ ನಂಜುಂಡ ವಿಧಿವಶ!

Published

on

ಅನಾರೋಗ್ಯಕ್ಕಾಗಿ ಆಸ್ಪತ್ರೆಗೆ ದಾಖಲಾದ ಪ್ರಸಿದ್ಧ ಬರಹಗಾರ-ನಿರ್ದೇಶಕ ಕೆ.ನಂಜುಂಡ ನಿನ್ನೆ ಬೆಂಗಳೂರಿನಲ್ಲಿ ನಿಧನರಾದರು.

ಕೆ.ನಂಜುಂಡ ಅವರು 90 ರ ದಶಕದಲ್ಲಿ ಕನ್ನಡ ಚಲನಚಿತ್ರೋದ್ಯಮಕ್ಕೆ ಬಂದವರು. ಸಹಾಯಕ ನಿರ್ದೇಶಕರಾಗಿ ಅನೇಕ ಚಲನಚಿತ್ರಗಳಲ್ಲಿ ಕೆಲಸ ಮಾಡಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದ ಅವರು ‘ಸರ್ವರ್ ಸೋಮಣ್ಣ’, ‘ಪೊಲೀಸ್ ಪವರ್’, ‘ಓ ಮಲ್ಲಿಗೆ, ‘ಮಾಂಗಲ್ಯಂ ತಂತು ನಾನೇನ’ ಮುಂತಾದ ಹಿಟ್ ಚಿತ್ರಗಳಿಗೆ ಸಂಭಾಷಣೆಯನ್ನು ಬರೆದರು.  ಅಲ್ಲದೇ ಅವರು 1998 ರಲ್ಲಿ ಬಿಡುಗಡೆಯಾದ ‘ಕನಸಲೂ ನೀನೆ ಮನಸಲೂ ನೀನೆ’ ಚಿತ್ರದೊಂದಿಗೆ ಸ್ವತಂತ್ರ ನಿರ್ದೇಶಕರಾಗಿದ್ದರು. ಆದಾಗ್ಯೂ, ಚಿತ್ರವು ಗಲ್ಲಾ ಪೆಟ್ಟಿಗೆಯಲ್ಲಿ ಅಷ್ಟೇನೂ ದಾಖಲೆ ಬರೆಯಲಿಲ್ಲ. ನಂತರ ನಂಜುಡ ಅವರು ಮತ್ತೊಂದು ಚಿತ್ರವನ್ನು ನಿರ್ದೇಶಿಸಲು ಬರೋಬ್ಬರಿ 14 ವರ್ಷ ತೆಗೆದುಕೊಂಡರು. ‘ಕನಸಲೂ ನೀನೆ ಮನಸಲೂ ನೀನೆ’ ನಂತರ ಕೆಲವು ವರ್ಷಗಳ ಹಿಂದೆ ಬಿಡುಗಡೆಯಾದ ಮೆಲೋಡಿ ಎಂಬ ಮತ್ತೊಂದು ಚಿತ್ರವನ್ನು ನಿರ್ದೇಶಿಸಿದರು.

‘ಮೆಲೋಡಿ’ ನಂತರ, ನಂಜುಂಡ ಅವರು ಕಳೆದ ಕೆಲವು ವರ್ಷಗಳಿಂದ ಬಹುತೇಕ ಚಿತ್ರಗಳಿಗೆ ಸಂಭಾಷಣೆ ಬರೆದಿದ್ದಾರೆ. ಸುಮಾರು ದಿನಗಳಿಂದ ಆಸ್ಪತ್ರೆಯಲ್ಲಿದ್ದ ನಂಜುಂಡ ಅವರು ಬಹುಅಂಗಾಂಗ ವೈಫಲ್ಯದಿಂದ ನಿಧನರಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು, ಅವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ಕರುಣಿಸಲೆಂದು ಭಗವಂತನನ್ನು ಪ್ರಾರ್ಥಿಸೋಣ.

 

Continue Reading

cbn

ಸಾರ್ಥಕತೆಯ ಸರದಾರ

Published

on

 • ಡಾ|| ರಾಜ್‍ಕುಮಾರ್ ನಟಿಸಿರುವ ಚಿತ್ರಗಳು:-

 

 • ಜೀವನ ನಾಟಕ [ಬಾಲ ನಟ]
 • ಶ್ರೀಕೃಷ್ಣಲೀಲ  [ಬಾಲ ನಟ]
 • ಭಕ್ತ ಪ್ರಹ್ಲಾದ [ಬಾಲ ನಟ]
 • ಶ್ರೀ ಶ್ರೀನಿವಾಸ ಕಲ್ಯಾಣ [ಬಾಲ ನಟ]
 • ಬೇಡರ ಕಣ್ಣಪ್ಪ
 • ಸೋದರಿ
 • ಭಕ್ತ ವಿಜಯ
 • ಹರಿಭಕ್ತ
 • ಓಹಿಲೇಶ್ವರ
 • ರಾಯರ ಸೊಸೆ
 • ಸತಿ ನಳಾಯಿನಿ
 • ಭೂ ಕೈಲಾಸ
 • ಶ್ರೀಕೃಷ್ಣಗಾರುಡಿ
 • ಅಣ್ಣ ತಂಗಿ
 • ಜಗಜ್ಯೋತಿ ಬಸವೇಶ್ವರ [ಗೌರವ ನಟ]
 • ಧರ್ಮ ವಿಜಯ
 • ಮಹಿಷಾಸುರ ಮರ್ಧಿನಿ
 • ಅಬ್ಬಾ ಆ ಹುಡುಗಿ
 • ರಣಧೀರ ಕಂಠೀರವ
 • ರಾಣಿ ಹೊನ್ನಮ್ಮ
 • ಆಶಾ ಸುಂದರಿ
 • ದಶಾವತಾರ
 • ಭಕ್ತ ಕನಕದಾಸ
 • ಶ್ರೀಶೈಲ ಮಹಾತ್ಮೆ
 • ಕಿತ್ತೂರು ಚೆನ್ನಮ್ಮ [ಗೌರವ ನಟ]
 • ಕಣ್ತೆರೆದು ನೋಡು
 • ಕೈವಾರ ಮಹಾತ್ಮೆ
 • ಭಕ್ತ ಚೇತ
 • ನಾಗಾರ್ಜುನ
 • ಗಾಳಿಗೋಪುರ
 • ಭೂದಾನ  [ಕಲ್ಯಾಣ್ ಕುಮಾರ್  + ಉದಯ್ ಕುಮಾರ್]
 • ಸ್ವರ್ಣಗೌರಿ
 • ದೇವಸುಂದರಿ
 • ಕರುಣೆಯೇ ಕುಟುಂಬದ ಕಣ್ಣು [ಕೃಷ್ಣಮೂರ್ತಿ ಪುರಾಣಿಕರ ಧರ್ಮದೇವತೆ ಕಾದಂಬರಿ]
 • ಮಹಾತ್ಮ ಕಬೀರ್
 • ವಿಧಿ ವಿಲಾಸ
 • ತೇಜಸ್ವಿನಿ
 • ನಂದಾದೀಪ
 • ಸಾಕು ಮಗಳು
 • ಕನ್ಯಾರತ್ನ
 • ಗೌರಿ
 • ಜೀವನ ತರಂಗ
 • ಮಲ್ಲಿ ಮದುವೆ
 • ಕುಲವಧು
 • ಕಲಿತರೂ ಹೆಣ್ಣೆ
 • ವೀರಕೇಸರಿ [ಭಾಗಶ: ಕಲರ್]
 • ವಾಲ್ಮೀಕಿ
 • ಮನ ಮೆಚ್ಚಿದ ಮಡದಿ
 • ಚಂದ್ರಕುಮಾರ
 • ಸಂತ ತುಕಾರಾಂ
 • ಶ್ರೀರಾಮಾಂಜನೇಯ ಯುದ್ಧ
 • ಸತಿ ಶಕ್ತಿ [ದ್ವಿಪಾತ್ರ]
 • ನವಕೋಟಿ ನಾರಾಯಣ
 • ಚಂದವಳ್ಳಿಯ ತೋಟ
 • ಶಿವರಾತ್ರಿ ಮಹಾತ್ಮೆ
 • ಅನ್ನಪೂರ್ಣ
 • ತುಂಬಿದ ಕೊಡ
 • ಶಿವಗಂಗೆ ಮಹಾತ್ಮೆ
 • ಮುರಿಯದ ಮನೆ [ವಿಕಲಾಂಗನ ಪಾತ್ರ]
 • ಪ್ರತಿಜ್ಞೆ
 • ನಾಂದಿ [ಅಂಧಳಾ + ಮೂಕನಾ ಕತೆ]
 • ನಾಗಪೂಜ
 • ಚಂದ್ರಹಾಸ
 • ಸರ್ವಜ್ಞಮೂರ್ತಿ
 • ವಾತ್ಸಲ್ಯ
 • ಮಹಾಸತಿ ಅನುಸೂಯ
 • ಇದೇ ಮಹಾ ಸುದಿನ
 • ಬೆಟ್ಟದ ಹುಲಿ
 • ಸತಿ ಸಾವಿತ್ರಿ
 • ಮದುವೆ ಮಾಡಿ ನೋಡು
 • ಪತಿವ್ರತ
 • ಮಂತ್ರಾಲಯ ಮಹಾತ್ಮೆ
 • ಕಠಾರಿ ವೀರ
 • ಬಾಲ ನಾಗಮ್ಮ
 • ತೂಗುದೀಪ
 • ಪ್ರೇಮ ಮಯಿ
 • ಕಿಲಾಡಿ ರಂಗ [ದ್ವಿಪಾತ್ರ]
 • ಮಧು ಮಾಲತಿ
 • ಎಮ್ಮೆ ತಮ್ಮಣ್ಣ [ದ್ವಿಪಾತ್ರ]
 • ಮೋಹಿನಿ ಭಸ್ಮಾಸುರ
 • ಶ್ರೀಕನ್ಯಕಾ ಪರಮೇಶ್ವರಿ ಕಥೆ
 • ಸಂಧ್ಯಾ ರಾಗ
 • ಪಾರ್ವತಿ ಕಲ್ಯಾಣ
 • ಸತಿ ಸುಕನ್ಯ
 • ಗಂಗೆ ಗೌರಿ
 • ರಾಜಶೇಖರ [ದ್ವಿಪಾತ್ರ]
 • ಲಗ್ನಪತ್ರಿಕೆ [ಪ್ರಥಮ ಹಾಸ್ಯಮಯ ಚಿತ್ರ]
 • ರಾಜದುರ್ಗದ ರಹಸ್ಯ [ದ್ವಿಪಾತ್ರ]
 • ದೇವರ ಗೆದ್ದ ಮಾನವ
 • ಬೀದಿ ಬಸವಣ್ಣ
 • ಮನಸ್ಸಿದ್ದರೆ ಮಾರ್ಗ
 • ಬಂಗಾರದ ಹೂವು [ಕುಷ್ಠರೋಗಿ ಬಗ್ಗೆ]
 • ಚಕ್ರತೀರ್ಥ  [ತ.ರಾ.ಸು.ಕಥೆ]
 • ಇಮ್ಮಡಿ ಪುಲಿಕೇಶಿ
 • ಜೇಡರ ಬಲೆ
 • ಗಾಂಧಿನಗರ
 • ಮಹಾಸತಿ ಅರುಂಧತಿ
 • ಮನಸ್ಸಾಕ್ಷಿ
 • ಸರ್ವಮಂಗಳ
 • ಬೆಂಗಳೂರು ಮೈಲ್
 • ಭಾಗ್ಯದೇವತೆ
 • ಹಣ್ಣೆಲೆ ಚಿಗುರಿದಾಗ [ಗೌರವ ನಟ]
 •  ಭಾಗ್ಯದ ಬಾಗಿಲು
 •  [ಎ] ನಟಸಾರ್ವಭೌಮ
 •  ರೌಡಿ ರಂಗಣ್ಣ [ಟೈ|| ಪ್ರಭಾಕರ್ ಎಂಟ್ರಿ]
 • ಧೂಮಕೇತು
 •  ಅಮ್ಮ
 •  ಸಿಂಹಸ್ವಪ್ನ  [ಟಿ.ಎಂ.ಸೌಂದರ್‍ರಾಜನ್ ಹಾಡಿದ್ದಾರೆ]
 • ಗೋವಾದಲ್ಲಿ ಸಿ.ಐ.ಡಿ.999
 • ಮಣ್ಣಿನ ಮಗ
 • ಮಾರ್ಗದರ್ಶಿ [ಕುವೆಂಪು ಗೀತೆ ಇದೆ]
 • ಗಂಡೊಂದು ಹೆಣ್ಣಾರು
 • ಮಲ್ಲಮ್ಮನ ಪವಾಡ
 • ಚೂರಿ ಚಿಕ್ಕಣ್ಣ
 • ಪುನರ್ಜನ್ಮ  [ತ.ರಾ.ಸು.ಕಥೆ]
 • ಭಲೇ ರಾಜ
 • ಉಯ್ಯಾಲೆ
 • ಚಿಕ್ಕಮ್ಮ  [ಗೌರವ ನಟ]
 • ಮೇಯರ್ ಮುತ್ತಣ್ಣ
 • ಆಪರೇಶನ್ ಜಾಕ್‍ಪಾಟ್‍ನಲ್ಲಿ ಸಿ.ಐ.ಡಿ. 999
 • ಶ್ರೀಕೃಷ್ಣದೇವರಾಯ
 • ಕರುಳಿನ ಕರೆ  [ಪುಟ್ಟಣ್ಣ ಕಣಗಾಲ್ ನಿರ್ದೇಶನ]
 • ನಾಡಿನ ಭಾಗ್ಯ  [ಗೌರವ ನಟ]
 • ಹಸಿರು ತೋರಣ
 • ಭೂಪತಿರಂಗ
 • ಮಿಸ್ಟರ್ ರಾಜ್‍ಕುಮಾರ್ [ಕಲರ್]
 • ಭಲೇ ಜೋಡಿ [ದ್ವಿಪಾತ್ರ]
 • ಸಿ.ಐ.ಡಿ. ರಾಜಣ್ಣ
 • ಬಾಳು ಬೆಳಗಿತು [ದ್ವಿಪಾತ್ರ]
 • ನನ್ನ ತಮ್ಮ
 • ದೇವರ ಮಕ್ಕಳು
 • ಪರೋಪಕಾರಿ
 • ಕಸ್ತೂರಿ ನಿವಾಸ  [ರಾಜಾಶಂಕರ್ ಜೊತೆ]
 • ಬಾಳ ಬಂಧನ
 • ಕುಲಗೌರವ [ತ್ರಿಪಾತ್ರ]
 • ನಮ್ಮ ಸಂಸಾರ
 • ಕಾಸಿದ್ರೆ ಕೈಲಾಸ
 • ತಾಯಿದೇವರು
 • ಪ್ರತಿಧ್ವನಿ  [ಮೆಕ್ಸಿಕನ್ ಕೌಬಾಯ್ ಪಾತ್ರ] [ರಾಜೇಶ್ ಜೊತೆ]
 • ನ್ಯಾಯವೆ ದೇವರು
 • ಶ್ರೀಕೃಷ್ಣ ರುಕ್ಮಿಣಿ ಸತ್ಯಭಾಮ
 • ಜನ್ಮ ರಹಸ್ಯ
 • ಸಿಪಾಯಿ ರಾಮು [ಚಂಬಲ್ ಕಣಿವೆ]
 • ಬಾಲಿವುಡ್ ಮಧುಮತಿ+ ರುಮ್ಕಿ ಡ್ಯಾನ್ಸ್
 • ಬಂಗಾರದ ಮನುಷ್ಯ [2ವರ್ಷಪ್ರದರ್ಶನ]
 • ಹೃದಯ ಸಂಗಮ
 • ಕ್ರಾಂತಿವೀರ
 • ಭಲೇ ಹುಚ್ಚ  [ಹೆಲೆನ್ ಡ್ಯಾನ್ಸ್]
 • ನಂದಗೋಕುಲ
 • ಜಗ ಮೆಚ್ಚಿದ ಮಗ [ರಾಜಸುಲೋಚನ ನೃತ್ಯ]
 • ದೇವರು ಕೊಟ್ಟ ತಂಗಿ
 • ಬಿಡುಗಡೆ [ಪುನ: ದೃಶ್ಯಗಳನ್ನು ಸೇರಿಸಲಾಯ್ತು]
 • ಸ್ವಯಂವರ
 • ದೂರದ ಬೆಟ್ಟ [ಭಾಗಶ: ವರ್ಣ]
 • ಗಂಧದ ಗುಡಿ [ಕಲರ್]
 • ಮೂರೂವರೆ ವಜ್ರಗಳು
 • ಬಂಗಾರದ ಪಂಜರ  [ಬಿಂದು ಡ್ಯಾನ್ಸ್]
 • ಎರಡು ಕನಸು
 • ಸಂಪತ್ತಿಗೆ ಸವಾಲ್ [ಉ.ಕರ್ನಾಟಕದ ನಾಟಕಾಧಾರಿತ]
 • ಭಕ್ತ ಕುಂಬಾರ [ಶ್ರೀದೇವಿ ಬಾಲನಟಿ]
 • ಶ್ರೀನಿವಾಸ ಕಲ್ಯಾಣ
 • ದಾರಿ ತಪ್ಪಿದ ಮಗ  [ದ್ವಿಪಾತ್ರ]
 • ಮಯೂರ
 • ತ್ರಿಮೂರ್ತಿ
 • ಪ್ರೇಮದ ಕಾಣಿಕೆ [ಪುತ್ರಿ ಪೂರ್ಣಿಮಾ ಎಂಟ್ರಿ]
 • ಬಹದ್ದೂರ್ ಗಂಡು
 • ರಾಜ ನನ್ನ ರಾಜ
 • ನಾ ನಿನ್ನ ಮರೆಯಲಾರೆ
 • ಬಡವರ ಬಂಧು
 • ಬಭ್ರುವಾಹನ [ದ್ವಿಪಾತ್ರ]
 • ಭಾಗ್ಯವಂತರು
 • ಗಿರಿಕನ್ಯೆ
 • ಸನಾದಿ ಅಪ್ಪಣ್ಣ
 • ಒಲವು ಗೆಲುವು
 • ಶಂಕರ್ ಗುರು [ತ್ರಿಪಾತ್ರ]
 • ಸಾಕ್ಷಾತ್ಕಾರ [ಪೃಥ್ವಿರಾಜ್‍ಕಪೂರ್ ನಟಿಸಿದ್ದಾರೆ]
 • ಆಪರೇಶನ್‍ಡೈಮಂಡ್‍ರ್ಯಾಕೆಟ್‍ನಲ್ಲಿ ಸಿ.ಐ.ಡಿ.999
 • ತಾಯಿಗೆ ತಕ್ಕ ಮಗ
 • ಹುಲಿಯ ಹಾಲಿನ ಮೇವು
 • ನಾನೊಬ್ಬ ಕಳ್ಳ  [ದ್ವಿಪಾತ್ರ]
 • ರವಿ ಚಂದ್ರ [ದ್ವಿಪಾತ್ರ]
 • ವಸಂತ ಗೀತ
 • ಹಾವಿನ ಹೆಡೆ
 • ನೀ ನನ್ನ ಗೆಲ್ಲಲಾರೆ
 • ಕೆರಳಿದ ಸಿಂಹ
 • ಹೊಸ ಬೆಳಕು
 • ಹಾಲು ಜೇನು
 • ಚಲಿಸುವ ಮೋಡಗಳು
 • ಕವಿರತ್ನ ಕಾಳಿದಾಸ
 • ಕಾಮನ ಬಿಲ್ಲು [ಅನಂತ್‍ನಾಗ್ ಜೊತೆ]
 • ಭಕ್ತ ಪ್ರಹ್ಲಾದ
 • ಎರಡು ನಕ್ಷತ್ರಗಳು [ಪುನೀತ್ ದ್ವಿಪಾತ್ರ]
 • ಸಮಯದ ಗೊಂಬೆ
 • ಶ್ರಾವಣ ಬಂತು
 • ಯಾರಿವನು?
 • ಅಪೂರ್ವ ಸಂಗಮ [ಶಂಕರ್‍ನಾಗ್ ಜೊತೆ]
 • ಅದೇ ಕಣ್ಣು [ದ್ವಿಪಾತ್ರ]
 • ಜ್ವಾಲಾಮುಖಿ
 • ಧ್ರುವತಾರೆ
 • ಭಾಗ್ಯದ ಲಕ್ಷ್ಮಿ ಬಾರಮ್ಮ
 • ಅನುರಾಗ ಅರಳಿತು
 • ಗುರಿ
 • ಶೃತಿ ಸೇರಿದಾಗ
 • ಒಂದು ಮುತ್ತಿನ ಕಥೆ
 • ದೇವತಾ ಮನುಷ್ಯ
 • ಪರಶುರಾಮ
 • ಒಡಹುಟ್ಟಿದವರು [ಅಂಬರೀಷ್ ಜೊತೆ]
 • ಜೀವನ ಚೈತ್ರ
 • ಆಕಸ್ಮಿಕ
 • ಶಬ್ಧವೇದಿ

Continue Reading

Trending

Copyright © 2018 Cinibuzz