Connect with us

ಅಭಿಮಾನಿ ದೇವ್ರು

ಚಾಲೆಂಜಿಂಗ್ ಸ್ಟಾರ್ ಈಗ ಕಾರ್ ರೇಸರ್!

Published

on

ಒಂದರ ಹಿಂದೊಂದರಂತೆ ಒಪ್ಪಿಕೊಳ್ಳುತ್ತಿರೋ ಚಿತ್ರಗಳು, ಬಿಡುವಿರದ ಚಿತ್ರೀಕರಣ… ಇದೆಲ್ಲದರಾಚೆಗೆ ಬೆರಗಾಗಿಸುವಂಥಾ ಹವ್ಯಾಸಗಳ ಮೂಲಕವೂ ಸುದ್ದಿಯಾಗುವವರು ಚಾಲೆಂಜಿಂಗ್ ಸ್ಟಾರ್ ದರ್ಶನ್. ಅವರಿಗಿರೋ ಪ್ರಾಣಿ ಪ್ರೀತಿ, ಕಾರುಗಳ ಕ್ರೇಜ಼್ ಬಗ್ಗೆ ಅಭಿಮಾನಿಗಳಿಗೆಲ್ಲ ಗೊತ್ತಿರೋ ವಿಚಾರವೇ. ಆದರೆ ದರ್ಶನ್ ಅವರು ಕಾರ್ ರೇಸರ್ ಕೂಡಾ ಹೌದಾ…? ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರೋ ರೋಮಾಂಚಕ ಕಾರ್ ರೇಸಿಂಗ್ ವೀಡಿಯೋ ಒಂದು ಅಂಥಾ ಪ್ರಶ್ನೆಯನ್ನೂ ಹುಟ್ಟಿಸಿದೆ!

ಈ ವೀಡಿಯೋದಲ್ಲಿ ಪಳಗಿದ ರೇಸರುಗಳೇ ಥಂಡಾ ಹೊಡೆಯುವಂತೆ ದರ್ಶನ್ ರೇಸ್ ಟ್ರ್ಯಾಕಿನಲ್ಲಿ ಕಾರ್ ಓಡಿಸುವ ದೃಷ್ಯಾವಳಿಗಳಿವೆ. ಇದು ಯಾವುದಾದರೂ ಚಿತ್ರದ ಶೂಟಿಂಗಿಗಾಗಿ ಮಾಡಿರೋ ರೇಸಾ? ಸುಮ್ಮನೆ ಜಾಲಿ ಮೂಡಿನಲ್ಲಿ ದರ್ಶನ್ ಕಾರು ಚಲಾಯಿಸಿದ್ದಾರಾ ಅಂತೆಲ್ಲ ಪ್ರಶ್ನೆಗಳನ್ನಿಟ್ಟುಕೊಂಡು ಹೊರಟರೆ ಮತ್ತೊಂದು ಮಜಲಿನ ಉತ್ತರಗಳು ಹೊರ ಬೀಳುತ್ತವೆ!


ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ರೇಸ್ ಟ್ರ್ಯಾಕಿನಲ್ಲಿ ಓಡಿಸಿರೋ ಕಾರು ಪೋಲೋ ಜಿಟಿಐ. ೧೫೦ ಹಾರ್ಸ್ ಪವರ್ ಹೊಂದಿರೋ ರಾಕ್ಷಸ ವೇಗದ ಈ ಕಾರನ್ನು ಪಳಗಿದ ರೇಸರುಗಳು ಮಾತ್ರವೇ ಓಡಿಸಲು ಸಾಧ್ಯ. ಅಂಥಾ ಕಾರನ್ನು ದರ್ಶನ್ ಯಾವುದೇ ಚಿತ್ರದ ಚಿತ್ರೀಕರಣಕ್ಕಾಗಿ ಖಂಡಿತಾ ಚಲಾಯಿಸಿಲ್ಲ. ಅವರು ಈ ಮೂಲಕ ಇಂಟರ್‌ನ್ಯಾಷನಲ್ ರೇಸಿಂಗ್ ಟೂರ್ನಮೆಂಟ್ ಒಂದರಲ್ಲಿ ಪಾಲ್ಗೊಳ್ಳಲು ತಯಾರಿ ಮಾಡಿಕೊಳ್ಳುತ್ತಿದ್ದಾರಂತೆ. ಈಗಾಗಲೇ ಈ ರೇಸಿಂಗ್‌ನಲ್ಲಿ ಪಳಗಿಕೊಂಡಿರೋ ದರ್ಶನ್ ಅವರು ಸದ್ಯದಲ್ಲಿಯೇ ಈ ಕಾರ್ ರೇಸಿಂಗ್ ಕಾಂಪಿಟೇಷನ್ ಮೂಲಕ ವಿಶ್ವ ಮಟ್ಟದಲ್ಲಿಯೂ ಸದ್ದು ಮಾಡಲಿದ್ದಾರೆ ಅನ್ನೋ ಮಾತು ಕೇಳಿಬರುತ್ತಿದೆ.

Continue Reading
Advertisement
Click to comment

Leave a Reply

Your email address will not be published. Required fields are marked *

ಅಭಿಮಾನಿ ದೇವ್ರು

ಶಿವಣ್ಣ ಮತ್ತು ದರ್ಶನ್ ಒಟ್ಟಾಗಿ ನಟಿಸ್ತಾರಾ?

Published

on

ಕನ್ನಡ ಚಿತ್ರರಂಗದಲ್ಲಿ ಮಲ್ಟಿಸ್ಟಾರ್ ಸಿನಿಮಾಗಳ ಪರ್ವ ಮೆಲ್ಲಗೆ ಕಣ್ತೆರೆಯುತ್ತಿದೆ. ಸುದೀಪ್ ಜೊತೆಯಾಗಿ ನಟಿಸಿದ್ದ ಉಪೇಂದ್ರ ಇದೀಗ ರವಿಚಂದ್ರ ಚಿತ್ರದ ಮೂಲಕ ರವಿಚಂದ್ರನ್ ಅವರಿಗೆ ಜೊತೆಯಾಗಿದ್ದಾರೆ. ಈ ಚಿತ್ರ ಸೆಟ್ಟೇರಿದ ಬೆನ್ನಲ್ಲೇ ಮತ್ತೊಂದು ಮಲ್ಟಿಸ್ಟಾರ್ ಚಿತ್ರದ ಬಗೆಗಿನ ಸುದ್ದಿ ಹೊರ ಬಿದ್ದಿದೆ. ಇದು ಫಲಿಸಿದರೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಂದು ಚಿತ್ರದಲ್ಲಿ ಒಟ್ಟಾಗಿ ನಟಿಸಲಿದ್ದಾರೆ.

ಶಿವರಾಜ್ ಕುಮಾರ್ ಮತ್ತು ದರ್ಶನ್ ಅವರು ಒಟ್ಟಾಗಿ ನಟಿಸಲು ಒಪ್ಪಿಕೊಂಡರೆ ಆ ಚಿತ್ರವನ್ನು ನಿರ್ಮಾಣ ಮಾಡಲು ನಿರ್ಮಾಪಕರುಗಳು ಸಾಲುಗಟ್ಟಿ ನಿಲ್ಲುತ್ತಾರೆ. ಬಹು ಹಿಂದಿನಿಂದಲೇ ಒಂದಷ್ಟು ಮಂದಿ ಇದಕ್ಕಾಗಿ ಪ್ರಯತ್ನವನ್ನೂ ಚಾಲ್ತಿಯಲ್ಲಿಟ್ಟಿದ್ದಾರೆ. ಇದೀಗ ಈ ಪ್ರಯತ್ನದಲ್ಲಿ ಹೆಚ್ಚೂ ಕಡಿಮೆ ಯಶಸ್ವಿಯಾಗಿರುವವರು ನಿರ್ದೇಶಕ ಮಹೇಶ್ ಬಾಬು.

ಮಹೇಶ್ ಬಾಬು ಅವರಿಗೆ ಬಹು ಹಿಂದೆಯೇ ನಿರ್ಮಾಪಕರೊಬ್ಬರಿಂದ ಶಿವಣ್ಣ ಮತ್ತು ದರ್ಶಾನ ಅವರನ್ನು ಒಂದಾಗಿಸಿ ಚಿತ್ರ ಮಾಡೋ ಆಫರ್ ಬಂದಿತ್ತು. ಅದಾದ ಕ್ಷಣದಿಂದಲೇ ಇಬ್ಬರಿಗೂ ಹೊಂದುವಂಥಾ ಚೆಂದದ್ದೊಂದು ಕಥೆ ರೆಡಿ ಮಾಡಿಕೊಂಡ ಮಹೇಶ್ ಬಾಬು ಇತ್ತೀಚೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಭೇಟಿಯಾಗಿದ್ದಾರೆ. ಈ ಚಿತ್ರದ ಬಗ್ಗೆ ಮಾತಾಡಿದ್ದಾರೆ. ದರ್ಶನ್ ಕೂಡಾ ಶಿವಣ್ಣನ ಜೊತೆ ಅಭಿನಯಿಸೋದಕ್ಕೆ ಖುಷಿಯಿಂದಲೇ ಒಂದು ಹಂತದ ಒಪ್ಪಿಗೆ ಸೂಚಿಸಿದ್ದಾರೆ. ಇನ್ನು ಕಥೆ ಕೇಳಿ ಅದು ಇಷ್ಟವಾದರೆ ಈ ಪ್ರಾಜೆಕ್ಟನ್ನವರು ಓಕೆ ಮಾಡಿದಂತೆಯೇ.

ಆದರೆ ಶಿವರಾಜ್ ಕುಮಾರ್ ಅವರನ್ನು ಇನ್ನಷ್ಟೇ ಭೇಟಿಯಾಗಬೇಕಿದೆ. ದರ್ಶನ್ ಜೊತೆ ನಟಿಸೋ ಪ್ರಶ್ನೆ ಎದುರಾದಾಗೆಲ್ಲ ಆ ಬಗ್ಗೆ ಖುಷಿಯಿಂದಲೇ ಮಾತಾಡುತ್ತಾ ಬಂದಿರೋ ಶಿವಣ್ಣ ಕೂಡಾ ಈ ಚಿತ್ರವನ್ನು ಒಪ್ಪಿಕೊಳ್ಳುವ ಸಾಧ್ಯತೆಗಳೇ ಹೆಚ್ಚಿವೆ.

Continue Reading

ಅಭಿಮಾನಿ ದೇವ್ರು

ಕೆಜಿಎಫ್‌ನಲ್ಲಿ ಅರಳಿದ ಕನ್ನಡದ ಕನಸು!

Published

on

ಈಗೊಂದಷ್ಟು ವರ್ಷಗಳ ಹಿಂದೆ ತಮನ್ನ ತೆಲುಗು ಸೇರಿದಂತೆ ನಾನಾ ಭಾಷೆಗಳಲ್ಲಿ ಮೆರೆಯುತ್ತಿದ್ದರಲ್ಲಾ? ಆ ಕಾಲದಲ್ಲಿಯೇ ಆಕೆ ಕನ್ನಡ ಚಿತ್ರವೊಂದರಲ್ಲಿ ನಟಿಸುತ್ತಾರೆಂಬ ಸುದ್ದಿ ಆಗಾಗ ಹರಿದಾಡುತ್ತಲೇ ಇತ್ತು. ಆದರೆ ಯಾಕೋ ಅದಕ್ಕೆ ಈವರೆಗೂ ಕಾಲ ಕೂಡಿ ಬಂದಿಲ್ಲ. ಆದರೆ ಯಶ್ ಅಭಿನಯದ ವಿಶೇಷ ಹಾಡೊಂದರಲ್ಲಿ ತಮನ್ನಾ ಕುಣಿದಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಕನ್ನಡದಲ್ಲಿ ನಟಿಸೋ ಇರಾದೆಯನ್ನು ಹೊರ ಹಾಕಿದ್ದಾರೆ. ಕನ್ನಡದಲ್ಲಿ ತಮಗೆ ಯಾವ ಹೀರೋ ಜೊತೆ ನಟಿಸಲು ಇಷ್ಟ ಎಂಬುದನ್ನೂ ಹೇಳಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ತಮನ್ನಾ ಯಶ್ ಜೊತೆ ಹಾಡೊಂದರಲ್ಲಿ ಕುಣಿದಿದ್ದಾರೆ. ಈ ಸಂದರ್ಭದಲ್ಲಿ ಈ ಚಿತ್ರಕ್ಕೆಂದೇ ಎರಡು ವರ್ಷಗಳಿಂದ ಎಲ್ಲವನ್ನೂ ಮೀಸಲಿಟ್ಟಿರುವ ಯಶ್ ಮತ್ತು ಇಡೀ ಚಿತ್ರತಂಡವನ್ನು ತಮನ್ನಾ ಮೆಚ್ಚಿಕೊಂಡಿದ್ದಾರೆ. ನಿರ್ದೇಶಕ ಪ್ರಶಾಂತ್ ನೀಲ್ ಅವರ ವರ್ಕಿಂಗ್ ಸ್ಟೈಲ್ ಬಗೆಗೂ ಅತೀವ ಮೆಚ್ಚುಗೆ ಸೂಚಿಸಿರೋ ತಮನ್ನಾ ಇಂಥಾ ಚಿತ್ರ ತಂಡದ ಜೊತೆ ಕೆಲಸ ಮಾಡಿದ್ದು ತಮ್ಮ ಪಾಲಿಗೆ ಅವಿಸ್ಮರಣೀಯ ಅನುಭವ ಎಂದೂ ಹೇಳಿಕೊಂಡಿದ್ದಾರೆ.

ಅಂದಹಾಗೆ ತಮನ್ನಾಗೆ ಬಹು ಕಾಲದಿಂದಲೂ ಕನ್ನಡ ಚಿತ್ರದಲ್ಲಿ ನಟಿಸೋ ಆಸೆ ಇದೆಯಂತೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆ ನಟಿಸಬೇಕೆಂಬುದು ಅವರ ಕನಸಂತೆ. ಒಂದಿಳ್ಳೆ ಕಥೆ ಬಂದರೆ ಹಿಂದೆ ಮುಂದೆ ನೋಡದೇ ಒಪ್ಪಿಕೊಳ್ಳೋದಾಗಿಯೂ ಅವರು ಹೇಳಿದ್ದಾರೆ. ಇತ್ತೀಚೆಗೆ ಪುನೀತ್ ಜೆತೆ ತಮನ್ನಾ ಜಾಹೀರಾತೊಂದರಲ್ಲಿ ನಟಿಸಿದ್ದರು. ಪುನೀತ್ ಮತ್ತು ತಮನ್ನಾ ಒಟ್ಟಾಗಿ ನಟಿಸೋ ದಿನಗಳೂ ಹತ್ತಿರದಲ್ಲಿರುವಂತಿದೆ.

Continue Reading

ಅಭಿಮಾನಿ ದೇವ್ರು

ಆಫ್ರಿಕಾ ನಟ ಹಾಡಿದ ಕನ್ನಡ ಹಾಡು ವೈರಲ್ ಆಯ್ತು!

Published

on

ಮಲ್ಲಾಡಿ ನರಸಿಂಹಲು ನಿರ್ಮಾಣದ ತಾರಕಾಸುರ ಚಿತ್ರಕ್ಕೆ ಹಾಲಿವುಡ್‌ನ ದೈತ್ಯ ನಟ ಜೊತೆಯಾಗಿದ್ದಾರೆ. ಈ ಟೈಟಲ್ಲಿಗೆ ತಕ್ಕುದಾದ ಭಾರೀ ದೇಹದಿಂದ, ರಕ್ಕಸ ನಟನೆಯಿಂದ ಚಾಲ್ತಿಯಲ್ಲಿರುವ ಡ್ಯಾನಿ ಸಫಾನಿ ಮೊದಲ ಸಲ ಕನ್ನಡ ಚಿತ್ರರಂಗಕ್ಕೆ ಅಡಿಯಿರಿಸಿದ್ದಾರೆ. ಸಿಂಗಂ ಸರಣಿ ಚಿತ್ರದ ಮೂಲಕ ದಕ್ಷಿಣ ಭಾರತೀಯ ಚಿತ್ರರಂಗಕ್ಕೂ ಪರಿಚಯವಾದ ಈ ನಟ ಇದೀಗ ತಾರಕಾಸುರ ಚಿತ್ರದ ಹಾಡೊಂದನ್ನು ಹಾಡೋ ಮೂಲಕ ತಮ್ಮ ಕನ್ನಡಾಭಿಮಾನ ಮೆರೆದಿದ್ದಾರೆ!

ಇತ್ತೀಚೆಗೆ ತಾರಕಾಸುರ ಚಿತ್ರದ ವೀಡಿಯೋ ಒಂದು ಬಿಡುಗಡೆಯಾಗಿತ್ತು. ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಹಾಡಿದ್ದ ಕನ್ನಡ ಕಲಿಯೋ ಕನ್ನಡ ಕಲಿಯೋ ಕಲಿಯೋ ಮುಂಡೇದೆ ಎಂಬ ಹಾಡು ಯೂಟ್ಯೂಬ್‌ನಲ್ಲಿ ಭಾರೀ ಸದ್ದು ಮಾಡಿತ್ತು. ಇದೀಗ ಈ ಚಿತ್ರದಲ್ಲಿ ಬಹು ಮುಖ್ಯವಾದ ಪಾತ್ರ ಮಾಡುತ್ತಿರೋ ಡ್ಯಾನಿ ಈ ಹಾಡನ್ನು ಹಾಡಿದ್ದಾರೆ. ದೂರದ ಲಂಡನ್ನಿನಿಂದ ಈ ಹಾಡನ್ನು ಹಾಡಿ ಕಳಿಸಿದ್ದ ಡ್ಯಾನಿಯ ವೀಡಿಯೋ ಈಗ ಎಲ್ಲೆಡೆ ಹರಿದಾಡುತ್ತಿದೆ. ಅದೆಲ್ಲೋ ಆಫ್ರಿಕಾ ಮೂಲದವರು ಡ್ಯಾನಿ. ಕನ್ನಡ ಚಿತ್ರವೊಂದರಲ್ಲಿ ನಟಿಸುತ್ತಲೇ ಕನ್ನಡ ಹಾಡು ಹಾಡಲು ಪಟ್ಟಿರೋ ಅವರ ಪ್ರಯತ್ನವನ್ನು ಯಾರಾದರೂ ಮೆಚ್ಚುವಂಥಾದ್ದೇ.

ನಿರ್ಮಾಪಕರಾದ ನರಸಿಂಹಲು ಅವರ ಮಗ ವೈಭವ್ ತಾರಕಾಸುರ ಚಿತ್ರದ ನಾಯಕನಾಗಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಡ್ಯಾನಿ ಭಯಂಕರ ಪಾತ್ರವೊಂದನ್ನು ನಿರ್ವಹಿಸಿದ್ದಾರೆ. ಇದು ಡ್ಯಾನಿ ಎಂಟ್ರಿ ಕೊಟ್ಟ ಮೊದಲ ಕನ್ನಡ ಚಿತ್ರವೂ ಹೌದು. ಆಫ್ರಿಕಾದಲ್ಲಿನ ರಂಗಭೂಮಿ ನಟರಾಗಿದ್ದ ಡ್ಯಾನಿ ಸಫಾನಿ ಇದೀಗ ಹಾಲಿವುಡ್‌ನ ಬಹು ಬೇಡಿಕೆಯ ನಟ. ತಮಿಳಿನ ಸಿಂಗಂ ಚಿತ್ರದಲ್ಲಿಯೂ ಇವರು ಭಯಂಕರವಾದ ಪಾತ್ರವನ್ನೇ ಮಾಡಿದ್ದರು. ಇಂಥಾ ಡ್ಯಾನಿ ಇದೀಗ ತಾರಕಾಸುರ ಚಿತ್ರದಲ್ಲಿ ನಟಿಸಿದ್ದಾರೆಂಬುದೇ ಈ ಚಿತ್ರದ ಪ್ರಧಾನ ಆಕರ್ಷಣೆಯಾಗಿ ಮಾರ್ಪಾಡಾಗಿದೆ.

ದಿ ಕ್ರೌನ್, ದಿ ಲಾಸ್ಟ್ ಜೇಡಿ, ಮಿಸ್ ಫಿಟ್ಸ್ ಮುಂತಾದ ಚಿತ್ರಗಳ ಮೂಲಕ ಖ್ಯಾತಿಯ ಉತ್ತುಂಗವೇರಿದ್ದ ಡ್ಯಾನಿ ಸಫಾನಿ ವಿಲನ್ ಅವತಾರಕ್ಕೆ ಹೇಳಿ ಮಾಡಿಸಿದಂತಿರೋ ದೇಹಲಕ್ಷಣ ಹೊಂದಿರುವವರು. ಆದರೆ ಈತ ಹಾಲಿವುಡ್ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದು ಕೇವಲ ದೇಹದಿಂದಲ್ಲ, ಅಮೋಘವಾದ ನಟನೆಯಿಂದ. ರಂಗಭೂಮಿ ಹಿನ್ನೆಲೆಯ ಈ ನಟ ತಾರಕಾಸುರ ಚಿತ್ರದ ಮೂಲಕ ಕನ್ನಡಕ್ಕಾಗಮಿಸಿರೋದು ನಿಜಕ್ಕೂ ಪ್ರೇಕ್ಷಕರ ಪಾಲಿಗೆ ಖುಷಿಯ ವಿಚಾರ.

https://www.facebook.com/malladi.narasimhalu.1/videos/328387684395831/

Continue Reading

Trending

Copyright © 2018 Cinibuzz