ಬರೋಬ್ಬರಿ ಏಳು ವರ್ಷದ ಬಳಿಕ ಅಜಯ್ ದೇವಗನ್ ಮತ್ತು ಅಭಿಷೇಕ್ ಬಚ್ಚನ್ ಜೋಡಿ ಒಂದೇ ಸಿನಿಮಾದಲ್ಲಿ ನಟಿಸುತ್ತಿದೆ. ಇನ್ನೂ ಹೆಸರಿಡದ ಈ ಸಿನಿಮಾವನ್ನು ಕೂಕಿ ಗುಲಾಟಿ ನಿರ್ದೇಶನ ಮಾಡುತ್ತಿದ್ದು, ಅಜಯ್ ದೇವಗನ್ ಅವರೇ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಇನ್ನು ಇಲಿಯಾನ ಡಿಕ್ರೂಸ್ ಅವರನ್ನು ಈ ಚಿತ್ರಕ್ಕೆ ನಾಯಕಿಯಾಗಿ ಫೈನಲ್ ಮಾಡಲಾಗಿದೆ.
ಅಜಯ್ ದೇವಗನ್ ಮತ್ತು ಅಭಿಷೇಕ್ ಬಚ್ಚನ್ ಜೋಡಿ ಈ ಹಿಂದೆ ಝಮೀನ್, ಯುವ ಮತ್ತು ಎಲ್ ಓ ಸಿ ಕಾರ್ಗಿಲ್ ಚಿತ್ರದಲ್ಲಿ ಒಟ್ಟಾಗಿ ನಟಿಸಿತ್ತು. ಕೊನೆಯದಾಗಿ 2012ರಲ್ಲಿ ಬೋಲ್ ಬಚ್ಚನ್ ಸಿನಿಮಾದಲ್ಲಿ ನಟಿಸಿ ಪ್ರೇಕ್ಷಕರಿಗೆ ಭರಪೂರ ಮನರಂಜನೆಯನ್ನು ನೀಡುವಲ್ಲಿ ಯಶಸ್ವಿಯಾಗಿತ್ತು. ಎಲ್ಲ ಅಂದುಕೊಂಡಂತೆ ಆದರೆ ಮತ್ತೊಮ್ಮೆ ಇದೇ ಜೋಡಿ ಹೊಸ ಸಿನಿಮಾ ಮೂಲಕ ಮತ್ತದೇ ಧಮಾಕ ಸೃಷ್ಟಿಸಲಿದೆ.