ಲವ್ ಸಬ್ಜೆಕ್ಟಿನ ಸಿನಿಮಾ ಮಾಡುವವರು ತೀರಾ ಫ್ರೆಶ್ ಎನಿಸುವ ಸಂಭಾಷಣೆ ಬೇಕೆನಿಸಿದರೆ, ಹೇಗಾದರೂ ಅಜ್ಜೀಪುರದ ಈ ರವಿಯನ್ನು ಒಪ್ಪಿಸಿ ಬರೆಸಿಕೊಳ್ಳಿ.
ಇವರು ರವಿ ಅಜ್ಜೀಪುರ. ಮಾಧ್ಯಮ ವಲಯದಲ್ಲಿವರು ಸದಾ ಪ್ರವಹಿಸುವ ಅಚ್ಚರಿ. ಪ್ರಿಂಟ್ ಮೀಡಿಯಾದಲ್ಲಿ ಹೆಸರು ಮಾಡುತ್ತಿದ್ದಾಗಲೇ ಸಡನ್ನಾಗಿ ಟೀವಿ ಮಾಧ್ಯಮದತ್ತ ಮುಖ ಮಾಡಿದವರು. ಅಲ್ಲಿಂದ ಮತ್ತೆ ಪತ್ರಿಕೆಯ ಕಡೆ ‘ಮನಸು’ ಕೊಟ್ಟವರು. ಪತ್ರಕರ್ತರಾಗಿದ್ದುಕೊಂಡೇ ವಿನ್ಯಾಸ ಕಲಾವಿದರಾಗಿ, ನೂರಾರು ಪುಸ್ತಕಗಳ ಮುಖಪುಟಗಳಿಗೆ ಬಣ್ಣ ತುಂಬಿದವರು. ಒಂದು ಪತ್ರಿಕೆಯ ಕಂಟೆಂಟ್ ಹೇಗಿರಬೇಕು ಅನ್ನೋದರ ಜೊತೆಗೆ ಅದರ ಪ್ರೆಸೆಂಟೇಷನ್ ಕೂಡಾ ಹೀಗೇ ಇರಬೇಕು ಅಂತಾ ತೋರಿಸಿಕೊಟ್ಟವರು. ಪತ್ರಿಕೆಗಳ ಔಟ್ ಲುಕ್ಕನ್ನೇ ಬದಲಿಸಿ ʻಪುಟವಿನ್ಯಾಸ ಕೂಡಾ ಕಲೆʼ ಅನ್ನೋದನ್ನು ಪ್ರೂವ್ ಮಾಡಿದವರು.
ರವಿ ಬೆಳಗೆರೆ ಹೊರತರುತ್ತಿದ್ದ ʻಓ ಮನಸೇʼಯ ಹೂರಣ, ತೋರಣಗಳೆರಡನ್ನೂ ಚೆಂದಗೊಳಿಸುತ್ತಿದ್ದವರು ಇವರೇ. ಅಜ್ಜೀಪುರ ಬರೆದಿರುವ ಚೆಂದನೆಯ ಬರಹಗಳು ಈ ವರೆಗೆ ಎಷ್ಟೋ ಜನರ ಪರ್ಸನಾಲಿಟಿಯನ್ನು ಡೆವಲಪ್ ಮಾಡಿವೆ. ಆಗೆಲ್ಲಾ ಇಂಗ್ಲೀಷಲ್ಲಿ ಪ್ರಕಟಗೊಂಡ ವ್ಯಕ್ತಿತ್ವ ವಿಕಸನ ಬರಹಗಳನ್ನು ಕೆಲವರು ಜಾಳುಜಾಳಾಗಿ ಕನ್ನಡೀಕರಿಸುತ್ತಿದ್ದರು. ಅವು ಗೂಗಲ್ ಟ್ರಾನ್ಸ್ಲೇಟಿನ ಹಂಡೆಯಲ್ಲಿ ಅಲ್ಲಾಡಿಸಿ, ಅದ್ದಿ ತೆಗೆದಷ್ಟು ಶುಷ್ಕವಾಗಿರುತ್ತಿದ್ದವು. ಆ ಹೊತ್ತಲ್ಲಿ ಪರ್ಸನಾಲಿಟಿ ಡೆವಲಪ್ ಮೆಂಟ್ ಕುರಿತ ಲೇಖನಗಳನ್ನು ಮನಸ್ಸಿಗಪ್ಪಿಕೊಂಡು ಓದುವಂತೆ ಬರೆದವರು ರವಿ ಅಜ್ಜೀಪುರ. ರವಿ ಬೆಳಗೆರೆ ಬರವಣಿಗೆಯ ಆಕರ್ಷಕ ಶೈಲಿಯನ್ನು ಯಥಾವತ್ತು ಮುಂದುವರೆಸಿದ ಅಜ್ಜೀಪುರ ಓ ಮನಸೇ ಯನ್ನು ಶ್ರದ್ಧೆ ವಹಿಸಿ ರೂಪಿಸುತ್ತಿದ್ದರು. ಆ ಮ್ಯಾಗಜೀನು ಪ್ರತೀ ಮನೆಗಳನ್ನು ತಲುಪಿ ಮನಸ್ಸುಗಳಿಗೆ ಹತ್ತಿವಾಗಿದ್ದರ ಹಿಂದೆ ಇವರ ಶ್ರಮ ದೊಡ್ಡದು. ಆರಂಭದಲ್ಲಿ ನವಕರ್ನಾಟಕ ಪ್ರಕಾಶನ ಸಂಸ್ಥೆಯಲ್ಲಿ ಒಂದಷ್ಟು ವರ್ಷಗಳ ಕಾಲ ಕೆಲಸ ಮಾಡಿ, ಟೀವಿನೈನ್ ಸೇರಿದಂತೆ ಕೆಲವು ವಾಹಿನಿಗಳಲ್ಲಿ ಪತ್ರಕರ್ತರಾಗಿ, ನಿರೂಪಕರಾಗಿ ಕೂಡಾ ಕಾರ್ಯ ನಿರ್ವಹಣೆ ಮಾಡಿರುವ ರವಿ ಓ ಮನಸೇ ಪತ್ರಿಕೆಯ ಸಂಪಾದಕರೂ ಆಗಿದ್ದವರು.
ರವಿ ಅಜ್ಜೀಪುರ ಬಗ್ಗೆ ಇಷ್ಟು ಹೇಳಲೂ ಕಾರಣವಿದೆ. ಇವರೀಗ ಅಜ್ಜೀಪುರ ಅಡ್ಡ ಹೆಸರಿನ ತಾಣ ತೆರೆದಿದ್ದಾರೆ. ಸದ್ಯ ಫೇಸ್ ಬುಕ್ಕಲ್ಲಿದು ಚಾಲನೆಗೊಂಡಿದೆ. ತುಂಬಾ ಖುಷಿಯಲ್ಲಿದ್ದಾಗ, ಮನಸ್ಸು ಭಾರ ಅನ್ನಿಸಿದಾಗ ಅಥವಾ ಯಾವುದೇ ಸಮಯದಲ್ಲಿ ಒಂದು ಸಲ ಸ್ಕ್ರೋಲ್ ಮಾಡಿದರೆ ನೆಮ್ಮದಿ ನೀಡುವ ಜಾಗ ಇದು. ಇಲ್ಲಿ ರವೀ ಅವರು ಬರೆದ ಚೆಂದದ ಬರಹಗಳಿವೆ. ಮುದ್ದಾಗಿ ವಿನ್ಯಾಸಗೊಂಡ ರವಿ ಬೆಳಗೆರೆ ಹೇಳಿದ ಶುಭಾಷಿತಗಳು ಸಿಗುತ್ತವೆ. ವ್ಯಕ್ತಿ ಚಿತ್ರಣಗಳು, ಗತಿಸಿಹೋದ ದಿನಗಳ ನೆನಪುಗಳು, ಹಾಡುಗಳ ಕುರಿತ, ಮನಸ್ಸಿಗೆ ಹತ್ತಿರವಾಗುವ ಆಪ್ತ ಬರಹಗಳು ನಿಮ್ಮನ್ನು ಖಂಡಿತಾ ಖುಷಿಗೊಳಿಸುತ್ತವೆ. ನಿಮ್ಮ ಜೀವನ ಪ್ರೀತಿಯನ್ನು ಇಮ್ಮಡಿಗೊಳಿಸುತ್ತದೆ….
ಹ್ಞಾ… ಇನ್ನೊಂದು ವಿಚಾರ…! ಲವ್ ಕುರಿತು ಮಜಾ ಕೊಡುವಂತೆ ಬರೆಯೋದರಲ್ಲಿಯೂ ರವಿ ಅವರದ್ದು ಎತ್ತಿದ ಕೈ. ಇವರೇ ಬರೆದಿರುವ ʻನೆನಪಿರಲಿ ಪ್ರೀತಿ ಕಾಮವಲ್ಲʼ ಮತ್ತು ʻಪ್ರೇಮಸೂತ್ರʼ ಎಂಬೆರಡು ಪುಸ್ತಕಗಳು ಅದಕ್ಕೆ ಸಾಕ್ಷಿ. ಲವ್ ಸಬ್ಜೆಕ್ಟಿನ ಸಿನಿಮಾ ಮಾಡುವವರು ತೀರಾ ಫ್ರೆಶ್ ಎನಿಸುವ ಸಂಭಾಷಣೆ ಬೇಕೆನಿಸಿದರೆ, ಹೇಗಾದರೂ ಅಜ್ಜೀಪುರದ ಈ ರವಿಯನ್ನು ಒಪ್ಪಿಸಿ ಬರೆಸಿಕೊಳ್ಳಿ. https://www.facebook.com/ajjipuraadda
No Comment! Be the first one.