ರೆಬಲ್ ಸ್ಟಾರ್ ಅಂಬರೀಶ್ ಮಗ ಅಭಿಷೇಕ್ ಅಂಬರೀಶ್ ನಟನೆಯ ಅಮರ್ ಸಿನಿಮಾದ ರಿಲೀಸ್ ಗೆ ಕ್ಷಣ ಗಣನೆ ಶುರುವಾಗಿದೆ. ರೆಬಲ್ ಸ್ಟಾರ್ ಅಂಬರೀಶ್ ಅವರನ್ನು ಕಳೆದುಕೊಂಡ ಹೊತ್ತಿನಲ್ಲಿ ಅಭಿಷೇಕ್ ನೋವಿನಲ್ಲಿಯೇ ಅಮರ್ ಚಿತ್ರೀಕರಣವನ್ನು ಮುಗಿಸಿ, ತಾಯಿಯ ಪರವಾಗಿ ಮಂಡ್ಯ ಚುನಾವಣೆಯಲ್ಲಿ ಪ್ರಚಾರದ ಕೆಲಸದಲ್ಲಿಯೂ ಭಾಗವಹಿಸಿದ್ದರು. ಈಗಾಗಲೇ ಅಮರ್ ಸಿನಿಮಾ ಟೀಸರ್ ಹಾಗೂ ಕೆಲ ಹಾಡುಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ಇಂದು ಅಮರ್ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಅಭಿನಯಿಸಿರುವ ದರ್ಶನ್ ಹಾಗೂ ರಚಿತಾ ರಾಮ್ ಹೆಜ್ಜೆ ಹಾಕಿರುವ ಕೊಡವ ಶೈಲಿಯ “ಜೋರು ಪಾಟು ಆಟ ಆಡೋಣ” ಅನ್ನೋ ಮತ್ತೊಂದು ಲಿರಿಕಲ್ ವಿಡಿಯೋ ಸಾಂಗ್ ರಿಲೀಸ್ ಭಾಗ್ಯ ಕಂಡಿದೆ. ಈ ಹಾಡು ಕೊಡವ ಸ್ಟೈಲಿನಲ್ಲಿದ್ದು ಸಿಕ್ಕಾಪಟ್ಟೇ ಸದ್ದು ಮಾಡುತ್ತಿದೆ. ಈ ಹಾಡಿನಲ್ಲಿ ದರ್ಶನ್ ಜತೆಯಾಗಿ ಡೈನಾಮಿಕ್ ಸ್ಟಾರ್ ದೇವರಾಜ್, ನಿರೂಪ್ ಭಂಡಾರಿ, ರಚಿತಾ ರಾಮ್ ಹುಚ್ಚೆದ್ದು ಕುಣಿದಿದ್ದಾರೆ. ಇನ್ನು ಈ ಹಾಡಿಗೆ ಅರ್ಜುನ್ ಜನ್ಯಾ ಸಂಗೀತವಿದ್ದು, ಕಿರಣ್ ಕಾವೆರಪ್ಪ ಲಿರಿಕ್ಸ್ ಬರೆದಿದ್ದಾರೆ. ಜೆಸ್ಸಿ ಗಿಫ್ಟ್ ಈ ಮಸ್ತ್ ಹಾಡಿಗೆ ದನಿಯಾಗಿದ್ದಾರೆ. ಇನ್ನು ಅಭಿಷೇಕ್ ಅಂಬರೀಶ್ ಗೆ ನಾಯಕಿಯಾಗಿ ತಾನ್ಯಾ ಹೋಪ್ ಜೊತೆಯಾಗಿದ್ದಾರೆ. ಅಮರ್ ಸಿನಿಮಾ ಮೇ 31ರಂದು ಅಂಬರೀಶ್ ಹುಟ್ಟುಹಬ್ಬದ ಗಿಫ್ಟ್ ಆಗಿ ರಿಲೀಸ್ ಆಗಲಿದೆ. ಅಮರ್ ಗೆ ನಾಗಶೇಖರ್ ಆ್ಯಕ್ಷನ್ ಕಟ್ ಹೇಳಿದ್ದು, ಸಂದೇಶ್ ನಾಗರಾಜು ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.
No Comment! Be the first one.