ಮ್ಯಾರೇಜ್ ಗೂ ಮೊದಲೇ ತಾಯಿಯಾಗಿ ಆನಂತರ ಎಂಗೇಜ್ ಮೆಂಟ್ ಮಾಡಿಕೊಂಡು ಈಗಷ್ಟೇ ಪ್ರಸವನದ ಆನಂದದಲ್ಲಿರುವ ಆ್ಯಮಿ ಜಾಕ್ಸನ್ ಸಿನಿಮಾಕ್ಕಿಂತ ತನ್ನ ಮದುವೆ ವಿಚಾರಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸದ್ದು ಮಾಡಿದವರು. ತನ್ನ ಗರ್ಭಾವಸ್ಥೆಯ ಆರಂಭದ ದಿನಗಳಿಂದ ಇಲ್ಲಿಯವರೆಗೂ ಸಾಕಷ್ಟು ಸಂತಸ ಕ್ಷಣದ ಪೋಟೋಗಳನ್ನು ಶೇರ್ ಮಾಡುತ್ತಲೇ ಇರುವ ಆ್ಯಮಿ ಮತ್ತೊಮ್ಮೆ ಅಂತಹುದೇ ಫೋಟೋಗಳನ್ನು ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.
ಇಲ್ಲಿಯವರೆಗೂ ಒಬ್ಬಂಟಿಯಾಗಿ ತನ್ನ ಬೇಬಿ ಬಂಪ್ ನೊಂದಿಗೆ ಫೋಸ್ ನೀಡುತ್ತಿದ್ದ ಆ್ಯಮಿ ತಮ್ಮ ಭಾವಿ ಪತಿ ಮಲ್ಟಿ ಮಿಲಿಯನೇರ್ ಉದ್ಯಮಿ ಜಾರ್ಜ್ ಪನಯೋಟು ಅವರೊಂದಿಗೆ ಸ್ವಿಮ್ಮಿಂಗ್ ಪೂಲ್ನಲ್ಲಿ ಎಂಜಾಯ್ ಮೂಡ್ ನಲ್ಲಿರುವ ಪೋಟೋಗಳನ್ನು ಸೋಶಿಯಲ್ ಮೀಡಿಯದಲ್ಲಿ ಹರಿಬಿಟ್ಟಿದ್ದಾರೆ. ಎಲ್ಲ ಅಂದುಕೊಂಡಂತಾದರೆ ಆ್ಯಮಿ ಮತ್ತು ಜಾರ್ಜ್ ತಮ್ಮ ಮಗುವಿನ ಸಮ್ಮುಖದಲ್ಲಿ 2020ಕ್ಕೆ ಗ್ರೀಸ್ ನಲ್ಲಿ ಸಪ್ತಪದಿ ತುಳಿಯುವ ಸಾಧ್ಯತೆಯೂ ಇದೆ.
Comments