ಇತ್ತೀಚಿಗಷ್ಟೇ ಸೈರಾ ಸೆಟ್ಟೊಂದರ ಮೇಲೆ ಬೆಂಕಿ ಬಿದ್ದು, ಸಾಕಷ್ಟು ನಷ್ಟ ಅನುಭವಿಸಿದ್ದ ಸೈರಾ ಚಿತ್ರ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಹೌದು ಸಿನಿಮಾ ತಂಡದ ಸಹ ನಟ ರಷ್ಯಾದ ಅಲೆಕ್ಸಾಂಡರ್ ಸಾವನ್ನಪ್ಪಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಇನ್ನು ಈ ಸಾವಿಗೆ ಅತಿಯಾದ ಬಿಸಿಲಿನ ತಾಪವೇ ಕಾರಣವೆಂದು ಹೇಳಲಾಗುತ್ತಿದೆ. ಎರಡು ದಿನಗಳ ಹಿಂದೆಯೇ ಈ ನಟ ಸಾವನ್ನಪ್ಪಿದ್ದು ಸಿನಿಮಾ ತಂಡದ ಅರಿವಿಗೆ ಬಾರದಿರುವುದು ದುರ್ಧೈವ.
ಇನ್ನು ಅಲೆಕ್ಸಾಂಡರ್ ಮೃತ ದೇಹ ಹೈದರಾಬಾದ್ ನ ಗಚ್ಚಿ ಬೌಲಿಯ ಡಿಎಲ್ಎಫ್ ಬಿಲ್ಡಿಂಗ್ ಬಳಿ ಪತ್ತೆಯಾಗಿದೆಯಂತೆ. ಸದ್ಯ ಈ ದೇಹ ಯಾವುದೆಂದು ಕಂಡು ಹಿಡಿಯಲು ಪೊಲೀಸರಿಗೆ ತಲೆನೋವಾಗಿತ್ತು. ಆದರೆ ಅಲೆಕ್ಸಾಂಡರ್ ಬಳಿ ಇದ್ದ ಕ್ಯಾಮರಾದಲ್ಲಿ ಸೈರಾ ಚಿತ್ರದ ಫೋಟೋಗಳು ಕಂಡು ಬಂದಿವೆ. ಹಾಗಾಗಿ ಇವರು ಸಹನಟ ಎಂದು ತಿಳಿದು ಬಂದಿದೆ ಎನ್ನಲಾಗಿದೆ. ರಷ್ಯಾದಿಂದ ಸಿನಿಮಾಗಾಗಿಯೇ ಬಂದಿದ್ದ ಅಲೆಕ್ಸಾಂಡರ್ ಪುನಃ ತಾಯ್ನಾಡಿಗೆ ಹಿಂದಿಗದಂತಾಗಿರುವುದು ಚಿತ್ರತಂಡದ ನೋವಿಗೆ ಕಾರಣವಾಗಿದೆ.
No Comment! Be the first one.