ಕಿರಣ್ ಗೋವಿ ನಿರ್ದೇಶನದ ಯಾರಿಗೆ ಯಾರುಂಟು ಚಿತ್ರದ ಹಾಡುಗಳು ಮಾಧುರ್ಯದಿಂದ ಪ್ರೇಕ್ಷಕರ ಮನಸು ತಾಕುತ್ತಲೇ ಇವೆ. ಒಂದಕ್ಕಿಂತ ಒಂದು ಭಿನ್ನವಾದ ಹಾಡುಗಳು ಬಿ.ಜೆ ಭರತ್ ಸಂಗೀತ ಸ್ಪರ್ಶದೊಂದಿಗೆ ಮೂಡಿ ಬಂದಿವೆ. ಇದೀಗ ಕೃತಿಕಾ ರವೀಂದ್ರ ಮತ್ತು ಪ್ರಶಾಂತ್ ಕಾಂಬಿನೇಷನ್ನಿನ ವೀಡಿಯೋ ಸಾಂಗ್ ಒಂದನ್ನು ಚಿತ್ರತಂಡ ಬಿಡುಗಡೆಗೊಳಿಸಿದೆ. ಇದಕ್ಕೆ ಪ್ರೇಕ್ಷಕರ ಕಡೆಯಿಂದ ಸಿಕ್ಕಿರೋದು ಅಚ್ಚರಿದಾಯಕ ಸ್ಪಂದನೆ!
ಎಂಥಾ ಆಶ್ಚರ್ಯ ಕಂಡೆ ನೀನೇ ಅವಳು, ರಾಣಿ ಸೆರಗನ್ನು ಹೊದ್ದ ಬೆಳದಿಂಗಳು… ಎಂಬ ಈ ಹಾಡನ್ನು ಕೆ ಕಲ್ಯಾಣ್ ಬರೆದಿದ್ದಾರೆ. ಬಿ ಜೆ ಭರತ್ ಹೊಸಾ ಸೌಂಡಿಂಗ್ನೊಂದಿಗೆ ಸೃಷ್ಟಿಸಿರೋ ಈ ಹಾಡಿನ ದೃಷ್ಯ ವೈಭವ ಕೂಡಾ ಬೆರಗಾಗಿಸುವಂತಿದೆ. ಕೃತಿಕಾ ರವೀಂದ್ರ ಮತ್ತು ಪ್ರಶಾಂತ್ ರಾಜ್ ಈ ಹಾಡಿನಲ್ಲಿ ರೊಮ್ಯಾಂಟಿಕ್ ಮೂಡಿನಲ್ಲಿ ಪ್ರೇಕ್ಷಕರ ಮನ ಗೆದ್ದಿದ್ದಾರೆ.
ರಾಜಸ್ಥಾನದ ಮರುಭೂಮಿಯಲ್ಲಿ ಈ ಹಾಡನ್ನು ಚಿತ್ರೀಕರಿಸಲಾಗಿದೆ. ಈ ದೃಷ್ಯಾವಳಿಗಳನ್ನು ಸೆರೆ ಹಿಡಿಯಲಾಗಿರೋ ಕಲಾತ್ಮಕ ಕೈಚಳಕದ ಬಗ್ಗೆ ಶರಣ್ ಸೇರಿದಂತೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ಇಂಥಾ ಎಲ್ಲ ಕಾರಣಗಳಿಂದ ಈ ಹಾಡು ಹೊಸಾ ಟ್ರೆಂಡ್ ಅನ್ನೇ ಸೃಷ್ಟಿಸಿದೆ. ಈ ಮೂಲಕ ಕಿರಣ್ ಗೋವಿಯವರ ಯಶಸ್ವೀ ಗೀತೆಗಳ ಯಾನ ಅಡೆತಡೆಯಿಲ್ಲದೆ ಮುಂದುವರೆದಿದೆ. ಅದುವೇ ಗೆಲುವಾಗಿ ಚಿತ್ರವನ್ನು ಕೈ ಹಿಡಿಯೋ ಸೂಚನೆಗಳೂ ದಟ್ಟವಾಗಿವೆ.
#
No Comment! Be the first one.