ಸದ್ಯ ಶಿವಕಾರ್ತಿಕೇಯನ್ ಎ.ಆರ್. ರೆಹಮಾನ್ ಸಂಗೀತ ಸಂಯೋಜನೆ ಮಾಡುತ್ತಿರುವ ಹಾಗೂ ರವಿ ಕುಮಾರ್ ನಿರ್ದೇಶಿಸುತ್ತಿರುವ ಸ್ಕಿಫಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದರ ಜತೆಗೆ ಪಿ.ಎಸ್. ಮಿತ್ರನ್ ನಿರ್ದೇಶನದ ಹಾಗೂ ರಾಕುಲ್ ಪ್ರೀತ್ ಸಿಂಗ್ ನಟಿಸುತ್ತಿರುವ ಹೀರೋ ಚಿತ್ರದಲ್ಲಿಯೂ ಅಭಿನಯಿಸುತ್ತಿದ್ದಾರೆ. ಸದ್ಯದ ಬಿಸಿ ಸುದ್ದಿ ಏನಂದ್ರೆ ಕಾಮಿಡಿಯನ್ ವೆಟಾರನ್ ವಿವೇಕ್ ಹೀರೋ ಬಳಗವನ್ನು ಸೇರಿದ್ದಾರೆ. ಇದು ಶಿವ ಕಾರ್ತಿಕೇಯನ್ ಮತ್ತು ವಿವೇಕ್ ಕಾಂಬಿನೇಷನ್ ನ ಮೊದಲ ಚಿತ್ರವಾಗಿರುವುದು ವಿಶೇಷವಾಗಿದೆ.
ಹೀರೋ ಸಿನಿಮಾ ಕೆಜೆಆರ್ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿದೆ. ಇನ್ನು ಚಿತ್ರಕ್ಕೆ ಯುವನ್ ಶಂಕರ್ ರಾಜ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಕಲ್ಯಾಣಿ ಪ್ರಿಯದರ್ಶನ್ ಹಾಗೂ ಲಾವಣ್ಯ ಶಿವ ಕಾರ್ತಿಕೇಯನ್ ಗೆ ನಾಯಕಿಯರಾಗಿದ್ದಾರೆ. ಆಕ್ಷನ್ ಕಿಂಗ್ ಅರ್ಜುನ್ ಖಳನಾಗಿ ನಟಿಸುತ್ತಿದ್ದಾರೆ.
ಶಿವಕಾರ್ತಿಕೇಯನ್ ಅಭಿನಯದ ಮಿಸ್ಟರ್ ಲೋಕಲ್ ಸಿನಿಮಾವು ಮೇ 1 ರಂದು ರಿಲೀಸ್ ಆಗಲಿದೆ. ಈ ಚಿತ್ರವನ್ನು ಎಂ. ರಾಜೇಶ್ ನಿರ್ದೇಶಿಸಿದ್ದು, ಶಿವಕಾರ್ತಿಕೇಯನ್ ಗೆ ನಾಯಕಿಯಾಗಿ ನಯನತಾರ ಅಭಿನಯಿಸಿದ್ದಾರೆ. ಶಿವ ಕಾರ್ತಿಕೇಯನ್ ಪಾಂಡಿರಾಜ್ ಮತ್ತು ವಿಘ್ನೇಶ್ ಶಿವನ್ ನಿರ್ದೇಶನದಲ್ಲಿ ಸನ್ ಪಿಕ್ಚರ್ಸ್ ಮತ್ತು ಲೈಕಾ ಬ್ಯಾನರ್ ನಲ್ಲಿ ಮತ್ತೂ ಎರಡು ಚಿತ್ರಗಳಲ್ಲಿ ನಟಿಸುವುದು ನಿಕ್ಕಿಯಾಗಿದೆ.
No Comment! Be the first one.