’ಶೆರ್ಲಾಕ್ ಹೋಮ್ಸ್’ ಹಾಲಿವುಡ್ ಸರಣಿ ಸಿನಿಮಾಗಳ ನಿರ್ದೇಶಕ ಗೈ ರಿಚಿ ’ಅಲಾದ್ದೀನ್’ ಇಂಗ್ಲಿಷ್ ಸಿನಿಮಾದೊಂದಿಗೆ ತೆರೆಗೆ ಮರಳುತ್ತಿದ್ದಾರೆ. 1192ರಲ್ಲಿ ತೆರೆಕಂಡ ಅನಿಮೇಟೆಡ್ ಸಿನಿಮಾ ಆಧರಿಸಿ ತಯಾರಾಗುತ್ತಿರುವ ಚಿತ್ರವಿದು. ರಿಚಿ ಜೊತೆ ಜಾನ್ ಆಗಸ್ಟ್ ಚಿತ್ರಕಥೆಯಲ್ಲಿ ಕೈಜೋಡಿಸಿದ್ದಾರೆ. ವಿಶೇಷವೆಂದರೆ ’ಅಲಾದ್ದೀನ್’ ಚಿತ್ರದ ಕ್ಲಾಸಿಕ್ ಪಾತ್ರ ಬ್ಲ್ಯೂ ಜಿನಿಯಾಗಿ ಹಾಲಿವುಡ್ ಸ್ಟಾರ್ ವಿಲ್ ಸ್ಮಿತ್ ಇದ್ದಾರೆ! ಟೀಸರ್ನಲ್ಲಿ ಇದರ ಝಲಕ್ ಇದು ಕಂಪ್ಯೂಟರ್ ಗ್ರಾಫಿಕ್ಸ್ನಲ್ಲಿ ಇನ್ನಷ್ಟು ಪರಿಪೂರ್ಣತೆ ಬೇಕಿತ್ತು ಎನಿಸುತ್ತದೆ.
ರಾತ್ರಿಯ ನೀಲಿ ಆಕಾಶ, ಚಂದ್ರಮನಿರುವ ವಿಶಾಲ ಮರುಭೂಮಿಯ ಸನ್ನಿವೇಶದೊಂದಿಗೆ ಟೀಸರ್ ಆರಂಭವಾಗುತ್ತದೆ. ಹಿನ್ನೆಲೆಯಲ್ಲಿ ’ಅಲಾದ್ದೀನ್’ ಕ್ಲಾಸಿಕ್ ಥೀಮ್ ಮ್ಯೂಸಿಕ್ ಬಳಕೆಯಾಗಿದೆ. ಖಳಪಾತ್ರಧಾರಿ ಮಾರ್ವೆನ್ ಕೆನ್ಝಾರ್ ಪ್ರವೇಶಿಸುತ್ತಾ ದೀಪವನ್ನು ಹಸ್ತಾಂತರಿಸುವಂತೆ ಅಲಾದ್ದೀನ್ಗೆ ಆದೇಶ ನೀಡುತ್ತಾನೆ. ರಾಣಿ ಜಾಸ್ಮೈನ್ ಪಾತ್ರದಲ್ಲಿ ನವೋಮಿ ಸ್ಕಾಟ್ ಮತ್ತು ರಾಣಿಯ ಪ್ರೀತಿಯ ಹುಲಿ ರಾಜಾ ಎಂಟ್ರಿ ಸೀನ್ ನಂತರ ಅಲಾದ್ದೀನ್ ಲ್ಯಾಂಪ್ ಚಮತ್ಕಾರ ಮಾಡುತ್ತಾನೆ. ದೀಪದಿಂದ ಧೂಪದಂತೆ ಹೊರಬರುವ ಬ್ಲ್ಯೂ ಜಿನಿಯಾಗಿ ವಿಲ್ ಸ್ಮಿತ್, “ನಿನಗೆ ನಿಜವಾಗಲೂ ನಾನ್ಯಾರೆಂದು ತಿಳಿದಿಲ್ಲವೇ?” ಎಂದು ಪ್ರಶ್ನಿಸುತ್ತಾನೆ. ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಸಿನಿಮಾ ಮಾರ್ಚ್ ೨೪ರಂದು ತೆರೆಕಾಣಲಿದೆ.
#
No Comment! Be the first one.