ಕನ್ನಡ ಚಿತ್ರರಂಗದಲಿ ಗೀತರಚನೆಗಾರರಾಗಿ ಪ್ರಸಿದ್ಧರಾಗಿರೋ ವಿ.ನಾಗೇಂದ್ರ ಪ್ರಸಾದ್ ಇದೀಗ ನಟನೆಯಲ್ಲಿಯೂ ಮಿಂಚುತ್ತಿದ್ದಾರೆ. ಇದರ ನಡುವೆಯೇ ನಿರ್ದೇಶಕರಾಗಿಯೂ ಸೈ ಅನ್ನಿಸಿಕೊಂಡಿರುವ ಕವಿರತ್ನರು ತಮ್ಮದೇ ಆಡಿಯೋ ಕಂಪನಿಯನ್ನೂ ಹೊಂದಿದ್ದಾರೆ. ಕನ್ನಡದಲ್ಲಿ ಒಂದೂವರೆ ದಶಕದ ಚೆಂದದ ಚಿತ್ರಗೀತೆಗಳನ್ನು ಪಟ್ಟಿ ಮಾಡಲು ಕೂತರೆ ಅದರಲ್ಲಿ ಖಂಡಿತವಾಗಿಯೂ ವಿ. ನಾಗೇಂದ್ರ ಪ್ರಸಾದ್ ಪಾಲು ಬಲು ದೊಡ್ಡದು.

ಸಿನಿಮಾರಂಗದ ನಾನಾ ವಿಭಾಗಗಳಲ್ಲಿ ಅಪ್ಪ ಇಷ್ಟೊಂದು ಬ್ಯುಸಿಯಾಗಿರುವಾಗಲೇ ಮಗಳು ಕೂಡಾ ಬಣ್ಣದಲೋಕಕ್ಕೆ ಎಂಟ್ರಿ ನೀಡುತ್ತಿದ್ದಾಳೆ. ನಾಗೇಂದ್ರ ಪ್ರಸಾದ್ ಪುತ್ರಿ ದಿವಿಜಾ ಮುಖ್ಯ ಭೂಮಿಕೆಯಲ್ಲಿರುವ ‘ಪರಂಗಿ’ ಎನ್ನುವ ಸಿನಿಮಾ ಇವತ್ತಷ್ಟೇ ಚಿತ್ರೀಕರಣವನ್ನು ಆರಂಭಿಸಿದೆ.

ಸಿಲ್ವರ್ ಫೆದರ್ ಬ್ಯಾನರ್ ಅಡಿಯಲ್ಲಿ ಕಾರಂಜಿ ಶ್ರೀಧರ್ ಮತ್ತು ನಾಗೇಂದ್ರ ಪ್ರಸಾದ್ ಸೇರಿ ನಿರ್ಮಿಸುತ್ತಿರುವ ಈ ಸಿನಿಮಾ ಕನ್ನಡದ ಧೀಮಂತ ಕತೆಗಾರ ಡಾ. ಬೆಸಗರಹಳ್ಳಿ ರಾಮಣ್ಣನವರ ‘ಚೆಲುವನ ಪರಂಗಿ ಗಿಡ’ ಕಥೆಯನ್ನು ಆಧರಿಸಿದ್ದು. ತುಂಬಾ ದಿನದಿಂದ ಕಾರಂಜಿ ಶ್ರೀಧರ್‌ಗೆ ಈ ಸುಂzನ ರವಾದ ಕತೆಯನ್ನು ದೃಶ್ಯರೂಪಕ್ಕಿಳಿಸಬೇಕೆನ್ನುವ ಬಯಕೆಯಿತ್ತಂದೆ. ಹಾಗೇ ಒಂದು ದಿನ ‘ಸಿನಿಮಾ ಮಾಡಿಬಿಡೋಣ’ ಅಂತಾ ತೀರ್ಮಾನಿಸಿ ನಾಗೇಂದ್ರ ಪ್ರಸಾದ್ ಅವರ ಮನೆಗೆ ಚರ್ಚೆಗೆಂದು ಬಂದು ಹೋಗುತಿದ್ದರಂತೆ. ಆಗ ಅಲ್ಲೇ ಮುದ್ದುಮುದ್ದಾಗಿ ಓಡಾಡಿಕೊಂಡಿದ್ದ ಕವಿವರ್ಯರ ಮಗಳನ್ನು ನೋಡುತ್ತಿದ್ದವರು, ಅವಳ ಚುರುಕುತನ, ಆಕೆ ಮಾಡುವ ಡಬ್‌ಸ್ಮಾಶ್‌ಗಳನ್ನು ಮಾಡುವ ವಿಧಾನಗಳನ್ನೆಲ್ಲ ಗಮನಿಸಿ ‘ಪರಂಗಿ’ಯ ಪುಟಾಣಿ ಇವಳೇ ಯಾಕೆ ಆಗಬಾರದೆಂದಬ ತೀರ್ಮಾನಕ್ಕೆ ಬರಲಾಯಿತಂತೆ. ಹೀಗಾಗಿ ಕಥೆಯಲ್ಲಿದ್ದ ಚೆಲುವ ಈಗ ಚೆಲುವಿಯಾಗಿದ್ದಾಳೆ. ಸಿನಿಮಾ ‘ಪರಂಗಿ’ಯಾಗಿದೆ. ಮಕ್ಕಳ ಸಿನಿಮಾಗಳನ್ನು ಚೆಂದಗೆ ರೂಪಿಸುವ ರವೀಂದ್ರ ವೆಂಶಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇಂದು ಚಿತ್ರೀಕರಣ ಆರಂಭಿಸಿರುವ ‘ಪರಂಗಿ’ ಆದಷ್ಟು ಬೇಗ ಪರದೆಗೂ ಬರುವಂತಾಗಲಿ. ದಿವಿಜ ನಟನೆಯಲ್ಲಿ ದಿಗ್ವಿಜಯಿಯಾಗಲಿ…

#

LEAVE A REPLY

Please enter your comment!
Please enter your name here

8 + two =