ಕಟ್ರಾತು ತಮಿಝ್’, ’ಎಂಗಿಯಂ ಎಪ್ಪುದಮ್’, ’ಅಂಗಡಿ ತೇರು’ ಚಿತ್ರಗಳ ಉತ್ತಮ ನಟನೆಗೆ ಅಪಾರ ಮೆಚ್ಚುಗೆ ಗಳಿಸಿದ ನಟಿ ಅಂಜಲಿ. ಇತ್ತೀಚೆಗಷ್ಟೇ ತೆರೆಕಂಡ ತಮಿಳು ಮತ್ತು ಮಲಯಾಳಂ ದ್ವಿಭಾಷಾ ಸಿನಿಮಾ ’ಪೇರೆನ್ಬು’ನಲ್ಲಿಯೂ ಅವರಿಗೆ ಒಂದೊಳ್ಳೆಯ ಪಾತ್ರವಿದೆ. ವಿಮರ್ಶಕರು ಅಂಜಲಿ ನಟನೆಗೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ’ಎಂಗಿಯಂ ಎಪ್ಪುದಮ್’ ಚಿತ್ರದ ಹೀರೋ ಜೈ ಜೊತೆಗೆ ಅವರ ಪ್ರೀತಿಯಿದೆ ಎನ್ನುವ ವದಂತಿ ಹಳೆಯದು. ಈ ಬಗ್ಗೆ ಅಂಜಲಿ ಕೂಡ ಎಲ್ಲಿಯೂ ಸ್ಪಷ್ಟೀಕರಣ ಕೊಟ್ಟಿರಲಿಲ್ಲ. ಹಾಗಾಗಿ ವದಂತಿಗೆ ರೆಕ್ಕೆ ಪುಕ್ಕ ಬಂದಿದ್ದವು.
ಇದಕ್ಕೆ ಸಂಬಂಧಿಸಿದಂತೆ ಅಂಜಲಿ ಮೊನ್ನೆಯ ಸಂದರ್ಶನವೊಂದರಲ್ಲಿ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ನಾನೆಂದೂ ನಟ ಜೈ ಕುರಿತಂತೆ ಮಾತನಾಡಿಲ್ಲ. ಈ ವದಂತಿಗೆ ಹೇಗೆ ಚಾಲನೆ ಸಿಕ್ಕಿತೋ ಎನ್ನುವುದೇ ಸೋಜಿಗವಾಗುತ್ತದೆ. ಮಾಧ್ಯಮಗಳಲ್ಲಿ ಆರಂಭವಾದ ವದಂತಿ ಅಲ್ಲಿಯೇ ಅಂತ್ಯ ಕಂಡಿದೆ ಎಂದಿದ್ದಾರವರು. ಈ ಮೂಲಕ ಜೈ ಮತ್ತು ತಮ್ಮ ಮಧ್ಯೆಯ ಪ್ರೀತಿಯಲ್ಲಿ ಹುರುಳಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ. ವೃತ್ತಿ ಬದುಕು ಆರಂಭಿಸಿದ ಹೊತ್ತಲ್ಲಿ ಇಂತಹ ಪ್ರತೀ ಗಾಸಿಪ್ಗಳು ಕೇಳಿಬಂದಾಗಲೂ ಆಕೆ ಅಳುತ್ತಾ ಕೂರುತ್ತಿದ್ದರಂತೆ. ಇವುಗಳಲ್ಲಿ ಸತ್ಯವಿರುವುದಿಲ್ಲ ಎನ್ನುವುದು ಗಮನಕ್ಕೆ ಬರುತ್ತಿದ್ದಂತೆ ಗಟ್ಟಿಯಾಗುತ್ತಾ ಹೋದೆ ಎನ್ನುತ್ತಾರೆ. ಸದ್ಯ ಅಂಜಲಿ ’ನಾಡೋಡಗಳ್ ೨’, ’ಲೀಸಾ’, ’ಸಿಂಧುಬಾದ್’ ಸೇರಿದಂತೆ ಮತ್ತೆರೆಡು ಸಿನಿಮಾಗಳಲ್ಲಿ ಬಿಝಿಯಾಗಿದ್ದಾರೆ.
#
No Comment! Be the first one.