One N Only Exclusive Cine Portal

ಮತ್ತೆ ಕುರುಕ್ಷೇತ್ರಕ್ಕೆ ಎಂಟ್ರಿ ಕೊಟ್ಟರು ದರ್ಶನ್…

ಚಕ್ರವರ್ತಿ ಚಿತ್ರವಾದ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ವರ್ಷಕ್ಕೆರಡು ಚಿತ್ರಗಳಲ್ಲಿ ನಟಿಸೋ ತೀರ್ಮಾನ ಕೈಗೊಂಡಂತಿದೆ. ಇದಕ್ಕಾಗಿ ಅವರು ಕೊಂಚವೂ ಬಿಡುವು ಕೊಡದೆ ಒಂದರ ಹಿಂದೊಂದು ಚಿತ್ರಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಇದೀಗ ಯಜಮಾನ ಚಿತ್ರದ ಶೂಟಿಂಗಿನಲ್ಲಿ ಬ್ಯುಸಿಯಾಗಿದ್ದ ದರ್ಶನ್ ಅಲ್ಲಿ ಸಿಕ್ಕ ಚೂರು ಬಿಡುವನ್ನೂ ಕುರುಕ್ಷೇತ್ರ ಚಿತ್ರದ ಡಬ್ಬಿಂಗ್‌ಗಾಗಿ ಬಳಸಿಕೊಂಡಿದ್ದಾರೆ!

ಬಿ ಸುರೇಶ್ ನಿರ್ಮಾಣದ ಯಜಮಾನ ಚಿತ್ರಕ್ಕೆ ಮೈಸೂರಿನಲ್ಲಿ ಭರದಿಂದ ಚಿತ್ರೀಕರಣ ನಡೆಯುತ್ತಿದೆ.

ಮೈಸೂರಿನಲ್ಲಿ ಯಜಮಾನ ಚಿತ್ರಕ್ಕಾಗಿ ಶಶಿಧರ ಅಡಪ ಸುಂದರವಾದ ಮಾರುಕಟ್ಟೆಯ ಸೆಟ್ ಸೃಷ್ಟಿಸಿದ್ದರಲ್ಲಾ? ಅದರಲ್ಲಿ ಬಿಡುವಿರದೆ ಎಮೋಷನಲ್ ಸೀನುಗಳ ಚಿತ್ರೀಕರಣ ನಡೆದಿತ್ತು. ಇದರಲ್ಲಿ ಕೊಂಚವೂ ಗ್ಯಾಪ್ ಕೊಡದೆ ದರ್ಶನ್ ನಟಿಸಿದ್ದರು. ಇದೀಗ ಆ ಮಾರುಕಟ್ಟೆ ಸೆಟ್ ಅನ್ನು ತೆರವುಗೊಳಿಸಿ ಅದೇ ಜಾಗದಲ್ಲಿ ಬೇರೊಂದು ಸೆಟ್ ಹಾಕುವ ಕೆಲಸ ಚಾಲ್ತಿಯಲ್ಲಿದೆ. ಇದರಿಂದಾಗಿ ಕಲಾವಿದರಿಗೆ ಸ್ವಲ್ಪ ಬಿಡುವು ಮಾಡಿಕೊಡಲಾಗಿದೆ.

ಆದರೆ ಈ ಬಿಡುವಿನ ವೇಳೆಯಲ್ಲಿ ದರ್ಶನ್ ಅವರು ಸೀದಾ ಬೆಂಗಳೂರಿಗೆ ಬಂದಿದ್ದಾರೆ. ಹಾಗೆ ಬಂದವರೇ ಕುರುಕ್ಷೇತ್ರ ಚಿತ್ರದ ಬಾಕಿ ಉಳಿದುಕೊಂಡಿದ್ದ ಡಬ್ಬಿಗ್ ಮುಗಿಸಿಕೊಡಲು ಮುಂದಾಗಿದ್ದಾರಂತೆ. ಇಂದು ಬೆಳಗಿನಿಂದಲೇ ಆಕಾಶ್ ಆಡಿಯೋದಲ್ಲಿ ಡಬ್ಬಿಂಗ್ ಕೆಲಸ ಆರಂಭಗೊಂಡಿದೆ. ಸಂಗೊಳ್ಳಿ ರಾಯಣ್ಣ ಚಿತ್ರದಂತೆ ಕುರುಕ್ಷೇತ್ರಕ್ಕೆ ಕೂಡಾ ಬೆಳಗಿನ ಜಾವ ಬೇಗ ಬಂದು ದನಿ ನೀಡೋದು ದರ್ಶನ್ ಅವರ ಪ್ಲಾನು. ಬೆಳಿಗ್ಗೆ ಎದ್ದ ಕೂಡಲೇ ಯಾರೊಂದಿಗೂ ಹೆಚ್ಚು ಮಾತಾಡದೇ ನೇರವಾಗಿ ಡಬ್ಬಿಂಗ್ ಸ್ಟುಡಿಯೋಗೆ ಬಂದರೆ ಫ್ರೆಶ್ ಎನಿಸುವ ವಾಯ್ಸ್ ಇರುತ್ತದೆ ಅನ್ನೋದು ದರ್ಶನ್ ಅವರ ನಂಬಿಕೆ. ಇದನ್ನು ಮುಗಿಸಿಕೊಂಡಾದ ತಕ್ಷಣವೇ ಅವರು ಮತ್ತೆ ಯಜಮಾನ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳಲಿದ್ದಾರಂತೆ.

Leave a Reply

Your email address will not be published. Required fields are marked *


CAPTCHA Image
Reload Image