ಕೊರೋನಾ ಸೃಷ್ಟಿಸಿರುವ ಭಯಾನಕ ವಾತಾವರಣದ ನಡುವೆಯೂ ಹೊಸಬರು ಸಿನಿಮಾ ರಂಗಕ್ಕೆ ಬರುತ್ತಿರೋದು ಸಮಾಧಾನದ ವಿಚಾರ. ಬಹುತೇಕ ಹೊಸಬರು ಪ್ರತಿಭೆಗಳ ’ಅಂಜನ್’ ಚಿತ್ರದ ಎರಡು ಟ್ರೈಲರ್ಗಳ ಅನಾವರಣ ಕಾರ್ಯಕ್ರಮವು ಡಾ.ಸಿ.ಅಶ್ವಥ್ ಕಲಾಮಂದಿರದಲ್ಲಿ ಅದ್ದೂರಿಯಾಗಿ ನಡೆಯಿತು. ವಿಧಾನ ಪರಿಷತ್ ಸದಸ್ಯ ಅಶ್ವಥ್ನಾರಾಯಣ್ ಮೊದಲನೇ ಟ್ರೈಲರ್ಗೆ ಚಾಲನೆ ನೀಡಿದರು. ನಂತರ ಮಾತನಾಡುತ್ತಾ ತುಣುಕುಗಳನ್ನು ನೋಡಿದರೆ ಚಿತ್ರ ನೋಡಬೇಕು ಅನಿಸುತ್ತದೆ. ಚಿತ್ರವು ಎಲ್ಲರ ಮನಸ್ಸನ್ನು ಗೆಲ್ಲಲಿ ಎಂದು ಶುಭಹಾರೈಸಿದರು.
ಪ್ರಾರಂಭದಲ್ಲಿ ಹಳ್ಳಿ, ನಂತರ ಸಿಟಿಗೆ ಕತೆಯು ತೆಗೆದುಕೊಂಡು ಹೋಗುತ್ತದೆ. ಅಂಗವಿಕಲ, ಅಣ್ಣ ತಂಗಿ ಬಾಂದವ್ಯ ಮತ್ತು ರೌಡಿಗಳಾದವರ ಮನಸ್ಥಿತಿ, ಮನೆಸ್ಥಿತಿ ಹೇಗಿರುತ್ತದೆ. ಮನೆಯಲ್ಲಿ ತಂಗಿಯ ಮದುವೆ ಬಂದಾಗ, ಇಂತಹ ಪರಿಸ್ಥಿತಿಯಲ್ಲಿ ಅಣ್ಣನಾದವನು ಏನು ಮಾಡುತ್ತಾನೆ ಎಂಬ ವಿಷಯಗಳು ಇರಲಿದೆ. ತಂಗಿಯಾಗಿ ಮಡಕೇರಿ ಮುತ್ತಮ್ಮ, ತಾಯಿ ಪಾತ್ರದಲ್ಲಿ ಮಂಜುಳಮ್ಮ ನಟಿಸಿದ್ದಾರೆ. ದರ್ಶನ್ ಸರ್ಗೆ ಜಿಮ್ ತರಭೇತಿದಾರನಾಗಿದ್ದರಿಂದಲೂ ನಟನಾಗಬೇಕೆಂಬ ಬಯಕೆ ಇತ್ತು. ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿಕೊಂಡು ಈಗ ನಾಯಕನಾಗಿದ್ದೇನೆ. ಮಾಧ್ಯಮದ ಸಹಕಾರಬೇಕೆಂದು ನಾಯಕ ಅಂಜನ್ ಕೋರಿದರು.
ರಚನೆ, ಚಿತ್ರಕತೆ,ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಆರ್.ಸಾಗರ್ ಹೇಳುವಂತೆ ಸಿನಿಮಾವು ಮಾಸ್,ಸೆಂಟಿಮೆಂಟ್ ಸನ್ನಿವೇಶಗಳು ಕೂಡಿದೆ. ನಾಲ್ಕು ಹಾಡುಗಳು, ಐದು ಸಾಹಸಗಳು ಇದೆ. ಬೆಂಗಳೂರು, ಶಿವಮೊಗ್ಗ, ಶಂಕರಘಟ್ಟ, ಹೊನ್ನಾವರ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಕಲಾವಿದರು, ನಿರ್ಮಾಪಕರ ಸಹಕಾರದಿಂದ ಇಲ್ಲಿಯವರೆಗೂ ಬಂದಿದೆ. ಸರ್ಕಾರವು ಶೇಕಡ 100 ಆಸನಕ್ಕೆ ಅನುಮತಿ ನೀಡಿದಾಗ, ಚಿತ್ರವನ್ನು ಬಿಡುಗಡೆ ಮಾಡಲಾಗುವುದು ಎಂದರು.
ದಿ ಗಟ್ಸ್ ಆಫ್ ಹ್ಯೂಮನ್ ಅಂತ ಅಡಿಬರಹದಲ್ಲಿ ಇರುವಂತೆ ನಮ್ಮ ನಾಯಕ ಜಬರ್ದಸ್ತ್ ಆಗಿ ನಟಿಸಿದ್ದಾರೆ. ಹಿಂದೆ ’ಪ್ರತಿಬಿಂಬ’ ಚಿತ್ರ ನಿರ್ಮಾಣ ಮಾಡಿದ್ದೆ. ಎಂಇ ಮಾಡಿರುವ ನನಗೆ ಚಿತ್ರರಂಗ ಏನಂತ ತಿಳಿದಿರಲಿಲ್ಲ. ನಿರ್ದೇಶಕರ ಸಹವಾಸದಿಂದ ಇಲ್ಲಿಗೆ ಬರಬೇಕಾಯಿತು. ಡಾನ್ ಆಗಿ ಬಣ್ಣ ಹಚ್ಚಿದ್ದೇನೆ. ಆದಷ್ಟು ಬೇಗನೆ ರಿಲೀಸ್ ಮಾಡಲು ತಯಾರಿ ಮಾಡಿಕೊಳ್ಳಲಾಗಿದೆ ಎಂಬುದು ನಿರ್ಮಾಪಕ ಪ್ರದೀಪ್ಸೋನ್ಸ್ ಅವರ ನುಡಿಯಾಗಿತ್ತು.
ಬಾ.ಮಾ.ಹರೀಶ್ ಎರಡನೇ ಟ್ರೈಲರ್ ಅನಾವರಣಗೊಳಿಸಿ ತಂಡಕ್ಕೆ ಒಳ್ಳೆಯದಾಗಲಿ ಎಂದು ಹರಸಿದರು. ಕಲಾವಿದರುಗಳಾದ ಲಂಕೇಶ್ರಾವಣ, ಕರಾಟೆ ಮುಹೀಬ್, ನವೀನ್, ಮಡಕೇರಿ ಮುತ್ತಮ್ಮ, ಮಂಜುಳಮ್ಮ, ನೃತ್ಯ ಸಂಯೋಜಕ ಮಾರುತಿ, ಸಂಗೀತ ನಿರ್ದೇಶಕ ಗೋಪಿಕಲಾಕರ್, ಗುರುಪ್ರಸಾದ್, ಬಾ.ಮ.ಗಿರೀಶ್ ಮುಂತಾದವರು ಸಮಾರಂಭದಲ್ಲಿ ಉಪಸ್ತಿತರಿದ್ದರು. ಇದಕ್ಕೂ ಮುನ್ನ ಪತ್ರಿಕಾ ಹಿರಿಯ ಛಾಯಾಗ್ರಾಹಕ ಆರ್.ಮನೋಹರ್ ಅವರ ಹುಟ್ಟುಹಬ್ಬವನ್ನು ಚಿತ್ರತಂಡವು ಆಚರಿಸಿತು.
No Comment! Be the first one.