ಚಾಲೆಂಜಿಂಗ್ ಸ್ಟಾರ್ ದರ್ಶನ್ ಬ್ರದರ್ ದಿನಕರ್ ತೂಗುದೀಪ ಮತ್ತು ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್​​ ಕಾಂಬಿನೇಷನ್​ನಲ್ಲಿ ಸಿನಿಮಾ ಬರ್ತಿದೆ ಅನ್ನೋ ಸುದ್ದಿ ಗಾಂಧಿನಗರದಾದ್ಯಂತ ಸಖತ್ ಸದ್ದು ಮಾಡಿತ್ತು. ಆದ್ರೆ ಈ ಬಗ್ಗೆ ಅಷ್ಟೇನು ಹೆಚ್ಚು ಮಾಹಿತಿ ಹೊರ ಬಿದ್ದಿರಲಿಲ್ಲ. ಈಗ ಅಪ್ಪು-ದಿನಕರ್ ಜೋಡಿಯ ಸಿನಿಮಾದ ಮತ್ತೊಂದು ಅಪ್​ಡೇಟೆಡ್ ನ್ಯೂಸ್ ಹೊರ ಬಿದ್ದಿದೆ.

  • ಮಹಂತೇಶ್‌ ಮಂಡಗದ್ದೆ

ವಿಷಯ ಏನಪ್ಪಾ ಅಂದ್ರೆ ದಿನಕರ್ ತೂಗುದೀಪ ಮತ್ತು ಪುನೀತ್​ ರಾಜ್​ಕುಮಾರ್ ಮೊನ್ನೆ ಭೇಟಿಯಾಗಿ ಮಾತು ಕತೆ ನಡೆಸಿದ್ದು, ಅವರಿಬ್ಬರ ಕಾಂಬಿನೇಷನ್​ನ ಸಿನಿಮಾ ಬರ್ತಿದೆ ಅನ್ನೋ ಸ್ಪಷ್ಟ ಮಾಹಿತಿ ಅಭಿಮಾನಿಗಳಿಗೆ ಸಿಕ್ಕಿದೆ. ಮತ್ತೊಂದು ವಿಚಾರವೆಂದರೆ, ಸ್ಯಾಂಡಲ್​ವುಡ್​ನ ಸ್ಟಾರ್ ಪ್ರೊಡ್ಯೂಸರ್ಸ್ ಆದ ಜಯಣ್ಣ ಮತ್ತು ಭೋಗೇಂದ್ರ ಕೂಡ ಅಪ್ಪು-ದಿನಕರ್ ಮೀಟಿಂಗ್ ವೇಳೆ ಉಪಸ್ಥಿತರಿದ್ದು, ಜಯಣ್ಣ ಕಂಬೈನ್ಸ್ ಬ್ಯಾನರ್ ಅಡಿಯಲ್ಲೇ ಈ ಸಿನಿಮಾ ತಯಾರಾಗಲಿದೆ.

ಸ್ಯಾಂಡಲ್​ವುಡ್​ನ ಮತ್ತೊಂದು ಬಿಗ್ ಬಜೆಟ್ ಸಿನಿಮಾ: ಹೌದು.. ನಿರ್ದೇಶಕ ದಿನಕರ್​ ತೂಗುದೀಪ ತಮ್ಮ ಮುಂದಿನ ಸಿನಿಮಾಗಾಗಿ ನಟ ಪವರ್​ಸ್ಟಾರ್​ ಪುನೀತ್​ ರಾಜ್​ಕುಮಾರ್​​ ಅವರನ್ನ ಭೇಟಿಯಾಗಿದ್ದಾರೆ. ಜಯಣ್ಣ ಕಂಬೈನ್ಸ್​​ ಬ್ಯಾನರ್​​ನಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆ. ಈ ಮೀಟಿಂಗ್​ನಲ್ಲಿ ಸಿನಿಮಾದ ಕಥೆ, ಮೇಕಿಂಗ್ ಬಗ್ಗೆ ಮಾತುಕತೆ ನಡೆಸಲಾಗಿದೆ ಅಂತಾ ಹೇಳಲಾಗ್ತಿದೆ.

ದಿನಕರ್​ ಮತ್ತು​ ಟೀಂ ಪುನೀತ್​​ ರನ್ನ ಭೇಟಿಯಾಗಿರೋ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ. ಇದು ಸ್ಯಾಂಡಲ್​ವುಡ್​ನ ಮತ್ತೊಂದು ಬಿಗ್ ಬಜೇಟ್ ಸಿನಿಮಾ ಅಂತಿವೆ ಸ್ಯಾಂಡಲ್​ವುಡ್ ಮೂಲಗಳು. ಈ ವರೆಗೂ ಜಯಣ್ಣ ಆ್ಯಂಡ್ ಕಂಬೈನ್ಸ್​ ಬ್ಯಾನರ್​ ಅಡಿ ಬಂದಿರೋ ಎಲ್ಲಾ ಸಿನಿಮಾಗಳೂ ಕೂಡ ಬ್ಲಾಕ್ ಬಸ್ಟರ್ ಆಗಿವೆ.  ಈಗ ಪುನೀತ್ ರಾಜ್​ ಕುಮಾರ್ ಮತ್ತು ದಿನಕರ್ ತೂಗುದೀಪ ಕಾಂಬಿನೇಷನ್​ನ ಸಿನಿಮಾವೂ ಸ್ಯಾಂಡಲ್​ವುಡ್​ನ ಮತ್ತೊಂದು ಬಿಗ್ ಬಜೇಟ್ ಸಿನಿಮಾ ಆಗಿದ್ದು, ಸದ್ಯದಲ್ಲೇ ಈ ಸಿನಿಮಾದ ಮುಹೂರ್ತ ನಡೆಯಲಿದೆ.

ಕೆ.ಜಿಎಫ್ 3 ಸಿನಿಮಾದ ಬಗ್ಗೆ ಕ್ಲೂ ಕೊಟ್ಟರಾ ನಿರ್ದೇಶಕ ಪ್ರಶಾಂತ್ ನೀಲ್?

Previous article

ವಾದಿ ಕಮಿಂಗ್‌ ಅಂದಳು ಜೆನಿಲಿಯಾ!

Next article

You may also like

Comments

Leave a reply

Your email address will not be published. Required fields are marked *