Connect with us

ಸಿನಿಮಾ ವಿಮರ್ಶೆ

DEFT HANDLING – GHOST TO BOAST

Published

on

Rating (3/5)

Title – Uddishya, Banner – Chersonese Entertainment and Arch Films (USA), Executive Producers – Carlos Hagene and Gary Griffin, Director and Producer – HeMan, Music Director – Shadrach Solomon, Cinematographer – Chetan Raghuram, Original Story & Screenplay – Roberta Griffin, Cast – Hemanth, Archana Gaikwad, Akshata, Shreedhar Shastry, Iccha, Ashwatha Narayana, Anantha Velu, Anantha Padmanabha. S. A, Bharath. G. B.

 

‘Hollywood’ style for ‘Sandalwood’ has come in? This film by NRI ‘Uddishya’ has made such an attempt. It is based on Roberta Griffin Hollywood writer imaginary story that has been translated and modified to suit Global audience.

We have seen exorcist in the past. A bench mark film. We had in Kannada witchcraft in ‘Naa Ninna Bidalaare’.
Scores of films with horror have hit the stands. That is after super success of 6-5=2. Yet this Uddishya is different although it has passing reference to the recent 3000 Kannada cinema.

Hemanth as producer director and actor has worked on a tight screen play first. On many occasions he makes the audience to adjust to their seats with jerks. The exorcism subject he deals with knowledge but sadly the ghost of Christopher does not leave this COD cop.

What is this ‘Uddishya’ of Christopher. He wants to win death. He brings I three girls to his place makes them pregnant and the child born to them should be sacrificed on the day of birth is his calculation 16 years ago.

Out of three girls one dies after delivery of child, on this day remaining two pregnant women brutally attack because just born child is danger.

Christopher is in coma from last 16 years. Finally he is buried as doctors declare dead. The unsatisfied ghost attacks Divya second pregnant lady son. Divya is also killed later on. Now Anuradha a cop and her child Sara are left in doldrums. The cop seeks support on saving her skin from virtual collapse. What happened s when exorcism expert played by Anantha Velu arrives is climax of the film!

Hemanth in the cop on special Investigations has the right strength required for the role. Vijay kaundinya is deadly. Three girls have done competent job in respective roles.Archana Gaikwad as cop Anurdaha is quite OK. Akshata Sridhar has second release of the week emoted well. Delivery of dialogue by Anuradha character should have been very natural.

The background music, dialogues, locations, lighting for the film special effects of work are tremendous in this film.
The power of God and ghost are well showcased in this film.

This is worth watching for some of the stunning situations in the film.

 

Advertisement
Click to comment

Leave a Reply

Your email address will not be published. Required fields are marked *

ಕಲರ್ ಸ್ಟ್ರೀಟ್

ಭರ್ಜರಿಯಾಗಿ ನಗಿಸ್ತಾನೆ ಕೆಮಿಸ್ಟ್ರಿ ಕರಿಯಪ್ಪ!

Published

on

ತನ್ನ ವಿಶಿಷ್ಟವಾದ ಶೀರ್ಷಿಕೆ, ಬಾಲಿವುಡ್ ಮಟ್ಟದಲ್ಲಿಯೂ ಟಾಕ್ ಕ್ರಿಯೇಟ್ ಮಾಡಿದ್ದ ಸಿನಿಮಾ ಕೆಮಿಸ್ಟ್ರಿ ಆಫ್ ಕರಿಯಪ್ಪ. ಇದು ಯಾವ ಜಾನರಿನ ಸಿನಿಮಾ, ಕಥೆ ಎಂಥಾದ್ದೆಂಬುದೂ ಸೇರಿದಂತೆ ಕರಿಯಪ್ಪನ ಕೆಮಿಸ್ಟ್ರಿ ಹೇಗಿದ್ದಿರ ಬಹುದೆಂಬ ಕುತೂಹಲ ಎಲ್ಲೆಡೆ ಮಿರುಗುಟ್ಟಿತ್ತು. ಇಂಥಾದ್ದರಿಂದ ಅಪಾರ ನಿರೀಕ್ಷಿಯಿಟ್ಟುಕೊಂಡು ಥೇಟರಿಗೆ ಬಂದವರು ಮನಸಾರೆ ನಕ್ಕು, ಒಂದರೆಕ್ಷಣ ಭಾವುಕರಾಗಿ, ಕೆಲ ತಿರುವುಗಳಲ್ಲಿ ಬೆರಗಾಗುತ್ತಲೇ ವಿಶಿಷ್ಟವಾದೊಂದು ಸಿನಿಮಾ ನೋಡಿದ ಖುಷಿಯ ಕೈ ಹಿಡಿದೇ ಮನೆ ಸೇರಿಕೊಳ್ಳೋದು ಗ್ಯಾರೆಂಟಿ. ಇದು ಕರಿಯಪ್ಪನ ಕೆಮಿಸ್ಟ್ರಿಯ ನಿಜವಾದ ವಿಶೇಷತೆ ಅನ್ನಲಡ್ಡಿಯಿಲ್ಲ.

ಡಾ. ಡಿ.ಎಸ್ ಮಂಜುನಾಥ್ ನಿರ್ಮಾಣ ಮಾಡಿರುವ ಕೆಮಿಸ್ಟ್ರಿ ಆಫ್ ಕರಿಯಪ್ಪ ಭಿನ್ನ ಬಗೆಯ ಕಾಮಿಡಿ ಜಾನರಿನ ಚಿತ್ರ. ಇಡೀ ಹೂರಣವನ್ನ ನೋಡಿದರೆ ಇದನ್ನು ಬರೀ ಕಾಮಿಡಿಗೆ ಕಟ್ಟು ಹಾಕಲು ಖಂಡಿತಾ ಸಾಧ್ಯವಾಗೋದಿಲ್ಲ. ಒಂದು ಸರಳವಾದ ಕಥೆಯನ್ನು ಸಣ್ಣಪುಟ್ಟ ವಿಚಾರಗಳಲ್ಲಿಯೂ ಗಮನವಿಟ್ಟು ಶೃಂಗರಿಸಿರುವ ನಿರ್ದೇಶಕ ಕುಮಾರ್ ಅವರ ಕಸುಬುದಾರಿಕೆ ಬೆರಗಾಗಿಸುವಂತಿದೆ. ಮಧ್ಯಮ ವರ್ಗದ ಕಥೆಯಾದರೂ ಎಲ್ಲರಿಗೂ ಕನೆಕ್ಟ್ ಆಗುವಂಥಾ ಕಥೆ, ಕಾಮಿಡಿ ಮತ್ತು ಗಾಢವಾದ ಭಾವುಕ ಸನ್ನಿವೇಶಗಳೊಂದಿಗೆ ಕರಿಯಪ್ಪನ ಕೆಮಿಸ್ಟ್ರಿ ಮೋಡಿ ಮಾಡಿದೆ.

ಅದು ಅಪ್ಪ ಅಮ್ಮ ಮತ್ತು ಮಗನ ಪುಟ್ಟ ಸಂಸಾರ. ಕರಿಯಪ್ಪ ಆ ಸಂಸಾರದ ಯಜಮಾನ. ಈತನ ಮಗ ಉತ್ತರ ಕುಮಾರ. ತನ್ನ ಮಗನಿಗೊಂದು ಮದುವೆ ಮಾಡಿ ಆತ ನೆಲೆ ಕಂಡುಕೊಳ್ಳಬೇಕೆಂಬುದೇ ಕರಿಯಪ್ಪನ ಆಸೆ ಮತ್ತು ಉದ್ದೇಶ. ಆದರೆ ನೂರಾರು ಹುಡುಗೀರನ್ನು ನೋಡಿದರೂ ಒಂದೇ ಒಂದು ಸಂಬಂಧವೂ ಉತ್ತರ ಕುಮಾರನಿಗೆ ಕೂಡಿ ಬರೋದಿಲ್ಲ. ಈ ಬಗ್ಗೆ ಕರಿಯಪ್ಪ ಮಂಡೆಬಿಸಿ ಮಾಡಿಕೊಂಡು ಕೂತಿರುವಾಗಲೇ ಪುತ್ರ ಉತ್ತರ ಕುಮಾರ ಚೆಲುವೆಯೊಬ್ಬಳಿಗೆ ಬಲೆ ಬೀಸಿ ಬಿಟ್ಟಿರುತ್ತಾನೆ. ಆಮೇಲೆ ಮದುವೆ. ಆದರೆ ಉತ್ತರ ಕುಮಾರನಿಗೆ ಫಸ್ಟ್ ನೈಟಲ್ಲಿಯೇ ಘೋರ ಆಘಾತವೊಂದು ಎದುರಾಗುತ್ತೆ. ಅದಕ್ಕೆ ಕಾರಣವೇನು. ಅಂಥಾದ್ದೇನಾಗುತ್ತೆ ಅನ್ನೋ ಕುತೂಹಲದ ಸುತ್ತಾ ಎಲ್ಲಿಯೂ ಬೋರು ಹೊಡೆಸದಂತೆ ಈ ಚಿತ್ರ ಮುಂದುವರೆಯುತ್ತದೆ.

ಮಗನ ಜೀವನದಲ್ಲಾಗೋ ಯಡವಟ್ಟುಗಳನ್ನು ಸರಿಪಡಿಸಲು ಪಡಿ ಪಾಟಲು ಪಡೋ ತಂದೆಯಾಗಿ ಕರಿಯಪ್ಪನ ಪಾತ್ರಕ್ಕೆ ತಬಲಾ ನಾಣಿ ಜೀವ ತುಂಬಿದ್ದಾರೆ. ಇದರಲ್ಲವರು ಈ ವರೆಗಿನ ಪಾತ್ರಗಳಿಗಿಂತಲೂ ಭಿನ್ನವಾಗಿ ಕಾಣಿಸುತ್ತಾರೆ. ನಾಯಕ ಚಂಣದನ್ ಆಚಾರ್ಯ ಮತ್ತು ನಾಯಕಿ ಸಂಜನಾ ಆನಂದ್ ಕೂಡಾ ಮುದ್ದಾಗಿ ನಟಿಸಿದ್ದಾರೆ. ಎಲ್ಲ ಪಾತ್ರ ವರ್ಗವೂ ಪ್ರೇಕ್ಷಕರನ್ನು ನೇರವಾಗಿ ತಟ್ಟುವಂತಿದೆ. ಖುದ್ದು ನಿರ್ಮಾಪಕ ಮಂಜುನಾಥ್ ಅವರೇ ಪಾತ್ರವೊಂದರ ಮೂಲಕ ಪ್ರೇಕ್ಷಕರಿಗೆ ಆಪ್ತವಾಗುತ್ತಾರೆ.

ಒಟ್ಟಾರೆ ಚಿತ್ರದಲ್ಲಿ ಗಂಭೀರವಾದ ಅಂಶಗಳಿವೆ, ಭಾವನಾತ್ಮಕ ಸನ್ನಿವೇಶಗಳಿವೆ. ಆದರೆ ಅದರ ಬೆನ್ನಿಗೇ ನಗು ಅರಳಿಕೊಳ್ಳುತ್ತೆ. ಕೆಮಿಸ್ಟ್ರಿ ಆಫ್ ಕರಿಯಪ್ಪ ಸ್ಪೆಷಲ್ಲು ಅನ್ನಿಸೋದೇ ಈ ಕಾರಣದಿಂದ. ನೀವೂ ಒಮ್ಮೆ ನೋಡಿ. ಕರಿಯಪ್ಪನ ಕೆಮಿಸ್ಟ್ರಿ ಖಂಡಿತಾ ಇಷ್ಟವಾಗುತ್ತೆ!

cinibuzz ರೇಟಿಂಗ್ : ****/*****

Continue Reading

ಕಲರ್ ಸ್ಟ್ರೀಟ್

ಬೆಲ್ ಬಾಟಮ್: ರೆಟ್ರೋ ಲೋಕದೊಳಗೆ ಎಣಿಸಲಾರದ ಅದ್ಭುತಗಳಿದ್ದಾವೆ!

Published

on

ಜಯತೀರ್ಥ ನಿರ್ದೇಶನದ ಬೆಲ್ ಬಾಟಮ್ ರೆಟ್ರೋ ಜಮಾನವನ್ನ ಕ್ರಿಯೇಟಿವ್ ಆಗಿ ಪರಿಚಯಿಸುತ್ತಲೇ ಕ್ರೇಜ್ ಸೃಷ್ಟಿಸಿದ್ದ ಚಿತ್ರ. ಪ್ರತಿಯೊಂದರಲ್ಲಿಯೂ ಹಳತಿಗೆ ಹೊಸಾ ಹೊಳಪು ನೀಡೋ ಪ್ರಯತ್ನದಿಂದಲೇ ಎಲ್ಲಾ ವರ್ಗದ ಪ್ರೇಕ್ಷಕರನ್ನೂ ಆವರಿಸಿಕೊಂಡಿದ್ದ ಈ ಸಿನಿಮಾವೀಗ ಥೇಟರುಗಳಿಗೆ ಅಡಿಯಿರಿಸಿದೆ. ಈ ಕಾಲಮಾನಕ್ಕೆ ಹೊಸತೆನ್ನಿಸುವಂಥಾ ಅಪ್ಪಟ ಪತ್ತೇದಾರಿ ಕಥನವೊಂದು ಭರ್ಜರಿ ಕಾಮಿಡಿ ಝಲಕ್ಕುಗಳ ಜೊತೆಗೆ ನೋಡುಗರನ್ನು ಮುದಗೊಳಿಸಿದೆ.

ಟಿ.ಕೆ ದಯಾನಂದ್ ಬರೆದಿರೋ ಥ್ರಿಲ್ಲಿಂಗ್ ಕಥೆಗೆ ಜಯತೀರ್ಥ ಚಿತ್ರಕಥೆ ಮತ್ತು ರಘು ನಿಡುವಳ್ಳಿ ಸಂಭಾಷಣೆ ಬರೆದಿರೋ ಸಿನಿಮಾ ಬೆಲ್ ಬಾಟಮ್. ವರ್ಷಾಂತರಗಳ ಹಿಂದೆ ಕೋಲಾರ ಸೀಮೆಯಲ್ಲಿ ನಡೆದಿದ್ದ ಸತ್ಯ ಘಟನೆಯೊಂದರ ಎಳೆಯೊಂದಿಗೇ ಹೊಸೆದಿರೋ ರೋಚಕ ಕಥನವನ್ನ ಈ ಚಿತ್ರ ಒಳಗೊಂಡಿದೆ. ಬೆಲ್ ಬಾಟಮ್ ಅನ್ನು ಜನ ಯಾವ ನಿರೀಕ್ಷೆಯಿಟ್ಟುಕೊಂಡು ನೋಡಿದರೂ ಅದನ್ನು ತಣಿಸಿ ಬೇರೆಯದ್ದೇ ಜಗತ್ತಿನೊಂದಿಗೆ ವಿಹರಿಸುವಂತೆ ಮಾಡುವಲ್ಲಿ ಬೆಲ್ ಬಾಟಮ್ ಗೆದ್ದಿದೆ.

ರಿಷಬ್ ಶೆಟ್ಟಿ ಡಿಟಕ್ಟಿವ್ ದಿವಾಕರನಾಯಿ ತಮ್ಮ ಪ್ರತಿಭೆಯ ಮತ್ತೊಂದು ಮಜಲನ್ನು ಸಮರ್ಥವಾಗಿಯೇ ಅನಾವರಣಗೊಳಿಸಿದ್ದಾರೆ. ಈ ದಿವಾಕರನಿಗೆ ಸಣ್ಣ ವಯಸಿನಿಂದಲೇ ಪತ್ತೇದಾರಿ ಕಥೆಗಳನ್ನು ಓದೋ ಹವ್ಯಾಸ. ಆ ಸ್ಫೂರ್ತಿಯಿಂದ ತಾನು ಡಿಟೆಕ್ಟಿವ್ ಆಗಬೇಕೆಂಬ ಏಕ ಮಾತ್ರ ಉದ್ದೇಶದೊಂದಿಗೆ ಮುಂದುವರೆದ ಆತನನ್ನು ಬದುಕು ಪೊಲೀಸ್ ಕಾನ್ಸ್‌ಟೇಬಲ್ ವೃತ್ತಿಗೆ ಕಟ್ಟಿ ನಿಲ್ಲಿಸುತ್ತದೆ. ಹೀಗೆ ಅನಿವಾರ್ಯವಾಗಿ ಪೊಲೀಸು ವೃತ್ತಿಗಿಳಿದರೂ ದಿವಾಕರನೊಳಗಿನ ಪತ್ತೇದಾರಿಕೆಯ ಬುದ್ಧಿ ಮಾತ್ರ ಮರೆಯಾಗಿರೋದಿಲ್ಲ. ಹೀಗಿರುವಾಗಲೇ ಪೊಲೀಸಲ್ ಇಲಾಖೆಯನ್ನೇ ಮುಜುಗರಕ್ಕೆ ತಳ್ಳುವಂಥಾ ವಿದ್ಯಮಾನವೊಂದು ಘಟಿಸುತ್ತೆ. ಅದರ ಸುತ್ತಾ ಇಡೀ ಕಥೆ ಮಜವಾಗಿ ತೆರೆದುಕೊಳ್ಳುತ್ತಾ ಸಾಗುತ್ತದೆ.

ಬೆಲ್ ಬಾಟಮ್ ಚಿತ್ರದಲ್ಲೊಂದು ರೆಟ್ರೋ ಜಗತ್ತನ್ನೇ ಸೃಷ್ಟಿಸಿರೋ ನಿರ್ದೇಶಕ ಜಯತೀರ್ಥ ಇಡೀ ಕ್ಯಾನ್ವಾಸಿನ ಬಣ್ಣಗಳನ್ನು ಎಲ್ಲಿಯೂ ಚೆದುರದಂತೆ, ಎಲ್ಲರಿಗೂ ಆಪ್ತವಾಗುವಂತೆ ಕಟ್ಟಿ ಕೊಟ್ಟಿದ್ದಾರೆ. ಇಡೀ ಚಿತ್ರದ ಅಸಲೀ ಶಕ್ತಿಯೇ ಇದುವರೆಗೆ ಕಂಡು ಕೇಳರಿಯದಂಥಾ ವಿಚಿತ್ರ, ವಿಲಕ್ಷಣ ಪಾತ್ರಗಳು. ಸೆಗಣಿ ಪಿಂಟೋ, ಮರಕುಟುಕ ಎಂಬ ಸ್ಯಾಂಪಲ್ಲು ಕೇಳಿದರೇನೇ ಇದರ ವಿಶೇಷತೆ ಏನೆಂದು ಎಲ್ಲರಿಗೂ ಅರ್ಥವಾಗುತ್ತದೆ. ಹೀಗೆ ಪ್ರತಿಯೊಂದು ಪಾತ್ರಗಳನ್ನೂ ಕೂಡಾ ಕಾಡುವಂತೆ ಸೃಷ್ಟಿಸಲಾಗಿದೆ. ಮರಕುಟುಕನ ಪಾತ್ರಧಾರಿ ಯೋಗರಾಜ ಭಟ್ ಸೇರಿದಂತೆ ಸಮಸ್ತರೂ ಆಯಾ ಪಾತ್ರಗಳಿಗೆ ನ್ಯಾಯ ಸಲ್ಲಿಸಿ ಪ್ರೇಕ್ಷಕರ ಮನಸಿನಾಳಕ್ಕಿಳಿದಿದ್ದಾರೆ. ಅಷ್ಟಕ್ಕೂ ಟಿ ಕೆ ದಯಾನಂದ್ ಅವರ ಕಥೆಯ ಸೊಗಸೇ ಅಂಥಾದ್ದಿದೆ!

ಜಯತೀರ್ಥ ಚಿತ್ರಗಳೆಂದ ಮೇಲೆ ಹೊಸತನ ಖಾಯಂ. ಅದು ಬೆಲ್ ಬಾಟಮ್ ಮೂಲಕವೂ ಮುಂದುವರೆದಿದೆ. ಹರಿಪ್ರಿಯಾ ಮತ್ತು ರಿಷಬ್ ಸೇರಿದಂತೆ ಎಲ್ಲರೂ ಸ್ಪರ್ಧೆಗೆ ಬಿದ್ದವರಂತೆ ನಟಿಸಿದ್ದಾರೆ. ಒಟ್ಟಾರೆಯಾಗಿ ಎಂಭತ್ತರ ದಶಕದ ಪತ್ತೇದಾರಿ ಚಿತ್ರಗಳ ಜಗತ್ತಿಗೆ ಬೆಲ್ ಬಾಟಮ್ ಮೂಲಕ ಎಲ್ಲರಿಗೂ ಪ್ರವೇಶ ಸಿಗುತ್ತದೆ. ಅಲ್ಲಿ ಭರ್ಜರಿ ಮನೋರಂಜನೆ, ಅದ್ಭುತ ಪತ್ತೇದಾರಿಕೆಯ ಗಮ್ಮತ್ತು… ಹೀಗೆ ಎಲ್ಲವೂ ಸಿಗುತ್ತದೆ. ಕೊನೇಯದಾಗಿ ಎಲ್ಲ ವರ್ಗದ ಪ್ರೇಕ್ಷಕರೂ ಮಿಸ್ ಮಾಡಿಕೊಳ್ಳದೆ ನೋಡಲೇ ಬೇಕಾದ ಚಿತ್ರ ಬೆಲ್ ಬಾಟಮ್!

cinibuzz ರೇಟಿಂಗ್ ****/*****

Continue Reading

ಕಲರ್ ಸ್ಟ್ರೀಟ್

ನಟಸಾರ್ವಭೌಮ: ಇಮೇಜ್ ಮೀರಿದ ಪುನೀತ್; ಇದು ಅಭಿಮಾನಿಗಳ ಸಿನಿಮಾ

Published

on


ಸ್ಟಾರ್ ಹೀರೋಗಳು ತಮ್ಮ ಸಿನಿಮಾಗಳಿಗೆ ಸ್ವತಃ ತಾವಾಗಿಯೇ ಒಂದಷ್ಟು ಮಿತಿ ಹಾಕಿಕೊಂಡಿರುತ್ತಾರೆ. ವರ್ಷಕ್ಕೊಂದು ಇಲ್ಲವೇ ಎರಡು ವರ್ಷಕ್ಕೆ ಮೂರು ಸಿನಿಮಾ ಮಾಡುವ ಸಂಪ್ರದಾಯ ಅವರದು. ಹಾಗಾಗಿ ಸಾಕಷ್ಟು ಲೆಕ್ಕಾಚಾರದೊಂದಿಗೆ ಸಿನಿಮಾ ಒಪ್ಪಿಕೊಳ್ಳುತ್ತಾರೆ. ಒಂದೆಡೆ ಸಾಂಪ್ರದಾಯಿಕ ಅಭಿಮಾನಿಗಳ ನಿರೀಕ್ಷೆಯನ್ನು ಹುಸಿಗೊಳಿಸುವಂತಿಲ್ಲ. ಮತ್ತೊಂದೆಡೆ ಇಂತಹ ಮಿತಿಗಳ ಮಧ್ಯೆಯೇ ಹೊಸತನಕ್ಕೂ ಒಡ್ಡಿಕೊಳ್ಳಬೇಕು. ಎಲ್ಲವನ್ನೂ ಬ್ಯಾಲೆನ್ಸ್ ಮಾಡುವ ಒತ್ತಡ ಅವರದು. ’ನಟಸಾರ್ವಭೌಮ’ ಚಿತ್ರದಲ್ಲಿ ಪುನೀತ್ ರಾಜಕುಮಾರ್ ಇಂಥದ್ದೊಂದು ಪ್ರಯೋಗದಲ್ಲಿ ಯಶಸ್ವಿಯಾಗಿದ್ದಾರೆ.

’ನಟಸಾರ್ವಭೌಮ’ ಶೀರ್ಷಿಕೆ ನಿಗಧಿಯಾದಾಗಲೇ ಚಿತ್ರದ ಬಗ್ಗೆ ಕುತೂಹಲವಿತ್ತು. ನಿರ್ದೇಶಕ ಪವನ್ ಒಡೆಯರ್ ಕತೆಯ ಬಗ್ಗೆ ಯಾವುದೇ ಸುಳಿವು ಬಿಟ್ಟುಕೊಟ್ಟಿರಲಿಲ್ಲ. ಚಿತ್ರಕಥೆಯಲ್ಲಿ ಹಾರರ್ ಟಚ್ ಇರುವುದು ಗೊತ್ತಾಗಿದ್ದು ಟ್ರೈಲರ್ ಹೊರಬಿದ್ದಾಗಲೇ. ಹಾಗೆ ನೋಡಿದರೆ ಪುನೀತ್ ಸಿನಿಬದುಕಿನಲ್ಲಿ ಇದು ಹೊಸ ರೀತಿಯ ವಸ್ತು. ಅಭಿಮಾನಿಗಳ ಅಪೇಕ್ಷೆ, ಪುನೀತ್ ಇಮೇಜ್ ಬಲಿಕೊಡದೆ ಪವನ್ ಕತೆಯಲ್ಲಿ ಒಂದಷ್ಟು ಹೊಸತನ ತರಲು ಯತ್ನಿಸಿದ್ದಾರೆ. ಪುನೀತ್ ಕೂಡ ಚಿತ್ರವನ್ನು ಹೆಗಲಮೇಲೆ ಹೊತ್ತು ನಡೆದಿದ್ದು, ನಿರ್ದೇಶಕರು ಮತ್ತು ಇತರೆ ತಂತ್ರಜ್ಞರ ಹೊರೆ ಕಡಿಮೆ ಮಾಡಿದ್ದಾರೆ. ಹಾರರ್, ಆಕ್ಷನ್, ಡ್ಯಾನ್ಸ್, ಕಾಮಿಡಿ ಎಲ್ಲವೂ ಇರುವ ಚಿತ್ರದ ನಿರೂಪಣೆ ಇನ್ನಷ್ಟು ಬಿಗಿಯಾಗಬೇಗಿತ್ತು.

ಪುನೀತ್ ಇಲ್ಲಿಯವರೆಗೂ ಹಾರರ್ ಎಳೆಯ ಕತೆಯನ್ನು ಮಾಡಿರಲಿಲ್ಲ. ಈ ಮಟ್ಟಿಗೆ ಅವರಿಲ್ಲಿ ಇಮೇಜ್ ಮೀರಿ ಹೊಸತನಕ್ಕೆ ತೆರೆದುಕೊಂಡಿರುವುದು ಅವರ ಸಿನಿಬದುಕಿನ ದೃಷ್ಟಿಯಿಂದ ಸ್ವಾಗತಾರ್ಹ ಬೆಳವಣಿಗೆ. ಚಿತ್ರದುದ್ದಕ್ಕೂ ಅವರ ಉಪಸ್ಥಿತಿ ಎದ್ದು ಕಾಣುವುದಲ್ಲದೆ, ಡ್ಯಾನ್ಸ್‌ಗಳಲ್ಲಿ ವಿಶೇಷವಾಗಿ ಗಮನ ಸೆಳೆಯುತ್ತಾರೆ. ನೃತ್ಯದಲ್ಲಿ ಅವರಿಗೆ ಮತ್ತಷ್ಟು ಪುಟ್ಟಮಕ್ಕಳು ಅಭಿಮಾನಿಗಳಾಗುವುದರಲ್ಲಿ ಸಂಶಯವಿಲ್ಲ. ಇಬ್ಬರು ನಾಯಕಿಯರ ಪೈಕಿ ಅನುಪಮಾ ಪರಮೇಶ್ವರನ್ ನೆನಪಿನಲ್ಲುಳಿಯುತ್ತಾರೆ. ರಿಲೀಫ್‌ಗೆ ಚಿಕ್ಕಣ್ಣ ಮತ್ತು ಸಾಧುಕೋಕಿಲ ಕಾಮಿಡಿಯಿದೆ. ರವಿಶಂಕರ್ ಹೊರತಾಗಿ ಇತರೆ ಪೋಷಕ ಪಾತ್ರಗಳಿಗೆ ಹೆಚ್ಚು ಸ್ಕೋಪ್ ಇಲ್ಲ.

ಕನ್ನಡ ಚಿತ್ರಗಳನ್ನು ಕೊಲ್ಕತ್ತಾದಲ್ಲಿ ಚಿತ್ರಿಸಿದ ಉದಾಹರಣೆ ಕಡಿಮೆ. ಆ ಮಟ್ಟಿಗೆ ನಿರ್ದೇಶಕ ಪವನ್ ಒಡೆಯರ್ ಗೆದ್ದಿದ್ದಾರೆ. ಕೊಲ್ಕತ್ತಾದಲ್ಲಿ ಚಿತ್ರಿಸಿರುವ ಪುನೀತ್ ಮತ್ತು ಅನುಪಮಾ ಅವರ ಸನ್ನಿವೇಶಗಳು ಆಪ್ತವಾಗುತ್ತವೆ. ಜಯಂತ ಕಾಯ್ಕಿಣಿ ಮತ್ತು ಕವಿರಾಜ್ ಅವರ ಒಂದೊಂದು ಗೀತೆಗಳು ಉತ್ತಮ ಸಾಹಿತ್ಯದಿಂದ ಗಮನಸೆಳೆದರೂ, ಸಂಗೀತಕ್ಕೆ ಗುನುಗುವ ಗುಣವಿಲ್ಲ. ಪುನೀತ್‌ಗೆ ನೃತ್ಯ ಸಂಯೋಜಿಸಿರುವ ಸಂಗೀತ ನಿರ್ದೇಶಕರಿಗೆ ಅಭಿನಂದನೆ ಸಲ್ಲಬೇಕು. ಹಾಡುಗಳನ್ನು ಸುಂದರವಾಗಿ ಸೆರೆಹಿಡಿದಿರುವ ಛಾಯಾಗ್ರಾಹಕ ವೈದ್ಯ ಆಕ್ಷನ್ ದೃಶ್ಯಗಳನ್ನು ಮತ್ತಷ್ಟು ಆಕರ್ಷಕವಾಗಿಸಬಹುದಿತ್ತು. ಇಂತಹ ಕೆಲವೇ ಮಿತಗಳ ಮಧ್ಯೆ ಇದನ್ನು ಫ್ಯಾಮಿಲಿ ಎಂಟರ್‌ಟೇನರ್ ಚಿತ್ರಗಳ ಪಟ್ಟಿಗೆ ಸೇರ್ಪಡೆಗೊಳಿಸಬಹುದು.

Continue Reading
Advertisement
f2f 300 x 600
drive 300 x 600

Trending

Copyright © 2018 Cinibuzz