ಬಬ್ರೂ ಸಿನಿಮಾದ ಮೂಲಕ ನಾಯಕನಟನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿರುವವರು ಮಹೀ ಹಿರೇಮಠ್. ಇದ್ದ ಐಟಿ ಕಂಪೆನಿ ಕೆಲಸ ಬಿಟ್ಟು, ರಿಯಾಲಿಟಿ ಶೋ, ಡ್ಯಾನ್ಸು ಅಂತಾ ಬಣ್ಣದ ಜಗತ್ತಿನ ಕಡೆಗೆ ವಾಲಿದವರು. ಈಗ ಬಬ್ರೂ ಮೂಲಕ ಮತ್ತೊಂದು ಹೆಜ್ಜೆ ಮುಂದೆ ಬಂದಿದ್ದಾರೆ. ಅವರ ಲೈಫ್ ಜರ್ನಿ ಬಗ್ಗೆ ಅವರ ಮಾತಲ್ಲೇ ಕೇಳಿ

ನಿರೂಪಣೆ: ಸುಮ ಜಿ

ನಾನು ಮೂಲತಃ ಧಾರವಾಡದವನು. ೮-೯ ವರ್ಷ ಇದ್ದಾಗ ತಂದೆ-ತಾಯಿ ಬೆಂಗಳೂರಿಗೆ ಬಂದು ಸೆಟಲ್ ಆದ್ರು. ಬೆಂಗಳೂರಿನಲ್ಲೇ ಓದು ಮುಂದುವರೆಸಿ ಇಂಜಿನಿಯರಿಂಗ್ ಮುಗಿಸಿದೆ. ಐಟಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೆ. ಚಿಕ್ಕ ವಯಸ್ಸಿನಿಂದ ಡ್ಯಾನ್ಸ್’ನಲ್ಲಿ ಬಹಳ ಆಸಕ್ತಿ ಇತ್ತು. ಕುಟುಂಬದವರಿಂದ ಬಹಳ ಪ್ರೋತ್ಸಾಹ ಸಿಕ್ಕಿತು. ಇದರೊಂದಿಗೆ ಶಾಲಾ ದಿನಗಳಿಂದಲೇ ನಾಟಕಗಳಲ್ಲೂ ಅಭಿನಯಿಸತೊಡಗಿದೆ.

ಅಭಿಷೇಕ್, ಐಶ್ವರ್ಯರೈ ಇವರೊಂದಿಗೆ ಹಲವು ಡ್ಯಾನ್ಸ್ ಶೋಗಳನ್ನ ಮಾಡಿದ್ದೇನೆ. ಬೆಂಗಳೂರಿನ ಹಲವು ಡ್ಯಾನ್ಸ್ ಕಂಪೆನಿಗಳ ಪರಿಚಯವಾಯಿತು. ಹಿಪ್ಪಾಪ್, ಸಾಲ್ಸಾ ಡ್ಯಾನ್ಸ್‌ಗಳನ್ನು ಕಲಿತೆ. ಸ್ಟಾರ್ ಸುವರ್ಣ ಚಾನಲ್‌ನಲ್ಲಿ ರಿಯಾಲಿಟಿ ಶೋಗೆ ನನ್ನನ್ನು ಆಯ್ಕೆ ಮಾಡಿಕೊಂಡರು. ಹಗಲು ರಾತ್ರಿ ಡ್ಯಾನ್ಸ್ ಅಭ್ಯಾಸ ಮಾಡಬೇಕಾದದ್ದರಿಂದ ಐಟಿ ಕಂಪೆನಿ ಕೆಲಸ ಬಿಡಬೇಕಾಯಿತು. ಮನೆಯಲ್ಲಿ ಹೇಳದೆಯೇ ಕೆಲಸ ಬಿಟ್ಟಿದ್ದೆ. ಬೆಳಗ್ಗೆ ಆಫೀಸ್ ಹೋಗ್ತೀನಿ ಅಂತ ಡ್ಯಾನ್ಸ್ ಪ್ರಾಕ್ಟೀಸ್‌ಗೆ ಹೋಗಿ ಮತ್ತೆ ಸಂಜೆ ಅದೇ ಡ್ರೆಸ್ಸನ್ನ ಹಾಕ್ಕೊಂಡು ಮನೆಗೆ ಹೋಗುತ್ತಿದ್ದೆ. ಹೀಗೇ ಸುಮಾರು ೬ ತಿಂಗಳು ಮನೆಯಲ್ಲಿ ಕೆಲಸ ಬಿಟ್ಟಿರುವ ವಿಷಯವನ್ನ ಹೇಳಿಯೇ ಇರಲಿಲ್ಲ. ಟಿವಿಯ ರಿಯಾಲಿಟಿ ಶೋನಲ್ಲಿ ನೋಡಿದ ನಂತರವೇ ಮನೆಯಲ್ಲಿ ಗೊತ್ತಾಗಿದ್ದು. ಪ್ರಭುದೇವ ಜಡ್ಜ್ ಆಗಿದ್ದಂತಹ ಮೊಟ್ಟಮೊದಲ ರಿಯಾಲಿಟಿ ಶೋ ಸೈಟ್ ಟು ಡ್ಯಾನ್ಸ್ ನನಗೆ ತುಂಬಾ ಹೆಸರು ತಂದು ಕೊಟ್ಟಿತು. ಇದಕ್ಕೂ ಮುನ್ನ ಡಿಡಿ-೯ನಲ್ಲಿ ಬಿ ಸುರೇಶ ಅವರ ಕಪ್ಪು ಹುಡುಗಿ ಎಂಬ ಕಿರುಚಿತ್ರದಲ್ಲಿ ನಟಿಸಿದ್ದೆ. ಶಿವಮಣಿ ಅವರ ಅಕ್ಕ ಚಿತ್ರದಲ್ಲಿ ಕೆಲಸ ಮಾಡಿದ್ದೆ. ಹಲವು ಧಾರವಾಹಿಗಳಲ್ಲಿ ನಟಿಸಿದೆ.

ನಂತರ ಏನಾದರೂ ಸಾಧಿಸಬೇಕೆಂಬ ಮನಸ್ಸಿನಿಂದ ಮುಂಬೈಗೆ ಹೋದೆ. ಅಲ್ಲಿ ಹಲವು ಸೆಲಬ್ರಿಟಿಗಳ ಪರಿಚಯವಾಯಿತು. ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದೆ, ಕಿರುಚಿತ್ರಗಳನ್ನು ಮಾಡಿದೆ. ಸಿನಿಮಾ ಅನ್ನೋದನ್ನ ಇನ್ನೂ ಚೆನ್ನಾಗಿ ಅರಿತು ಕೊಳ್ಳಬೇಕು, ಕ್ಯಾಮೆರಾ ಹಿಂದಿನ ಪರಿಶ್ರಮವನ್ನು ಅರಿಯಬೇಕೆಂಬ ಆಸೆಯಿಂದ ಅಮೆರಿಕಾಕ್ಕೆ ತೆರಳಿ, ಅಲ್ಲಿನ ಆಕ್ಟಿಂಗ್ ಫಾರ್ ಕ್ಯಾಮೆರಾ ಅನ್ನೋ ಕೋರ್ಸ್ ಮಾಡಿಕೊಂಡೆ. ಹಾಲಿವುಡ್‌ನ ಕೆಲವು ಚಿತ್ರಗಳಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದೆ ಹಾಗೂ ಸಿನಿಮಾ ಪ್ರೊಡಕ್ಷನ್ ಸಹ ಮಾಡಿದೆ. ಕ್ಯಾಮೆರಾ ಹಿಂದಿನ ಶ್ರಮವನ್ನು ಅರಿತು, ನಾನೇ ಬರೆದು ನಟಿಸಿ ೨ ಕಿರುಚಿತ್ರಗಳನ್ನು ಮಾಡಿದೆ. ಹಾಲಿವುಡ್‌ನ ಕಾಮಿಡಿ ನಟ ರ‍್ಯಾಂಡಿ ನಜ಼ಾರಿನಾ ನನ್ನ ಬರವಣಿಗೆಯನ್ನು ಮೆಚ್ಚಿನ ನನ್ನ ಚಿತ್ರದಲ್ಲಿ ನಟಿಸಿದರು. ಆರ್ ಪಿ ಪಟ್ನಾಯಕ್ ಅವರ ತುಳಿಸೀದಳಂ ಚಿತ್ರಕ್ಕೆ ಸಹಾಯಕನಾಗಿ ಕೆಲಸ ಮಾಡಿದ್ದೇನೆ. ನನ್ನದೊಂದು ಡ್ಯಾನ್ಸ್ ಕಂಪೆನಿ ಸಹ ಮಾಡಿದ್ದೇನೆ. ೨೦ ಜನಟ್ರೈನರ‍್ಸ್, ಸುಮಾರು ೫೦೦ರಿಂದ ೬೦೦ ಜನ ಕಲಿಯುತ್ತಿದ್ದಾರೆ. ಇದೆಲ್ಲದರ ಜೊತೆ ಬಹಳ ದಿನದಿಂದ ಕನ್ನಡ ಚಿತ್ರ ಮಾಡಬೇಕೆಂಬ ಆಸೆಯಿತ್ತು. ಅದೇ ಕನಸನ್ನ ಹೊತ್ತು ಯು.ಎಸ್.ಗೆ ಹೊರಟಿದ್ದೆ.

ಸುಮನ್ ನಗರ್‌ಕರ್ ಅವರ ಪತಿ ಗುರು ಅವರು ಮತ್ತು ಸುಜಯ್ ಹಾಗೂ ಅವರ ಟೀಮ್ ನನ್ನನ್ನು ಆಡಿಷನ್‌ಗೆ ಕರೆದಿದ್ದರು. ಇದರಲ್ಲಿ ನನ್ನ ಪರ್ಫಾರ್ಮೆನ್ಸ್ ನೋಡಿ ಖುಷಿಪಟ್ಟರು. ಈ ಚಿತ್ರದಲ್ಲಿ ನನ್ನ ಪಾತ್ರ ನನಗೆ ಬಹಳ ಸನಿಹವಾಗಿದೆ ಅಂತನಿಸಿತು.

ಸುಮನ್ ನಗರ್‌ಕರ್ ಅದ್ಭುತ ನಟಿ. ಅವರೊಂದಿಗೆ ಪಾತ್ರ ಮಾಡುವ ಅವಕಾಶ ಸಿಕ್ಕಿದ್ದು, ಒಳ್ಳೆಯ ಅವಕಾಶ ಎಂದು ಭಾವಿಸಿದ್ದೇನೆ. ಕನ್ನಡದಲ್ಲಿ ಈ ರೀತಿಯ ಹೊಸ ಪ್ರಯತ್ನಯಾರೂ ಮಾಡಿರಲಿಲ್ಲ. ನಮ್ಮದೊಂದು ಹೊಸ ಪಯತ್ನ ಇದು. ಹಲವು ಕನ್ನಡ ಸಿನಿಮಾಗಳು ಅಮೇರಿಕಾದಲ್ಲಿ ಕೆಲವು ಸೀನ್ಸ್‌ಗಳನ್ನು ಮಾತ್ರ ಚಿತ್ರೀಕರಿಸಿರುತ್ತಾರೆ. ಆದರೆ ಇದು ಸಂಪೂರ್ಣ ಯು.ಎಸ್.ನಲ್ಲೇ ಚಿತ್ರೀಕರಿಸಿದ್ದೇವೆ. ಆದ್ದರಿಂದ ಹಾಲಿವುಡ್ ಸಿನಿಮಾ ನೋಡೋ ಫೀಲ್ ಇರುತ್ತದೆ. ಹಲವು ಹಾಲಿವುಡ್ ನಟರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ ಹಾಗೂ ಹಾಲಿವುಡ್‌ನ ಲಾಸ್ ಏಂಜಲೀಸ್‌ನ ಟೆಕ್ನೀಷಿಯನ್’ಗಳು ಈ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ನಾವು ಇದರಲ್ಲಿ ತೋರಿಸಿರುವಂತಹ ಜಾಗಗಳನ್ನು ಬೇರೆಯಾವ ಕನ್ನಡ ಚಿತ್ರದಲ್ಲೂ ತೋರಿಸಿಲ್ಲ. ಈ ರೀತಿಯ ಹಲವು ಬಗೆಯ ವಿಶೇಷಗಳು ಈ ಚಿತ್ರದಲ್ಲಿವೆ. ಅದಕ್ಕೆ ಇದು ಕನ್ನಡದ ಹಾಲಿವುಡ್ ಚಿತ್ರ.

CG ARUN

ಕನ್ನಡ ಚಿತ್ರರಂಗಕ್ಕೆ ಶಿವಣ್ಣ ಒಬ್ಬರೇ ಹ್ಯಾಟ್ರಿಕ್ ಹೀರೋ.

Previous article

ಹಿರಿಯ ಪ್ರಚಾರಕರ್ತ ವಿಜಯ್ ಕುಮಾರ್ 60ನೇ ಹುಟ್ಟುಹಬ್ಬ….

Next article

You may also like

Comments

Leave a reply

Your email address will not be published. Required fields are marked *