ಶಿವರಾಜ್ ಕುಮಾರ್ ಮತ್ತು ವಾಸು ಜೋಡಿ ಈ ಹಿಂದೆ ಶಿವಲಿಂಗ ಚಿತ್ರದ ಮೂಲಕ ಗೆಲುವು ದಾಖಲಿಸಿತ್ತು. ಈ ಜೋಡಿ ಮತ್ತೊಂದು ಚಿತ್ರದ ಮೂಲಕ ಒಂದಾಗುತ್ತಿರೋದರ ಬಗ್ಗೆ ಸುದ್ದಿಯೂ ಹರಡಿಕೊಂಡಿತ್ತು. ದ್ವಾರಕೀಶ್ ಬ್ಯಾನರಿನ ಐವತ್ತೆರಡನೆಯದ್ದಾದ ಈ ಸಿನಿಮಾಕ್ಕೀಗ ಆನಂದ್ ಅಂತ ಹೆಸರಿಡಲಾಗಿದೆ!
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ವೃತ್ತಿ ಬದುಕಿನಲ್ಲಿ ಆನಂದ್ ಎಂಬ ಟೈಟಲ್ಲಿಗೇ ಒಂದು ಮಹತ್ವವಿದೆ. ರಾಜಣ್ಣನ ಹಿರಿಮಗ ಹೀರೋ ಆಗಿ ಎಂಟ್ರಿ ಕೊಟ್ಟಿದ್ದೇ ಅನಂದ್ ಎಂಬ ಚಿತ್ರದ ಮೂಲಕ. ಇದೀಗ ಅಖಂಡ ಮೂರು ದಶಕದ ನಂತರ ಮತ್ತೆ ಶಿವಣ್ಣ ಅದೇ ಟೈಟಲ್ ನ ಸಿನಿಮಾದಲ್ಲಿ ನಟಿಸುತ್ತಿದ್ದಾರೆಂದ ಮೇಲೆ ಅಭಿಮಾನಿಗಳು ಥ್ರಿಲ್ ಆಗದಿರಲು ಸಾಧ್ಯವೇ ಇಲ್ಲ.
ಸರಳವಾಗಿಯೇ ಮಹೂರ್ತ ನಡೆಸಿಕೊಂಡಿದ್ದ ಆನಂದ್ಗೆ ಈಗ ಚಿತ್ರೀಕರಣ ಶುರುವಾಗಿದೆ. ಸೈಕಾಲಾಜಿಕಲ್ ಥ್ರಿಲ್ಲರ್ ಕಥಾಹಂದರ ಹೊಂದಿರೋ ಆನಂದ್ಗೆ ರಚಿತಾ ರಾಮ್ ನಾಯಕಿಯಾಗಿದ್ದಾರೆ. ರಚಿತಾ ಪಾಲಿಗಿದು ಶಿವರಾಜ್ ಕುಮಾರ್ ಜೊತೆ ಮೊದಲ ಚಿತ್ರ. ಶಿವಣ್ಣ ಜೊತೆ ನಾಯಕಿಯಾಗಿ ನಟಿಸಬೇಕೆಂಬ ಮಹದಾಸೆ ಹೊಂದಿದ್ದ ರಚಿತಾ ಈ ಅವಕಾಶ ಸಿಕ್ಕಿದ್ದರಿಂದ ಖುಷಿಯಾಗಿದ್ದಾರೆ. ಇಲ್ಲಿ ರಚಿತಾ ತಾತನ ಪಾತ್ರದಲ್ಲಿ ಅನಂತ್ ನಾಗ್ ನಟಿಸುತ್ತಿದ್ದಾರೆ.
#
No Comment! Be the first one.