ಏಕಾಏಕಿ ನೋಟ್ ಬ್ಯಾನ್ ಆದ ನಂತರದ ಅಷ್ಟೂ ಬೆಳವಣಿಗೆಗಳು ನಮ್ಮ ಕಣ್ಮುಂದಿವೆ. ಆದರೆ ಆ ವಿದ್ಯಮಾನಗಳ ನಡುವಿಂದಲೇ ಹೆಕ್ಕಿ ತೆಗೆದ ವಿಭಿನ್ನ ಕಥಾನಕ ಹೊಂದಿರೋ ಮಟಾಶ್ ಚಿತ್ರ ಈ ವಾರ ತೆರೆಗಾಣುತ್ತಿದೆ.  ನೋಟ್ ಬ್ಯಾನ್ ಅಂದ ಮಾತ್ರಕ್ಕೆ ಇದು ಅದಕ್ಕೆ ಮಾತ್ರವೇ ಸೀಮಿತವಾದ ಚಿತ್ರ ಅಂದುಕೊಳ್ಳಬೇಕಿಲ್ಲ. ಆ ಗಡಿಬಿಡಿಯಲ್ಲಿ ತೆರೆದುಕೊಂಡಿದ್ದ ಮತ್ತೊಂದು ವಿಚಿತ್ರ ಜಗತ್ತನ್ನು ಈ ಚಿತ್ರ ತೆರೆದು ತೋರಿಸಲಿದೆ. ಇದಲ್ಲದೇ ಮಟಾಶ್ ಮೂಲಕ ಪಕ್ಕಾ ಡೀಸೆಂಟ್ ಕಾರ್ಪೋರೇಟ್ ಲುಕ್ಕಿನ ಗ್ಯಾಂಗ್‌ಸ್ಟರ್‌ಗಳೂ ಕೂಡಾ ಪ್ರೇಕ್ಷಕರಲ್ಲೊಂದು ಬೆರಗು ಮೂಡಿಸಲಿದ್ದಾರೆ.

ರಾಘು ರಾಮನಕೊಪ್ಪ, ರಂಗಸ್ವಾಮಿ ಮತ್ತು ನಂದಗೋಪಾಲ್ ಈ ಮಟಾಶ್ ಗ್ಯಾಂಗ್‌ಸ್ಟರ್‌ಗಳಾಗಿ ಕಾಣಿಸಿಕೊಳ್ಳಲಿದ್ದಾರೆ. ಇವರೆಲ್ಲರದ್ದೂ ಕೂಡಾ ಪ್ರೇಕ್ಷಕರ ಪಾಲಿಗೆ ಡಿಫರೆಂಟಾದ ಫೀಲ್ ಕೊಡೋ ಚಿತ್ರವೆಂಬುದು ನಿರ್ದೇಶಕ ಎಸ್ ಡಿ ಅರವಿಂದ್ ಅವರ ಭರವಸೆ.

#

LEAVE A REPLY

Please enter your comment!
Please enter your name here

7 − seven =