ಕಲ್ಯಾಣ್ ಕೃಷ್ಣ ಅವರು ನಿರ್ದೇಶನ ಮಾಡುತ್ತಿರುವ ಬಹುನಿರೀಕ್ಷಿತ ಚಿತ್ರ ಬಂಗಾರ್ರಾಜು. ಸಮಂತಾ ಅಕ್ಕಿನೇನಿ ಮತ್ತು ನಾಗಚೈತನ್ಯ ಕಾಂಬಿನೇಷನ್ನಿನ ಈ ಸಿನಿಮಾವನ್ನು ಸ್ವತಃ ನಾಗಾರ್ಜುನ ಅಕ್ಕಿನೇನಿಯವರೇ ತಮ್ಮ ಅನ್ನಪೂರ್ಣ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. 2016ರಲ್ಲಿ ಬಿಡುಗಡೆಯಾದ ಸೋಗ್ಗಾಡೆ ಚಿನ್ನಿನಾಯನಾ ಚಿತ್ರದ ಸೀಕ್ವೆಲ್ ಇದಾಗಿದ್ದು, ನಾಗಾರ್ಜುನ ಕುಟುಂಬದ ಈ ಸಿನಿಮಾ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಯನ್ನೂ ಇಟ್ಟುಕೊಂಡಿದ್ದಾರೆ.
ಕಲ್ಯಾಣ್ ಕೃಷ್ಣ ಅವರೇ ಸೊಗ್ಗಾಡೆ ಚಿನ್ನಿನಾಯನಾ ಎಂಬ ಚಿತ್ರವನ್ನೂ ನಿರ್ದೇಶಿಸಿದ್ದು, ಈ ಸಿನಿಮಾದಲ್ಲಿ ತನ್ನ ಸಂಬಂಧಿಕರಿಂದಲೇ ಕೊಲೆಯಾಗುವ ವ್ಯಕ್ತಿ ಬಂಗಾರ್ರಾಜು. ಯಮನ ಪರ್ಮಿಷನ್ ಪಡೆದು ಮತ್ತೆ ಭೂಲೋಕಕ್ಕೆ ವಾಪಸ್ ಆಗಿ ತನ್ನ ಸಾವಿನ ಹಿಂದಿನ ಕಾರಣವನ್ನು ಪತ್ತೆ ಹಚ್ಚುವುದೇ ಚಿತ್ರದ ಒಂದೆಳೆಯಾಗಿತ್ತು. ಇದರಲ್ಲಿ ಅಕ್ಕಿನೇನಿ ನಾಗಾರ್ಜುನ, ರಮ್ಯಕೃಷ್ಣ, ಲಾವಣ್ಯ ತ್ರಿಪಾಠಿ ನಟಿಸಿದ್ದರು. ಈ ಸಿನಿಮಾವು ಕನ್ನಡದಲ್ಲಿ ‘ಉಪೇಂದ್ರ ಮತ್ತೆ ಬಾ’ ಎಂದು ರಿಮೇಕ್ ಆಗಿತ್ತು. ಇದರಲ್ಲಿ ಉಪೇಂದ್ರ, ಪ್ರೇಮಾ ಹಾಗೂ ಶ್ರುತಿ ಹರಿಹರನ್ ನಟಿಸಿದ್ದರು.