ನಿರ್ದೇಶಕ ಮನ್ಸೋರೆ ‘ಹರಿವು’ ಮತ್ತು ‘ನಾತಿಚರಾಮಿ’ ಚಿತ್ರಗಳ ಮೂಲಕ ಕಂಟೆಂಟ್ ಓರಿಯೆಂಟೆಂಡ್ ನಿರ್ದೇಶಕನಾಗಿ ರಾಷ್ಟ್ರಪ್ರಶಸ್ತಿ ಪಡೆಯುವ ಮೂಲಕ ಗುರುತಿಸಿಕೊಂಡವರು. ಇದೀಗ ‘ಆಕ್ಟ್ 1978’ ಎಂಬ ಸೋಷಿಯಲ್ ಥ್ರಿಲ್ಲರ್ ಮೂಲಕ ಪ್ರೇಕ್ಷಕರನ್ನು ದೊಡ್ಡಮಟ್ಟದಲ್ಲಿ ತಲುಪಲು ಹೊರಟಿದ್ದಾರೆ.

ಅದಾಗಲೇ ಸದ್ದಿಲ್ಲದೇ ಶೂಟಿಂಗ್ ಮುಗಿಸಿರುವ ಮನ್ಸೋರೆ ಇದೀಗ ತಮ್ಮ ಹೊಸ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಕಲಾತ್ಮಕ ಚಿತ್ರಗಳ ಪರಿಧಿಯಿಂದ ಕಮರ್ಷಿಯಲ್ ಥ್ರಿಲ್ಲರ್ ನತ್ತ ಹೊರಳಿರುವ ಸುಳಿವು ಕೊಟ್ಟಿದ್ದಾರೆ. ಮೋಷನ್ ಪೋಸ್ಟರಿನಲ್ಲೇ ‘ಆಕ್ಟ್ 1978’ ಚಿತ್ರದ ಬಗ್ಗೆ ದೊಡ್ಡ ನಿರೀಕ್ಷೆ ಹುಟ್ಟು ಹಾಕಿರುವ ಮನ್ಸೋರೆ ಈ ಬಾರಿ ಇನ್ನಿಬ್ಬರು ನಿರ್ದೇಶಕರನ್ನು ಈ ಚಿತ್ರದ ಕಥೆ ಚಿತ್ರಕಥೆ ಸಂಭಾಷಣೆಗೆ ಜೊತೆಯಾಗಿಸಿಕೊಂಡಿದ್ದಾರೆ. ಬೆಲ್ ಬಾಟಂನಂಥಹ ಸಕ್ಸೆಸ್ ಫುಲ್ ಚಿತ್ರಕ್ಕೆ ಕಥೆ ಬರೆದ ನಿರ್ದೇಶಕ- ಕಥೆಗಾರ ದಯಾನಂದ್ ಟಿ.ಕೆ ಮತ್ತು ‘ಪ್ರೀತಿ ಗೀತಿ ಇತ್ಯಾದಿ’ ಚಿತ್ರವನ್ನು ನಿರ್ದೇಶಿಸಿದ ‘ವೀರು ಮಲ್ಲಣ್ಣ’ ಆಕ್ಟ್ 1978′ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆಯಲ್ಲಿ ಮನ್ಸೋರೆ ಜೊತೆಗೆ ನಿಂತಿದ್ದಾರೆ.

ಸುನಿಲ್ ಕುಮಾರ್ ದೇಸಾಯಿಯವರ ಉದ್ಘರ್ಷ’ ಚಿತ್ರ ನಿರ್ಮಿಸಿದ ನಿರ್ಮಾಪಕ ದೇವರಾಜ್ ಆರ್ ನಿರ್ಮಾಣದಲ್ಲಿ ತಯಾರಾಗಿರುವ ಈ ಹೊಸ ಚಿತ್ರದ ಮೋಷನ್ ಪೋಸ್ಟರ್ ಚಿತ್ರದ ಒಟ್ಟು ಕಥಾಹಂದರವನ್ನು ಬಿಟ್ಟು ಕೊಟ್ಟಿಲ್ಲ. ಗರ್ಭಿಣಿ ನಾಯಕಿ ಯಜ್ಞಾಶೆಟ್ಟಿ ಹ್ಯೂಮನ್ ಬಾಂಬರ್ ಅವತಾರದಲ್ಲಿ ಎದೆಗೆ ಬಾಂಬ್ ಕಟ್ಟಿಕೊಂಡು ಸರ್ಕಾರಿ ಕಛೇರಿಯಲ್ಲಿ ಗನ್ ಹಿಡಿದು ಕುಳಿತಿರುವ ಚಿತ್ರದ ಮೂಲಕ ಕ್ಯೂರಿಯಸ್ ಥ್ರಿಲ್ಲರ್ ಒಂದಕ್ಕೆ ಮನ್ಸೋರೆ ಕೈ ಇಟ್ಟಿರುವುದು ಕುತೂಹಲ ಮೂಡಿಸುವಂತಿದೆ.

ಪ್ರಮೋದ್ ಶೆಟ್ಟಿ ಮತ್ತು ಯಜ್ಞಾಶೆಟ್ಟಿ ಮುಖ್ಯಭೂಮಿಕೆಯಲ್ಲಿ ಪ್ರತಿಭಾವಂತ ನಿರ್ದೇಶಕರು ಮತ್ತು ಬರಹಗಾರರ ಕಾಂಬೋನಲ್ಲಿ ರೂಪುಗೊಂಡಿರುವ ಆಕ್ಟ್ 1978′ ಚಿತ್ರ, ತನ್ನ ಮೊದಲ ಮೋಷನ್ ಪೋಸ್ಟರ್ ನಲ್ಲೇ ದೊಡ್ಡಮಟ್ಟದ ಭರವಸೆ ಮೂಡಿಸುತ್ತಿದೆ. ಮುಂದಿನ ವರ್ಷದ ಆರಂಭದಲ್ಲೇ ಸ್ಯಾಂಡಲ್ ವುಡ್ ಗೆ ಬೊಂಬಾಟ್ ಥ್ರಿಲ್ಲರ್ ಒಂದು ಈ ಟೀಮಿನಿಂದ ಸಿಗುವುದಂತೂ ಖಚಿತ ಎನಿಸುತ್ತಿದೆ.

CG ARUN

ತಮಿಳಿಗೆ ಹೊರಟುನಿಂತ 19 ಏಜ್ ಮನುಷ್!

Previous article

ಪಾತ್ರಧಾರಿಯ ಜೊತೆ ಪವಾಡ ಮಾಡಿದರಾ ಪರ್ಮಿ

Next article

You may also like

Comments

Leave a reply

Your email address will not be published. Required fields are marked *