ಬದ್ರಿ ವರ್ಸಸ್ ಮಧುಮತಿ ಚಿತ್ರದ ಮೂಲಕ ನವನಾಯಕ ಪ್ರತಾಪವನ್ ಮಿಂಚಿನಂತೆ ಎಂಟ್ರಿ ಕೊಡಲು ರೆಡಿಯಾಗಿದ್ದಾರೆ. ಇವರು ಏಕಾಏಕಿ ಹೀರೋ ಆಗಿ ಅವತರಿಸೋ ಮನಸ್ಥಿತಿ ಹೊಂದಿದವರಲ್ಲ. ನಟನಾಗಿ ರೂಪುಗೊಳ್ಳಲು ಏನೇನು ಬೇಕೋ ಅಂಥದ್ದೆಲ್ಲ ತಯಾರಿಗಳನ್ನು ಮಾಡಿಕೊಂಡೇ ಅಖಾಡಕ್ಕಿಳಿದ ಅವರು ನಿರ್ಮಾಪಕನಾಗಿಯೂ ಜವಾಬ್ದಾರಿ ಹಂಚಿಕೊಂಡಿದ್ದಾರೆ!ಇಂಪಾದ ಹಾಡುಗಳು ಮತ್ತು ಖದರ್ ಹೊಂದಿರೋ ಟ್ರೈಲರ್ ಮೂಲಕವೇ ಬದ್ರಿ ವರ್ಸಸ್ ಮಧುಮತಿ ಚಿತ್ರ ಟಾಕ್ ಕ್ರಿಯೇಟ್ ಮಾಡಿದೆ. ಈ ಮೂಲಕವೇ ವಿಭಿನ್ನವಾದುದನ್ನು ಅಡಕವಾಗಿಸಿಕೊಂಡಿರೋ ಈ ಸಿನಿಮಾ ಈಗ ಎಲ್ಲರ ಆಸಕ್ತಿಯ ಕೇಂದ್ರಬಿಂದು. ಇತ್ತೀಚೆಗೆ ಇದರ ವಿಶೇಷ ಪ್ರದರ್ಶನವೊಂದನ್ನು ಆಯೋಜಿಸಲಾಗಿತ್ತು. ಅದಕ್ಕೆ ಓರ್ವ ಪ್ರಸಿದ್ಧ ಸಿನಿಮಾ ವಿಮರ್ಶಕರನ್ನೂ ಆಹ್ವಾನಿಸಲಾಗಿತ್ತು.
ಆ ವಿಮರ್ಶಕರು ಸಲೀಸಾಗಿ ಯಾವುದನ್ನೂ ಒಪ್ಪಿಕೊಳ್ಳುವವರಲ್ಲ. ಅಂಥವರೂ ಕೂಡಾ ಬದ್ರಿ ವರ್ಸಸ್ ಮಧುಮತಿ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಹೆಚ್ಚಾಗಿ ತೆಲುಗು ಚಿತ್ರಗಳ ಸಾಂಗತ್ಯ ಹೊಂದಿರುವ ಕೆಲವರೂ ಕೂಡಾ ಈ ಚಿತ್ರ ಯಾವ ಭಾಷೆಯ ಸಿನಿಮಾಗಳಿಗೂ ಕಡಿಮೆಯಿಲ್ಲ ಎಂಬ ಸರ್ಟಿಫಿಕೆಟು ಕೊಟ್ಟಿದ್ದಾರೆ.ಬಿಡುಗಡೆ ಪೂರ್ವದಲ್ಲಿಯೇ ಇಂಥಾ ಸಕಾರಾತ್ಮಕ ಪ್ರತಿಕ್ರಿಯೆ ಕೇಳಿ ಬಂದಿರುವುದರಿಂದ ಪ್ರತಾಪವನ್ ಸೇರಿದಂತೆ ಇಡೀ ಚಿತ್ರತಂಡ ಖುಷಿಗೊಂಡಿದೆ. ದೊಡ್ಡ ಮಟ್ಟದ ಗೆಲುವು ದಕ್ಕುವ ಭರವಸೆಯೂ ನಿಗಿನಿಗಿಸಲಾರಂಭಿಸಿದೆ.
No Comment! Be the first one.