One N Only Exclusive Cine Portal

ಒನ್ ಆಂಡ್ ಓನ್ಲಿ ಪಡ್ಡೆಹುಲಿ

ಸಾಮಾನ್ಯವಾಗಿ ಸ್ಟಾರ್ ನಟರ ಸಿನಿಮಾಗಳ ವಿಚಾರವಾಗಿ ಶುರುವಾದಾಗಿನಿಂದ ರಿಲೀಸಿನ ತನಕ ಒಂದಲ್ಲಾ ಒಂದು ಸುದ್ದಿ ಹೊರಬೀಳುತ್ತಲೇ ಇರುತ್ತದೆ. ಆದರೆ ಪಡ್ಡೆಹುಲಿ ನಿರ್ಮಾಪಕ ಕೆ ಮಂಜು ಪುತ್ರ ಶ್ರೇಯಸ್ ಅಭಿನಯದ ಮೊದಲ ಸಿನಿಮಾವಾದರೂ ಗಾಂಧಿನಗರ ಮತ್ತು ಪ್ರೇಕ್ಷಕರ ವಲಯದಲ್ಲಿ ಕ್ರಿಯೇಟ್ ಮಾಡಿರುವ ಟಾಕ್ ಜೋರಾಗಿದೆ. ಬಹುಶಃ ಇದಕ್ಕೆ ಕಾರಣ ನಿರ್ದೇಶಕ ಗುರುದೇಶಪಾಂಡೆ ಮತ್ತು ಕೆ. ಮಂಜು ಅವರೇ ಇರಬಹುದು!

ಅಂದಹಾಗೆ ಮೊನ್ನೆ ಶ್ರೇಯಸ್ ಹುಟ್ಟುಹಬ್ಬದ ದಿನ ಪಡ್ಡೆ ಹುಲಿ ಸಿನಿಮಾದ ಪ್ರೋಮೋ ಸಾಂಗ್ ಅನ್ನು ರಕ್ಷಿತ್ ಶೆಟ್ಟಿ ಬಿಡುಗಡೆ ಮಾಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಮಾಡಿರುವ ಈ ಪ್ರೋಮೋ ಒಂದಿಡೀ ಚಿತ್ರದ ಖದರ್ ಅನ್ನು ಪ್ರೇಕ್ಷಕರಿಗೆ ದಾಟಿಸುವಲ್ಲಿ ಗೆದ್ದಿದೆ!

ಚಂದನ್ ಶೆಟ್ಟಿ ಹಾಡಿರುವ ಒನ್ ಆಂಡ್ ಓನ್ಲಿ ಪಡ್ಡೆಹುಲಿ ಎಂಬ ಪ್ರೋಮೋ ಹಾಡು ಬಿಡುಗಡೆಯಾಗಿದೆ. ಭರ್ಜರಿ ಚೇತನ್ ಬರೆದಿರುವ ಈ ಎನೆರ್ಜಿಟಿಕ್ ಹಾಡಿಗೆ ಚಂದನ್ ಶೆಟ್ಟಿ ಧ್ವನಿಯಾಗಿದ್ದರೆ, ಶ್ರೇಯಸ್ ಅನುಭವಿ ನಟನಂತೆ ಹೆಜ್ಜೆ ಹಾಕಿದ್ದಾರೆ. ಕ್ಯಾಮೆರಾ ವರ್ಕ್ ಸೇರಿದಂತೆ ಪ್ರತಿಯೊಂದು ವಿಚಾರದಲ್ಲಿಯೂ ಈ ಪ್ರೋಮೋ ಹಾಡು ಪಡ್ಡೆಹುಲಿ ಚಿತ್ರದದೆಡೆಗಿನ ನಿರೀಕ್ಷೆಗಳನ್ನು ಮತ್ತಷ್ಟು ಹೆಚ್ಚಿಸುವಂತಿದೆ.


ಕಿರಿಕ್ ಪಾರ್ಟಿ ಖ್ಯಾತಿಯ ರಕ್ಷಿತ್ ಶೆಟ್ಟಿ ಸಹ ಈ ಪ್ರೋಮೋ ಸಾಂಗನ್ನು ಬಿಡುಗಡೆ ಮಾಡಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಕೆ ಮಂಜು ಅವರು ಕೂಡಾ ಗುರುದೇಶಪಾಂಡೆ ಅವರ ಶ್ರಮವನ್ನು ಮೆಚ್ಚಿಕೊಂಡಿದ್ದಾರೆ. ಈ ಪ್ರೋಮೋದಲ್ಲಿನ ನಟನೆ ನೋಡಿದರೆ ಶ್ರೇಯಸ್ ಕನ್ನಡದಲ್ಲಿ ಮಾಸ್ ಹೀರೋ ಆಗಿ ನೆಲೆಗೊಳ್ಳುವ, ಪಡ್ಡೆಹುಲಿ ಚಿತ್ರ ಭರಪೂರ ಗೆಲುವೊಂದನ್ನು ತನ್ನದಾಗಿಸಿಕೊಳ್ಳುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿದೆ.

Leave a Reply

Your email address will not be published. Required fields are marked *


CAPTCHA Image
Reload Image