One N Only Exclusive Cine Portal

ಬಟ್ಟೆ ಸರಿಸಿ ಬಿಟ್ಟಿಪ್ರಚಾರ ಗಿಟ್ಟಿಸೋ ವರಸೆ!

 

ಬೇರೆ ಭಾಷೆಗಳಲ್ಲಾದರೆ ಚಿತ್ರವೊಂದರ ಪ್ರಚಾರಕ್ಕೆ ನಾನಾ ಕಸರತ್ತು ನಡೆಸಬೇಕಾಗುತ್ತೆ. ಆದರೆ ಬಾಲಿವುಡ್ ಮಟ್ಟಿಗೆ ಮಾತ್ರ ಅದು ಸಲೀಸಿನ ಸಂಗತಿ. ಬೇರೇನಿಲ್ಲದಿದ್ದರೂ ನಟೀಮಣಿಯರನ್ನು ಮುಂದಿಟ್ಟುಕೊಂಡು ಅವರ ಬಟ್ಟೆ ಸರಿಸೋ ಮೂಲಕವೇ ಇಲ್ಲಿನ ಜನ ಥರ ಥರದಲ್ಲಿ ಆಟವಾಡಿ ಭರ್ಜರಿ ಪ್ರಚಾರ ಗಿಟ್ಟಿಸಿಕೊಂಡು ಬಿಡುತ್ತಾರೆ.

ಸದ್ಯ ಬಿಡುಗಡೆಯ ರೇಸಿನಲ್ಲಿರೋ ಸೋನಾಕ್ಷಿ ಸಿನ್ಹಾ ನಟನೆಯ `ವೆಲ್‌ಕಮ್ ಟು ನ್ಯೂಯಾರ್ಕ್’ ಚಿತ್ರ ತಂಡವೂ ಅಂಥಾದ್ದೇ ಒಂದು ಪಟ್ಟು ಪ್ರದರ್ಶಿಸಿಸುತ್ತಾ ಬಂದಿದೆ. ಈ ಚಿತ್ರದ ನಾಯಕಿ ಸೋನಾಕ್ಷಿ ಮಾದಕ ನಟನೆಯ ಂತಿeಭಾವಂತೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಕಡಿಮೆ ಬಟ್ಟೆ ಹಾಕಿಕೊಂಡು, ದೇಹದ ಬಹು ಭಾಗಗಳನ್ನು ಪ್ರದರ್ಶನ ಮಾಡುತ್ತಾ ತಾನು ನಟಿಸುತ್ತಿರೋ ಚಿತ್ರಕ್ಕೆ ಪ್ರಚಾರ ಕೊಡೋದು ಆಕೆಯ ವರಸೆ.

`ವೆಲ್‌ಕಮ್ ಟು ನ್ಯೂಯಾರ್ಕ್’ ಚಿತ್ರದ ಪ್ರಮೋಷನ್ ವೇಳೆಯಲ್ಲೂ ಕೂಡಾ ಆಕೆ ಅಂಥಾದ್ದೇ ಒಂದು ಭಿನ್ನ ವಿನ್ಯಾಸದ ಬಟ್ಟೆ ತೊಡುವ ಮೂಲಕ ಹಾಟ್ ಲುಕ್ಕಿನಲ್ಲಿ ಕಾಣಿಸಿಕೊಂಡಿದ್ದಾಳೆ. ಈ ಮೂಲಕ `ವೆಲ್‌ಕಮ್ ಟು ನ್ಯೂಯಾರ್ಕ್’ ಚಿತ್ರಕ್ಕೆ ಮತ್ತಷ್ಟು ಪ್ರಚಾರ ತಂದು ಕೊಟ್ಟಿದ್ದಾಳೆ.

ಅಂದಹಾಗೆ `ವೆಲ್‌ಕಮ್ ಟು ನ್ಯೂಯಾರ್ಕ್’ ಚಿತ್ರ ಇದೇ ತಿಂಗಳ ೨೩ ನೇ ತಾರೀಕಿನಂದು ತೆರೆ ಕಾಣಲಿದೆ. ಕರಣ್ ಜೋಹರ್ ನಿರ್ದೇಶನದ ಈ ಚಿತ್ರ ಈ ವರ್ಷದ ಸೂಪರ್ ಹಿಟ್ ಚಿತ್ರವಾಗಿ ದಾಖಲಾಗಲಿದೆ ಎಂಬ ನಿರೀಕ್ಷೆ ಬಾಲಿವುಡ್ ವಲಯದಲ್ಲಿದೆ. ಇದಕ್ಕೆ ಎದುರಾಗಿ ಹೇಳಿಕೊಳ್ಳುವಂಥಾ ಯಾವ ಚಿತ್ರಗಳೂ ಬಿಡುಗಡೆಯಾಗಲು ರೆಡಿ ಇಲ್ಲದ ಕಾರಣದಿಂ `ವೆಲ್‌ಕಮ್ ಟು ನ್ಯೂಯಾರ್ಕ್’ ಚಿತ್ರದ ಗೆಲುವು ಸಲೀಸು ಎಂಬ ಲೆಕ್ಕಾಚಾರ ಬಾಲಿವುಡ್ ಮಂದಿಯದ್ದು!

Leave a Reply

Your email address will not be published. Required fields are marked *


CAPTCHA Image
Reload Image