ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ನಾಯಕನಾಗಿ ಪಾದಾರ್ಪಣೆ ಮಾಡುತ್ತಿರುವ ಚಿತ್ರ ಅಮರ್. ನಾಗಶೇಖರ್ ನಿರ್ದೇಶನದ ಈ ಚಿತ್ರ ಚಿತ್ರೀಕರಣದ ಮುಂದಿನ ಹಂತ ಮೈಸೂರಿನಲ್ಲಿ ಪೂರೈಸಲು ಪ್ಲಾನು ಮಾಡಿಕೊಳ್ಳಲಾಗಿದೆ. ಇದಕ್ಕೆ ರಂಗಿತಂರಂಗ ಖ್ಯಾತಿಯ ನಿರೂಪ್ ಭಂಡಾರಿ ಜೊತೆಯಾಗುತ್ತಿರೋದು ಹೊಸಾ ಸುದ್ದಿ.
ನಿರ್ದೇಶಕ ನಾಗಶೇಖರ್ ಅಮರ್ ಚಿತ್ರದಲ್ಲಿ ವಿಶೇಷವಾದೊಂದು ಪಾತ್ರವನ್ನು ಸೃಷ್ಟಿಸಿದ್ದರು. ಆದರೆ ಚಿತ್ರೀಕರಣ ಆರಂಭವಾಗಿ ತಿಂಗಳಾಗುತ್ತಾ ಬಂದರೂ ಅದಕ್ಕೆ ಯಾರನ್ನೂ ಫಿಕ್ಸ್ ಮಾಡಿರಲಿಲ್ಲ. ಇದಕ್ಕೆ ಯಾರನ್ನು ಆಯ್ಕೆ ಮಾಡಿಕೊಳ್ಳೋದು ಎಂಬ ಬಗ್ಗೆ ಬಿಡುವು ಸಿಕ್ಕಾಗಲೆಲ್ಲ ತಲೆ ಕೆಡಿಸಿಕೊಂಡಿದ್ದ ನಾಗಣ್ಣ ಇದೀಗ ಕಡೆಗೂ ನಿರೂಪ್ ಭಂಡಾರಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ನಿರೂಪ್ ಭಂಡಾರಿ ಈ ಆಫರನ್ನು ಬೇರ್ಯಾವ ಯೋಚನೆಯನ್ನೂ ಮಾಡುವ ಗೋಜಿಗೆ ಹೋಗದೆ ಆಯ್ಕೆ ಮಾಡಿಕೊಂಡಿದ್ದಾರಂತೆ. ಸ್ವತಃ ರೆಬೆಲ್ ಸ್ಟಾರ್ ಅಂಬರೀಶ್ ಅವರ ಬಗ್ಗೆ ಭಾರೀ ಅಭಿಮಾನ ಹೊಂದಿರುವವರು ನಿರೂಪ್ ಭಂಡಾರಿ. ಅವರ ಪುತ್ರನ ಚಿತ್ರದಲ್ಲಿ ತನಗೆ ನಟಿಸೋ ಅವಕಾಶ ಸಿಕ್ಕಿರೋದಕ್ಕೆ ನಿರೂಪ್ ಥ್ರಿಲ್ ಆಗಿದ್ದಾರಂತೆ. ನಂತರ ನಾಗಶೇಖರ್ ತಮ್ಮ ಪಾತ್ರದ ಬಗ್ಗೆ ಹೇಳಿದ ಮೇಲಂತೂ ಆ ಖುಷಿ ಇಮ್ಮಡಿಸಿದೆ.
ಇಡೀ ಕಥೆಗೊಂದು ಟ್ವಿಸ್ಟ್ ನೀಡುವಂಥಾ ಮಹತ್ವದ ಪಾತ್ರವನ್ನು ನಿರೂಪ್ ಭಂಡಾರಿ ನಿರ್ವಹಿಸಲಿದ್ದಾರೆ. ಅವರು ಮುಂದಿನ ವಾರ ಮೈಸೂರಿನಲ್ಲಿ ಅಮರ್ ಚಿತ್ರೀಕರಣಕ್ಕೆ ಸೇರಿಕೊಳ್ಳಲಿದ್ದಾರೆ.
#