ಬೆಂಗಳೂರು,15 ಎಪ್ರಿಲ್, 2019: ಕಮಾರ್ ಫಿಲಂ ಫ್ಯಾಕ್ಟರಿ ಎಫ್.ಟಿ.ವಿ.ಯ ಫ್ಯಾಷನ್ ಕ್ಯಾಲೆಂಡರನ್ನು ನಗರದಲ್ಲಿ ಸೋಮವಾರ ಏರ್ಪಡಿಸಿದ್ದ ಅದ್ಧೂರಿ ಕಾರ್ಯಕ್ರಮದಲ್ಲಿ ಲಾಂಚ್ ಮಾಡಿತು.
ಎಫ್.ಟಿ.ವಿ.ಯ ಫ್ಯಾಷನ್ ಕ್ಯಾಲೆಂಡರ್ ಲಾಂಚ್ ಕಾರ್ಯಕ್ರಮವು ಬೆಂಗಳೂರಿನ ವಸಂತನಗರದಲ್ಲಿರುವ ಶ್ಯಾಂಘ್ರಿಲಾ ಹೋಟೆಲ್ನಲ್ಲಿ ಅದ್ಧೂರಿಯಾಗಿ ಜರುಗಿತು. ಇತ್ತೀಚೆಗಷ್ಟೇ ಹೈದರಾಬಾದ್ನಲ್ಲಿ ಲಾಂಚ್ ಮಾಡಿದ್ದು ಈಗ ಬೆಂಗಳೂರಿನಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮಕ್ಕೆ ಫ್ಯಾಷನ್ ಮತ್ತು ಬೆಳ್ಳಿತೆರೆಯ ಪ್ರಮುಖರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಬೆಂಗಳೂರಿನ ಮಾಡೆಲ್ಗಳಿಂದ ಫ್ಯಾಷನ್ ಷೋ ಕೂಡಾ ನಡೆಸಲಾಯಿತು.
ಫ್ಯಾಷನ್ ಟಿ.ವಿ.ಯ ಭಾರತದ ಮಾಲೀಕ ಕಮಾರ್ ಹೇಳುವಂತೆ, “ಅಂತರಾಷ್ಟ್ರೀಯ ಮಟ್ಟದ ಫ್ಯಾಷನ್ನ್ನು ಭಾರತೀಯರಿಗೆ ತಲುಪಿಸುವ ಕಾರ್ಯಕ್ಕೆ ಮುಂದಾಗಿದ್ದೇವೆ. ಇದು ಎಲ್ಲಾ ಮೆಟ್ರೋ ಸಿಟಿಗಳಿಗೂ ಮುಂದುವರೆಯುವ ಪ್ರಯಾಣವಾಗಿದೆ. ಭಾರತೀಯ ಫ್ಯಾಷನ್ ಕ್ಷೇತ್ರದ ಆಯ್ಕೆ ಫ್ಯಾಷನ್ ಮತ್ತು ಶೈಲಿಗಳ ಸಮ್ಮಿಲನವಾಗಿದೆ. ಇದು ಭಾರತದಲ್ಲಿ ಶುರುವಾದ ಒಂದು ಬಗೆಯ ಪಯಣ.”
ಎಫ್ ಟಿವಿ ಬಗ್ಗೆ::
1997ರಲ್ಲಿ ಪ್ರಾರಂಭವಾದಾಗಿನಿಂದಲೂ ಎಫ್.ಟಿ.ವಿ ಫ್ಯಾಷನ್ ಮತ್ತು ಲೈಫ್ ಸ್ಟೈಲ್ ಗಳಲ್ಲಿ ಅತ್ತುತ್ತಮ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿ ಅದನ್ನು ಅತ್ಯುನ್ನತ ಮಟ್ಟಕ್ಕೆ ತೆಗೆದುಕೊಂಡ ಹೆಗ್ಗಳಿಕೆಯನ್ನು ಸೃಷ್ಟಿಸಿದೆ. ಬೇರೆ ಯಾವ ಜಾಲತಾಣಗಳಲ್ಲೂ ದೊರೆಯದ ಫ್ಯಾಷನ್ ಕುರಿತ ಮಾಹಿತಿಯನ್ನು ವಸ್ತುನಿಷ್ಠವಾಗಿ ನೀಡುವ ಏಕೈಕ ವಾಹಿನಿಯಾಗಿದ್ದು ಫ್ಯಾಷನ್ ಜಗತ್ತಿನ ಅತ್ಯದ್ಭುತ ಚಿತ್ರಗಳು ಮತ್ತು ಅದರ ಕುರಿತ ಪ್ರತ್ಯೇಕ ಮಾಹಿತಿಗಳೊಂದಿಗೆ ತಿಳುವಳಿಕೆ ಮೂಡಿಸಿ ವಿಶ್ವಮಟ್ಟದ ಬ್ರಾಂಡ್ಗಳನ್ನು ತನ್ನತ್ತ ಸೆಳೆಯುತ್ತಿರುವ ವಾಹಿನಿ ಎಫ್.ಟಿ.ವಿ. ಆಗಿದೆ.