ಭಾರತ್ ಸಿನಿಮಾದ ಯಶಸ್ಸಿನ ನಂತರ ನಿರ್ದೇಶಕ ಅಲಿ ಅಬ್ಬಾಸ್ ಜಾಫರ್ ಡಿಜಿಟಲ್ ಮಾಧ್ಯಮಕ್ಕೆ ಪದಾರ್ಪಣೆ ಮಾಡಲಿದ್ದು, ಸದ್ಯ ತಾಂಡವ್ ಎಂಬ ವೆಬ್ ಸರಣಿಯೊಂದನ್ನು ನಿರ್ದೆಶನ ಮಾಡಲಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ನಡೆಯುವ ಪೊಲಿಟಿಕಲ್ ಥ್ರಿಲ್ಲರ್ ಕಥೆಯನ್ನು ಈ ಸರಣಿ ಹೊಂದಿದೆ. ಇದರಲ್ಲಿ ಸೈಫ್ ಆಲಿಖಾನ್ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದು, 2020ರಲ್ಲಿ ವೆಬ್ ಸಿರೀಸ್ ಬಿಡುಗಡೆಯಾಗುವ ಸಾಧ್ಯತೆ ಇದೆ. ಪ್ರೀ ಪ್ರೊಡಕ್ಷನ್ ಹಂತದಲ್ಲಿದ್ದು, ಪಾತ್ರಗಳ ಕುರಿತಾದ ಮಾಹಿತಿಯನ್ನು ಚಿತ್ರತಂಡ ಸದ್ಯದಲ್ಲಿಯೇ ಅಧಿಕೃತಗೊಳಿಸಲಿದೆ.
ಭಾರತ್ ನೂರು ಕೋಟಿ ಕ್ಲಬ್ ಸೇರಿದ ಬೆನ್ನಲ್ಲೇ ಅಲಿ ಅಬ್ಬಾಸ್ ನಿರ್ದೇಶನದ ಜತೆಗೆ ನಿರ್ಮಾಣಕ್ಕೂ ಇಳಿದಿದ್ದಾರೆ. ಹೌದು.. ಅನನ್ಯಾ ಪಾಂಡೆ ಮತ್ತು ಇಶಾನ್ ಖಟ್ಟರ್ ಜೋಡಿಯಾಗಿ ನಟಿಸುತ್ತಿರುವ ಹೊಸ ರೊಮ್ಯಾಂಟಿಕ್ ಪ್ರೇಮಕತೆಯ ಸಿನಿಮಾವನ್ನು ಅಲಿ ಅಬ್ಬಾಸ್ ನಿರ್ಮಾಣ ಮಾಡುತ್ತಿದ್ದು, ಇದೇ ವರ್ಷಾಂತ್ಯಕ್ಕೆ ಆರಂಭವಾಗಲಿದೆ.