ಇತ್ತೀಚಿಗಷ್ಟೇ ಅಜಯ್ ದೇವಗತ್ ಅಮಿತಾಬ್ ಬಚ್ಚನ್ ಅವರ ಸತ್ತೇ ಪೆ ಸತ್ತಾ ರಿಮೇಕ್ ನಲ್ಲಿ ನಟಿಸುವುದಿಲ್ಲವೆಂದು ರಿಜೆಕ್ಟ್ ಮಾಡಿದ ಸುದ್ದಿ ಜಗಜ್ಜಾಹೀರಾಗಿತ್ತು. ಜತೆಗೆ ಆ ಪಾತ್ರವನ್ನು ಹೃತಿಕ್ ರೋಷನ್ ಕೂಡ ಮಾಡಲು ಒಪ್ಪಿದ್ದಾರೆಂಬುದನ್ನು ಅನೌನ್ಸ್ ಕೂಡ ಮಾಡಲಾಗಿತ್ತು. ಈಗ ಅಮಿತಾಬ್ ಬಚ್ಚನ್ ಅವರ ಜತೆ ತೆರೆಹಂಚಿಕೊಂಡಿದ್ದ ಹೇಮಾಮಾಲಿನಿ ಪಾತ್ರವನ್ನು ಮಾಡಲು ಅನುಷ್ಕಾ ಶರ್ಮಾ ನಿರ್ವಹಿಸಬೇಕೆಂದು ಚಿತ್ರತಂಡ ನಿರ್ಧರಿಸಿ ಅವರನ್ನು ಭೇಟಿಯಾಗಿದೆ ಎಂದು ಹೇಳಲಾಗುತ್ತಿದೆ. ಒಂದು ಸುತ್ತಿನ ಮಾತುಕತೆಯನ್ನು ಚಿತ್ರತಂಡವು ನಡೆಸಿದೆ.
ರಿಮೇಕ್ ಕಥೆಯನ್ನು ಕೇಳಿರುವ ಅನುಷ್ಕಾ ಶರ್ಮಾ ಸಂತಸವನ್ನು ವ್ಯಕ್ತಪಡಿಸಿದ್ದು, ಚಿತ್ರದಲ್ಲಿ ನಟಿಸಲು ಆಸಕ್ತಿ ತೋರಿದ್ದಾರೆನ್ನಲಾಗುತ್ತಿದೆ. ಇದಕ್ಕೂ ಮೊದಲು ಈ ಪಾತ್ರಕ್ಕಾಗಿ ದೀಪಿಕಾ ಪಡುಕೋಣೆ ಅವರ ಜೊತೆ ಮಾತುಕತೆ ನಡೆಸಿದ್ದರು. ಆದರೆ ಅವರು ನಿರಾಕರಿಸಿದ್ದರೆನ್ನಲಾಗಿದೆ. ಈ ರಿಮೇಕ್ ಸಿನಿಮಾವನ್ನು ರೋಹಿತ್ ಶೆಟ್ಟಿ ಹಾಗೂ ಫರ್ಹಾನ್ ಖಾನ್ ಮಾಡಲಿದ್ದಾರೆ. ಎಲ್ಲ ಅಂದುಕೊಂಡಂತಾದರೆ ಅನುಷ್ಕಾ ಶರ್ಮ ಹೃತಿಕ್ ಜತೆ ತೆರೆ ಹಂಚಿಕೊಳ್ಳಲಿದ್ದಾರೆ.