ಸದಾ ಒಂದಿಲ್ಲೊಂದು ಸಿನಿಮಾಗಳಲ್ಲಿ ಸಕ್ರಿಯಸಾಗಿರುವ ಸಾಲು ಸಿನಿಮಾಗಳ ಸರದಾರ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಸದ್ಯ ಸ್ಯಾಂಡಲ್ ವುಡ್ ನ ಬ್ಯುಸಿಯೆಸ್ಟ್ ನಟರ ಪೈಕಿ ಟಾಪ್ 5 ನಲ್ಲಿರುವ ನಟ. ನವ ನಟರನ್ನು ಬೆಚ್ಚಿ ಬೆರಗಾಗಿ ನೋಡುವಂತೆ ಮಾಡಬಲ್ಲ, ಎನರ್ಜಿಯಲ್ಲಿ ನಟನೆಯ ಚಾಪು ಮೂಡಿಸುವ ಶಿವಣ್ಣನ ಬಂಚ್ ನಲ್ಲಿ ಸದ್ಯ ಆನಂದ್, ದ್ರೋಣ, ರುಸ್ತುಂ ಸೇರಿದಂತೆ ಬಹುತೇಕ ಸಿನಿಮಾಗಳು ಧೂಳೆಬ್ಬಿಸಲು ಅಣಿಯಾಗುತ್ತಿದೆ. ಇದೀಗ ಶಿವಣ್ಣನಿಗೆ ಆ್ಯಕ್ಷನ್ ಕಟ್ ಹೇಳೋಕೆ ರಂಗಿತರಂಗ ಖ್ಯಾತಿಯ ಅನೂಪ್ ಭಂಡಾರಿ ರೆಡಿಯಾಗಿದ್ದಾರಂತೆ.
ಹೌದು.. ರಂಗಿತರಂಗ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಸೆನ್ಸೇಶನ್ ಸೃಷ್ಟಿಸಿದ್ದ ಅನೂಪ್ ಭಂಡಾರಿ ಬಳಿಕ ರಾಜರಥ ಸಿನಿಮಾದಲ್ಲಿ ಅಷ್ಟೇನು ಯಶ ಕಂಡಿರಲಿಲ್ಲ. ಆನಂತರ ಸುದೀಪ್ ಹೋಮ್ ಬ್ಯಾನರ್ ನಲ್ಲಿ ಬಿಲ್ಲಾ ರಂಗ ಭಾಷಾ ಅನ್ನೋ ಬಿಗ್ ಬಜೆಟ್ ಸಿನಿಮಾವನ್ನು ಮಾಡುವುದಾಗಿಯೂ ಘೋಷಣೆ ಮಾಡಿದ್ದು, ಚಿತ್ರ ತಯಾರಿ ಮಾಡಿಕೊಳ್ಳುತ್ತಿರುವ ಬೆನ್ನಲ್ಲೇ ಬಿಲ್ಲ ರಂಗ ಭಾಷಾ ಸಿನಿಮಾ ಟೇಕ್ ಆಫ್ ಆಗೋದು ಕೊಂಚ ತಡವಾದ್ರೆ, ಅನೂಪ್ ಶಿವಣ್ಣನ ಜೊತೆಯಲ್ಲಿ ಹೊಸ ಸಿನಿಮಾ ಮಾಡೋ ಸಾಧ್ಯತೆ ಇದೆ. ಶಿವಣ್ಣ ಮತ್ತು ಅನೂಪ್ ಕಾಂಬಿನೇಶನ್ನಿನ ಇನ್ನೂ ಹೆಸರಿಡದ ಸಿನಿಮಾದ ಫ್ರೀ ಪ್ರೊಡಕ್ಷನ್ ಶುರುವಾಗಿದ್ದು, ಸದ್ಯದಲ್ಲೇ ಅಧಿಕೃತ ಘೋಷಣೆ ಹೊರಬೀಳಲಿದೆ. ಇನ್ನು ಶಿವಣ್ಣ ಆನಂದ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಪಂಚತಂತ್ರ ಭಟ್ಟರ ಕುಲದಲ್ಲಿ ಕೀಳ್ಯಾವುದೋ ಸಿನಿಮಾದ ಶೂಟಿಂಗ್ ನಲ್ಲಿ ಪಾಲ್ಗೊಳ್ಳಲಿದ್ದಾರೆ.
No Comment! Be the first one.