ಟೈಟಲ್ಲಿನ ಮೂಲಕವೇ ಇಡೀ ಚಿತ್ರದ ಬಗ್ಗೆ ಜನ ತಲೆಕೆಡಿಸಿಕೊಳ್ಳುವಂತೆ ಮಾಡುವಲ್ಲಿ ಆದಿಪುರಾಣ ಚಿತ್ರ ಆರಂಭದಿಂದಲೂ ಮುಂಚೂಣಿಯಲ್ಲಿದೆ. ಅದನ್ನು ಚಿತ್ರ ತಂಡ ಕೂಡಾ ಅಚ್ಚುಕಟ್ಟಾಗಿಯೇ ಸಂಭಾಳಿಸಿಕೊಂಡು ಬರುತ್ತಿದೆ. ಇದೀಗ ಈ ಚಿತ್ರದ ಹಾಡಿನ ಟೀಸರ್ ಒಂದು ಬಿಡುಗಡೆಯಾಗೋ ಮೂಲಕ ಆದಿಪುರಾಣದಲ್ಲಿ ಇದುವರೆಗೆ ಅಂದುಕೊಂಡದ್ದಕ್ಕಿಂತ ವಿಶೇಷವಾದುದೇನೋ ಇದೆ ಎಂಬ ವಿಚಾರ ಹೊರ ಬಿದ್ದಿದೆ.
ಈಗ ಚಿತ್ರತಂಡ ಹೊರ ಬಿಟ್ಟಿರೋದು ನಮ್ಮೂರ ರಾಜನು ಎಂಬ ಹಾಡಿನ ಟೀಸರ್. ಇದರ ಮೂಲಕವೇ ಒಟ್ಟಾರೆ ಕಥೆಯ ಹೊಳಹು ನೀಡುತ್ತಲೇ ಮತ್ತಷ್ಟು ಕ್ಯೂರಿಯಾಸಿಟಿ ಹುಟ್ಟಿಸೋ ಕಸರತ್ತನ್ನು ಮಾಡಲಾಗಿದೆ. ಅದು ಯಶಸ್ವಿಯೂ ಆಗಿದೆ. ಈ ಮೂಲಕ ಆದಿಯ ಅಸಲೀ ಪುರಾಣದ ಬಗ್ಗೆ ಚೆಂದದ್ದೊಂದು ಚಿತ್ರಣ ಕಟ್ಟಿ ಕೊಡುವಂಥಾ ಪರಿಣಾಮಕಾರಿ ಪ್ರಯತ್ನ ಪ್ರೇಕ್ಷಕರನ್ನು ಸೆಳೆದಿದೆ.
ಈಗ್ಗೆ ಒಂದಷ್ಟು ಹಿಂದೆ ಆದಿಪುರಾಣ ಚಿತ್ರದ ಕಿಸ್ಸಿಂಗ್ ಸೀನೊಂದು ಹೊರ ಬಿದ್ದಿತ್ತಲ್ಲಾ? ನಾಯಕ ನಾಯಕಿಗೆ ಕಿಸ್ಸು ಕೊಡೋ ಈ ಫೋಟೋ ಮೂಲಕ ಚಿತ್ರದ ಕಥೆಯ ಬಗ್ಗೆ ಬೇರೆಯದ್ದೇ ದಿಕ್ಕಿನಲ್ಲಿ ಚರ್ಚೆಗಳು ಆರಂಭವಾಗಿದ್ದವು. ಇದೀಗ ಬಿಡುಗಡೆಯಾಗಿರೋ ನಮ್ಮೂರ ರಾಜನು ಎಂಬ ಹಾಡಿನ ಟೀಸರ್ ಮೂಲಕ ಮತ್ತೊಂದು ಸುತ್ತಿನಲ್ಲಿ ಮತ್ತೊಂದು ತೆರನಾದ ಚರ್ಚೆಗಳಿಗೆ ಚಾಲನೆ ಸಿಕ್ಕಿದೆ.
ಈ ಟೀಸರ್ನಿಂದಲೇ ಇಡೀ ಹಾಡಿಗಾಗಿ ಜನ ಕಾತರಿಸುವಂತಾಗಿದೆ. ಇಂಥಾ ಪ್ರಯತ್ನಗಳಿಂದಾಗಿ ಎಂತೆಂಥಾ ಚರ್ಚೆಗಳು, ಊಹಾಪೋಹದ ಸುದ್ದಿಗಳು ಹುಟ್ಟಿಕೊಂಡರೂ ಅದೆಲ್ಲವೂ ಆದಿಪುರಾಣಕ್ಕೆ ಪ್ಲಸ್ ಪಾಯಿಂಟುಗಳೇ ಆಗುತ್ತವೆ ಎಂಬುದು ಚಿತ್ರ ತಂಡದ ಖುಷಿಗೆ ಕಾರಣವಾಗಿದೆ.
#
No Comment! Be the first one.