ಮ್ಯಾಸೀವ್ ಸ್ಟಾರ್ ರಾಜವರ್ಧನ್ ಭರ್ಜರಿ ಆಕ್ಷನ್
ಬಿಚ್ಚುಕತ್ತಿ ಸಿನಿಮಾ ಮೂಲಕ ಭರವಸೆ ಹುಟ್ಟಿಸಿರುವ ಮ್ಯಾಸೀವ್ ಸ್ಟಾರ್ ರಾಜವರ್ಧನ್ ಹಿರಣ್ಯ ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಹಾಜರಲು ಸಜ್ಜಾಗಿದ್ದಾರೆ. ಇದೀಗ ಹಿರಣ್ಯ ಸಿನಿಮಾದ ಮಾಸ್ ಟೀಸರ್ ರಿಲೀಸ್ ಆಗಿದೆ. ಭರ್ಜರಿ ಆಕ್ಷನ್ ಮೂಲಕ ರಾಜವರ್ಧನ್ ಅಬ್ಬರಿಸಿದ್ದಾರೆ. ಬೆಂಗಳೂರಿನ ವಸಂತನಗರದಲ್ಲಿರುವ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಹಿರಣ್ಯ ಟೀಸರ್ ಬಿಡುಗಡೆ ಮಾಡಲಾಯಿತು. ಲಹರಿ ಸಂಸ್ಥೆಯ ವೇಲು ರಾಜವರ್ಧನ್ ಸಿನಿಮಾಗೆ ಸಾಥ್ ಕೊಟ್ಟರು. ಈ ವೇಳೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ನಿರ್ದೇಶಕ ಪ್ರವೀಣ್ ಅವ್ಯುಕ್ತ ಮಾತನಾಡಿ, ಮುಹೂರ್ತದಲ್ಲಿ ಹೇಳಿದ್ದೆ ಕೆಲಸ ಆದ್ಮೇಲೆ […]
ಭರವಸೆ ಹುಟ್ಟಿಸಿದ ತುಳು ಹೀರೋ..
ಶೀರ್ಷಿಕೆಯೇ ಸಿನಿಮಾ ಪ್ರೇಕ್ಷಕರಿಗೆ ಮೊದಲ ಆಮಂತ್ರಣ. ಸಿನಿಮಾ ಮೇಕರ್ಗಳು ಅದನ್ನೇ ಗಮನದಲ್ಲಿಟ್ಟುಕೊಂಡು ಏನಾದರೊಂದು ಹೊಸದನ್ನು ನೀಡಬೇಕೆನ್ನುವ ಆಶಯ ನಿರ್ಮಾಪಕರದ್ದು. ಈ ನಡುವೆ ಬಗೆಬಗೆಯ ಶೀರ್ಷಿಕೆಗಳ ಮೂಲಕವೇ ಸಿನಿಮಾಗಳು ತೆರೆಗೆ ಬರ್ತಿವೆ. ಅಂತಹದ್ದೇ ವಿಭಿನ್ನ ಬಗೆಯ ಟೈಟಲ್ ಮೂಲಕ ಗಮನಸೆಳೆದಿರುವ ಚಿತ್ರ ಕ್ಲಾಂತ. ವೈಭವ್ ಪ್ರಶಾಂತ್ ನಿರ್ದೇಶನದ ಕ್ಲಾಂತ ಸಿನಿಮಾದ ಟೀಸರ್ ಈಗಾಗಲೇ ಗಮನಸೆಳೆದಿದೆ. ನಾಯಕ ವಿಘ್ನೇಶ್ ಹಾಗೂ ಸಂಗೀತ ಭಟ್ ಅಭಿನಯ ಎಲ್ಲರಿಗೂ ಮೆಚ್ಚುಗೆಯಾಗಿದೆ. ಅದರಲ್ಲೂ ವಿಘ್ನೇಶ್ ಅವರಂತೂ ಆಕ್ಷನ್ ದೃಶ್ಯಗಳಲ್ಲಿ ಎಲ್ಲರನ್ನೂ ಮೀರಿಸುವಂತೆ ಪವರ್ ಫುಲ್ […]
ಗನ್ನು, ಗೋಡಾಗಳ ವಿಚಿತ್ರ ಜಗತ್ತಿನಲ್ಲಿ ಬ್ಯಾಡ್ ಮ್ಯಾನರ್ಸ್!
ಅವನಿಗೆ ನಯ-ವಿನಯವಿಲ್ಲ. ದೊಡ್ಡವರು ಚಿಕ್ಕವರು ಅನ್ನೋದನ್ನೆಲ್ಲಾ ನೋಡದೆ, ಯಾರ ಮುಂದೆ ಬೇಕಾದರೂ ಕಾಲಮೇಲೆ ಕಾಲು ಹಾಕಿಕೊಂಡು ಕೂರುವ, ಮೌನಾಚರಣೆಯ ಸಭೆಯಲ್ಲೂ ದೊಡ್ಡ ಸದ್ದಿನಲ್ಲಿ ಸೀನಿಬಿಡುವ, ಬೂಟಿಗೆ ಕುದುರೆ ಲಾಳ ಫಿಕ್ಸ್ ಮಾಡಿಕೊಂಡು ಸದ್ದು ಮಾಡಿಕೊಂಡು ನಡೆಯುವ, ಎದುರಿದ್ದವನು ಎಷ್ಟೇ ಬಲಶಾಲಿಯಾದರೂ ಮುಷ್ಟಿ ಹಿಡಿದು ಗುದ್ದುವ ಒರಟ… ಒಂಥರಾ ಮ್ಯಾನರ್ಸ್ ಇಲ್ಲದವನು! ಬ್ಯಾಡ್ ಮ್ಯಾನರ್ಸನ್ನೇ ಬಾಡಿ ತುಂಬಾ ತುಂಬಿಕೊಂಡ ರುದ್ರೇಶ್ ಅಲಿಯಾಸ್ ರುದ್ರನ ತಂದೆ ಕಾಲವಾದಮೇಲೆ ಅದೇ ಪೊಲೀಸ್ ಇಲಾಖೆಯಲ್ಲಿ ನೌಕರಿ ಸಿಕ್ಕಿರುತ್ತದೆ. ಅದೊಂದು ದಿನ ಸರ್ವೀಸ್ ಗನ್ […]
‘ಡಂಕಿ’ ಸಿನಿಮಾದ ಮೊದಲ ಹಾಡು ಬಂತು..!
ಡಂಕಿ ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದು.. ಶಾರುಖ್ ಖಾನ್ ಹಾಗೂ ರಾಜ್ ಕುಮಾರ್ ಹಿರಾನಿ ಜೋಡಿಯ ಈ ಚಿತ್ರದ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆ ಮಾಡಲಾಗಿತ್ತು. ಟೀಸರ್ಗೆ ಭರ್ಜರಿ ಪ್ರತಿಕ್ರಿಯೆ ಬಂದಿದೆ. ಇನ್ನೇನೂ ಡಂಕಿ ರಿಲೀಸ್ ಗೆ ದಿನಗಣೆಯಷ್ಟೇ ಬಾಕಿ ಉಳಿದಿದ್ದು, ಚಿತ್ರತಂಡ ಪ್ರಮೋಷನ್ ಅಖಾಡಕ್ಕೆ ಧುಮುಕಿದೆ. ಡಂಕಿ ಸಿನಿಮಾದ ಮೊದಲ ಹಾಡು ಇಂದು ಬಿಡುಗಡೆಯಾಗಿದೆ. ಟೀ ಸೀರಿಸ್ ಯೂಟ್ಯೂಬ್ ನಲ್ಲಿ ಹಾರ್ಡಿ ಹಾಗೂ ಮನುವಿನ ಪ್ರೇಮಗೀತೆ ಅನಾವರಣಗೊಂಡಿದೆ. ಲುಪ್ ಪುಟ್ ಗಯಾ ಎಂಬ ಸಾಹಿತ್ಯದ ಹಾಡಿಗೆ […]
ಆ ದಿನ ಬರ್ತಿದೆ ಡಂಕಿ ಸಿನಿಮಾದ ಮೊದಲ ಹಾಡು…
ಶಾರುಖ್ ಖಾನ್ ನಟನೆಯ ಡಂಕಿ ಸಿನಿಮಾದ ಟೀಸರ್ ಈಗಾಗಲೇ ಭಾರೀ ಸದ್ದು ಮಾಡುತ್ತಿದೆ. ಶಾರುಖ್ ಖಾನ್ ಜನ್ಮದಿನಕ್ಕೆ ಡಂಕಿ ಡ್ರಾಪ್ 1 ಎಂಬ ಟೈಟಲ್ನಡಿ ಬಂದ ಝಲಕ್ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಇದೀಗ ಡಂಕಿ ಸಿನಿಮಾದ ಮೊದಲ ಹಾಡು ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಡಂಕಿ ಸಿನಿಮಾದ ರೋಮ್ಯಾಂಟಿಕ್ ನಂಬರ್ ಇದೇ ತಿಂಗಳ 22ರಂದು ರಿಲೀಸ್ ಆಗಲಿದೆ. ಲಪ್ ಪಟ್ ಗಯಾ ಎಂಬ ಸಾಹಿತ್ಯವುಳ್ಳ ಸುಮಧುರ ಹಾಡಿಗೆ ಪ್ರೀತಂ ಚಕ್ರವರ್ತಿ ಟ್ಯೂನ್ ಹಾಕಿದ್ದಾರೆ. ಹೇಗಿರಲಿ ಡಂಕಿ ಮೊದಲ […]
ಅಡಿವಿ ಶೇಷ್ ಗೆ ಸಿಕ್ಕಳು ಜೋಡಿ!
ತೆಲುಗು ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದ ಸೂಪರ್ ಹಿಟ್ ಸಿನಿಮಾ ‘ಗೂಢಚಾರಿ’. ಅಡಿವಿ ಶೇಷ್ ನಟನೆಯಲ್ಲಿ ಮೂಡಿ ಬಂದ ಆಕ್ಷನ್ ಅಂಡ್ ಥ್ರಿಲ್ಲರ್ ಸಬ್ಜೆಕ್ಟ್ ಒಳಗೊಂಡ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಗಳಿಕೆ ಕಂಡಿತ್ತು. ಈ ಚಿತ್ರದ ಸೀಕ್ವೆಲ್ ಬರ್ತಿರೋದು ಗೊತ್ತೇ ಇದೆ. ಈಗಾಗಲೇ ರಿಲೀಸ್ ಆಗಿದ್ದ ‘ಗೂಢಚಾರಿ 2’ ಫಸ್ಟ್ ಲುಕ್ ಬರೀ ಸದ್ದು ಮಾಡಿತ್ತು. ಇದೀಗ ಚಿತ್ರತಂಡ ನಾಯಕಿಯನ್ನು ಪರಿಚಯಿಸಿದೆ. ಗೂಢಚಾರಿ-2 ಸಿನಿಮಾಗೆ ನಾಯಕಿ ಸಿಕ್ಕಿದ್ದಾರೆ. ಪ್ರತಿಭಾನ್ವಿತ ನಟಿ ಬನಿತಾ ಸಂಧು […]
ಸುಲ್ತಾನ್ ರಾಜು ನಿರ್ದೇಶನದ ಚಿತ್ರ
ಉಳ್ಳವರು, ಬಡವರು, ವಿದ್ಯಾವಂತರು, ಅವಿದ್ಯಾವಂತರು ಯಾರೇ ಆಗಲಿ, ತಮ್ಮ ಮಕ್ಕಳು ಒಳ್ಳೆ ರೀತಿಯಲ್ಲಿ ಬೆಳೆಯಬೇಕು. ತಾವು ಅನುಭವಿಸಿದ ಕಷ್ಟಗಳು ಅವರು ಅನುಭವಿಸಬಾರದು… ಅಂತಾ ಬಯಸುತ್ತಾರೆ. ತಮ್ಮ ಮಕ್ಕಳಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡುತ್ತಾರೆ. ಹಗಲಿರುಳೂ ಅವರ ಭವಿಷ್ಯವನ್ನೇ ಗಮನದಲ್ಲಿಟ್ಟುಕೊಂಡು ಬದುಕು ಸಾಗಿಸುತ್ತಾರೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತಾವೂ ಶ್ರಮಿಸುತ್ತಾರೆ. ಒಟ್ಟಾರೆ ಮಕ್ಕಳ ಬೆಳವಣಿಗೆ, ಭವಿಷ್ಯದ ವಿಚಾರದಲ್ಲಿ ಹೆತ್ತವರ ಪಾತ್ರ ಮಹತ್ತರವಾಗಿರುತ್ತದೆ. ಈ ವರೆಗೆ ಮಕ್ಕಳ ಕುರಿತು ಸಾಕಷ್ಟು ಸಿನಿಮಾಗಳು ತಯಾರಾಗಿವೆ. ಆದರೆ, ಮಕ್ಕಳ ಬಗೆಗೆ ಈ ವರೆಗೆ ಎಲ್ಲೂ ಬಾರದ […]
ಊರೂರು ಸುತ್ತುತ್ತಿದ್ದಾರೆ ದಿವ್ಯಾ-ಅರವಿಂದ್!
ನಿರ್ದೇಶಕ ಅರವಿಂದ್ ಕೌಶಿಕ್ ಆರಂಭದಿಂದಲೂ ಹೊಸತನಕ್ಕೆ ಹೆಚ್ಚು ತೆರೆದುಕೊಂಡವರು. ಕನ್ನಡ ಚಿತ್ರರಂಗ ಇನ್ನೂ ಫಿಲ್ಮ್ ಬಳಸಿ ಸಿನಿಮಾ ಮಾಡುತ್ತಿದ್ದಾಗಲೇ ಡಿಜಿಟಲ್ ಫಾರ್ಮ್ಯಾಟಿನಲ್ಲಿ ಸಿನಿಮಾ ರೂಪಿಸಿದವರು. ತುಘ್ಲಕ್, ನಮ್ ಏರಿಯಾಲ್ ಒಂದಿನ, ಹುಲಿರಾಯ ಮೊದಲಾದ ಚಿತ್ರಗಳು ಅರವಿಂದ್ ಅವರ ವಿಭಿನ್ನ ಚಿಂತನೆಗೆ ಸಾಕ್ಷಿ. ಈ ಹಿಂದೆ ಅರವಿಂದ್ ಕೌಶಿಕ್ ಆಯ್ಕೆ ಮಾಡಿಕೊಂಡಿದ್ದ ಕಲಾವಿದರು, ತಂತ್ರಜ್ಞರೆಲ್ಲಾ ಇವತ್ತಿಗೆ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಹೀಗಾಗಿ ಇನ್ನೇನು ತೆರೆಗೆ ಬರಲು ಸಿದ್ದಗೊಂಡಿರುವ ಅವರ ʻಅರ್ದಂಬರ್ಧ ಪ್ರೇಮಕಥೆʼಯ ಬಗ್ಗೆ ಕೂತೂಹಲಗಳು ಗರಿಗೆದರಿಕೊಂಡಿವೆ. ಈ […]
ಇದು ಶಂಕರ್ ನಾಗ್ ಅಭಿಮಾನಿಯ ಕತೆ…
ವಿಭಿನ್ನ ಶೈಲಿಯ ಹಾರರ್, ಥ್ರಿಲ್ಲರ್ ಕಥಾಹಂದರ ಹೊಂದಿರುವ ಮಾಯಾನಗರಿ ಚಿತ್ರದ ಲಚ್ಚಿ ಲಚ್ಚಿ ಹಾಡಿನ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ರೀಲ್ಸ್ ನಲ್ಲೇ ಫೇಮಸ್ ಆಗಿ, ಲಕ್ಷಾಂತರ ಫಾಲೋವರ್ಸ್ ಹೊಂದಿರುವ 5 ವರ್ಷದ ಮಗು ನಿಶಿತಾ ಕೈಲಿ ಲಚ್ಚಿ ಹಾಡನ್ನು ಬಿಡುಗಡೆಗೊಳಿಸಲಾಯಿತು. ಅನೀಶ್ ತೇಜೇಶ್ವರ್, ತೇಜು ಹಾಗೂ ಶ್ರಾವ್ಯರಾವ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರಕ್ಕೆ ಶಂಕರ್ ಆರಾಧ್ಯ ಕಥೆ ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರರಂಗದಲ್ಲಿ ನಡೆಯುವ ಒಂದಷ್ಟು ಸತ್ಯ ಘಟನೆಗಳನ್ನಿಟ್ಟುಕೊಂಡು ಶಂಕರ್ ಆರಾಧ್ಯ […]
ಡಂಕಿ’ ಡೈರೆಕ್ಟರ್ ಗಿಂದು ಹುಟ್ಟುಹಬ್ಬದ ಸಂಭ್ರಮ…
ಬಾಲಿವುಡ್ ಕಂಡ ಅಪರೂಪದ ಸಿನಿಮಾ ಮೇಕರ್ಸ್..ನಾಲ್ಕು ರಾಷ್ಟ್ರಪ್ರಶಸ್ತಿ ಗೆದ್ದಿರುವ ಸ್ಟಾರ್ ಡೈರೆಕ್ಟರ್ ರಾಜ್ ಕುಮಾರ್ ಹಿರಾನಿಗಿಂದು ಜನ್ಮದಿನದ ಶುಭಾಶಯ. ಮುನ್ನಾ ಬಾಯ್ ಎಂಬಿಬಿಎಸ್, ತ್ರಿ ಇಡಿಯಟ್ಸ್, ಪಿಕೆ, ಸಂಜುನಂತಹ ಸೂಪರ್ ಡೂಪರ್ ಹಿಟ್ ಚಿತ್ರ ಕೊಟ್ಟಿರುವು ಹಿರಾನಿ ಡಂಕಿ ಸಿನಿಮಾ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ. ಸಾಮಾನ್ಯವಾಗಿ ರಾಜ್ ಕುಮಾರ್ ಹಿರಾನಿ ಚಿತ್ರಗಳು ಮನರಂಜನೆ ಜೊತೆಗೆ ಒಂದೊಳ್ಳೆ ಸಂದೇಶಗಳನ್ನು ಒಳಗೊಂಡಿರುತ್ತದೆ. ಫ್ಯಾಮಿಲಿ ಕುಳಿತು ನೋಡುವ ಸಿನಿಮಾಗಳಾಗಿರುತ್ತವೆ. ಇಂತಹ ಸ್ಟಾರ್ ಡೈರೆಕ್ಟರ್ ಶಾರುಖ್ ಖಾನ್ ಗೆ ಡಂಕಿ ಎಂಬ […]