ರಂಜಿತ್ ಕುಮಾರ್ ಗೌಡ ಅವರ ನಿರ್ದೇಶನದ ಆಪಲ್ ಕೇಕ್ ಚಿತ್ರದ ಹಾಡುಗಳ ಧ್ವನಿ ಸುರಳಿ ಬಿಡುಗಡೆ ಸಮಾರಂಭ ಎಸ್.ಆರ್.ವಿ. ಥೀಯೇಟರಿನಲ್ಲಿ ನೆರವೇರಿತು. ವಿ.ನಾಗೇಂದ್ರ ಪ್ರಸಾದ್ ಅವರ ನೇತೃತ್ವದ ಮ್ಯೂಸಿಕ್ ಬಜಾರ್ ಈ ಹಾಡುಗಳನ್ನು ಮಾರುಕಟ್ಟೆಗೆ ತಂದಿದೆ. ಬೇಕರಿಯಲ್ಲಿ ಅಳಿದುಳಿದ ಕೇಕುಗಳನ್ನೆಲ್ಲ ಸೇರಿಸಿ ತಯಾರಿಸುವ ತಿನಿಸನ್ನು ಆಪಲ್ ಕೇಕ್ ಎನ್ನುತ್ತೇವೆ. ಅದೇ ರೀತಿ ಜೀವನದಲ್ಲಿ ಯಾವುದೋ ಒಂದು ಸಂದರ್ಭದಲ್ಲಿ ರಿಜಕ್ಟ್ ಆದಂತಹ ಪಾತ್ರಗಳೇ ಒಂದೆಡೆ ಸೇರಿ ಮಾಡುವ ಸಾಧನೆಯ ಕಥೆಯನ್ನು ಈ ಚಿತ್ರದಲ್ಲಿ ಹೇಳಲಾಗಿದೆ.
ಈ ಚಿತ್ರದಲ್ಲಿ ಮೂರು ಹಾಡುಗಳನ್ನು ರಚಿಸಿದ ವಿ.ನಾಗೇಂದ್ರ ಪ್ರಸಾದ್ ಮಾತನಾಡಿ ಒಂದಷ್ಟು ಜನ ಹೊಸ ಹುಡುಗರು ನನ್ನ ಬಳಿ ಬಂದು ಈ ಸಿನಿಮಾ ಮಾಡುತ್ತಿರುವುದಾಗಿ ಹೇಳಿದರು. ಅಲ್ಲದೇ ಪ್ರತೀ ಹಂತದಲ್ಲೂ ನನ್ನಲ್ಲಿ ಚರ್ಚೆ ಮಾಡಿದ್ದಾರೆ. ರಂಜೀತ ಕುಮಾರ್ ಗೌಡ ಮೊದಲ ಚಿತ್ರದಲ್ಲೇ ತಾನೇನೆಂದು ತೊರಿಸಿದ್ದಾರೆ. ಕನ್ನಡದಲ್ಲಿ ಸಿನಿಮಾ ಮಾಡುವುದೇ ದೊಡ್ಡ ಶ್ರಮ ಅಂತಹದರಲ್ಲಿ ಇವರು ಕನ್ನಡ, ತಮಿಳು ಹಾಗು ತೆಲಗು ಸೇರಿದಂತೆ ಮೂರು ಭಾಷೆಗಳಲ್ಲಿ ಈ ಚಿತ್ರ ತಯಾರಿಸಿ ಸೆನ್ಸರ್ ಕೂಡ ಮಾಡಿಸಿದ್ದಾರೆ. ಹುಡುಗರು ತಮ್ಮ ಕನಸುಗಳನ್ನು ಈಡೇರಿಸಿಕೊಳಲ್ಲು ಹಾಕುವ ಎಫರ್ಟ್ ಈ ಚಿತ್ರದ ಕಥೆಯಾಗಿದೆ.
ಜೀವನದಲ್ಲಿ ತುಂಬಾ ಶ್ರಮದಿಂದ ಮುಂದೆ ಬಂದಿರುವ ವಿಕ್ಟರಿ ವಾಸು, ನಾಗೇಂದ್ರ ಅರಸ್, ಕೆ.ಮಾದೇಶ್, ಅಲ್ಲದೇ ಇನ್ನೂ ಕೆಲವರ ಕೈಲಿ ಚಿತ್ರದ ಆಡಿಯೋ ರಿಲೀಸ್ ಮಾಡಿಸಬೇಕೆಂದು ಪ್ಲಾನ್ ಹಾಕಿಕೊಂಡಿದ್ದೆ. ಇಲ್ಲಿ ಈ ಮೂವರಷ್ಟೆ ಬಂದಿದ್ದಾರೆ ಎಂದು ಹೇಳಿದರು. ಅದೇ ರೀತಿ ನಿರ್ದೇಶಕರಾದ ವಿಕ್ಟರಿ ವಾಸು, ನಾಗೇಂದ್ರ ಅರಸ್ ಸೇರಿ ಚಿತ್ರದ ಆಡಿಯೊ ರಿಲೀಸ್ ಮಾಡಿದರು. ಮೊದಲು ನಿದೇಶಕ ಮಾದೇಶ್ ಮಾತನಾಡಿ ಹೊಸಬರಾದರೂ ನಮ್ಮನ್ನು ಗುರುತಿಸಿ ನಮ್ಮಿಂದ ಆಡಿಯೊ ರಿಲೀಸ್ ಮಾಡಿಸಿದ್ದು ಖುಷಿ, ಹಾಡುಗಳನ್ನು ತುಂಬಾ ಚೆನ್ನಾಗಿ ಮಾಡಿದ್ದಾರೆ, ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.
ಈ ಚಿತ್ರದ ನಾಯಕ ಹಾಗೂ ನಿರ್ಮಾಪಕರಾದ ಅರವಿಂದ ಕುಮಾರ್ ಗೌಡ ಮಾತನಾಡಿ ನಾನೂ ಕೂಡ ನಟನಾಗಿಯೇ ಚಿತ್ರರಂಗಕ್ಕೆ ಬಂದೆ, ದಾನಮ್ಮ ದೇವಿ ನನ್ನ ಮೊದಲ ಚಿತ್ರ, ಐದು ಜನ ಸ್ನೇಹಿತರು ಸೇರಿ ಒಂದು ಬ್ಯಾನರ್ ಆರಂಭಿಸಿದೆವು. ಸಿನಿಮಾ ಮಾಡುತ್ತೇನೆ ಎಂಬ ನಂಬಿಕೆ ಇರಲಿಲ್ಲ. ಶ್ರೀಧರ್ ಕಷ್ಟಪಟ್ಟು ಹಾಡುಗಳನ್ನು ಮಾಡಿಕೊಟ್ಟಿದ್ದಾರೆ ಎಂದರು. ವಿಜಯ್ ಶಂಕರ್, ಅರವಿಂದ್ ಕುಮಾರ್, ರಂಜೀತಕುಮಾರ್, ಶುಭ ರಕ್ಷ, ಚೈತ್ರ ಶೆಟ್ಟಿ ಹಾಗು ಕೃಷ್ಣಹನಗಿ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
#