ತಮ್ಮ ವಿಶಿಷ್ಟ ಡೈಲಾಗ್ ಡೆಲಿವರಿ ಸ್ಟೈಲಿನಿಂದ ಡೈಲಾಗ್ ಕಿಂಗ್ ಅಂತಲೇ ಹೆಸರಾಗಿರುವವರು ಸಾಯಿಕುಮಾರ್. ಇತ್ತೀಚೆಗೆ ಭಿನ್ನವಾದ ಪಾತ್ರಗಳಲ್ಲಿಯೇ ಕಾಣಿಸಿಕೊಳ್ಳುತ್ತಿರುವ ಅವರು ರೋರಿಂಗ್ ಸ್ಟಾರ್ ಶ್ರೀ ಮುರುಳಿಯ ಭರಾಟೆ ಚಿತ್ರದಲ್ಲಿ ನಟಿಸಲಿದ್ದಾರೆಂಬ ಸುದ್ದಿಯಾಗಿತ್ತು. ಇದೀಗ ಅದು ನಿಜವಾಗಿದೆ!
ಖುದ್ದು ರೋರಿಂಗ್ ಸ್ಟಾರ್ ಶ್ರೀಮುರಳಿ ಸಾಯಿಕುಮಾರ್ ಅವರನ್ನ ಭರಾಟೆ ಚಿತ್ರತಂಡಕ್ಕೆ ವೆಲ್ ಕಮ್ ಮಾಡಿದ್ದಾರೆ. ಈ ಮೂಲಕ ಡೈಲಾಗ್ ಕಿಂಗ್ ಮತ್ತು ರೋರಿಂಗ್ ಸ್ಟಾರ್ ಭರಾಟೆ ಶುರುವಾಗೋ ಸ್ಪಷ್ಟ ಸೂಚನೆ ಸಿಕ್ಕಿದೆ.
ಭರಾಟೆಯಲ್ಲಿ ಸಾಯಿ ಕುಮಾರ್ ಯಾವ ಪಾತ್ರ ನಿರ್ವಹಿಸಲಿದ್ದಾರೆಂಬ ಬಗ್ಗೆ ಚಿತ್ರತಂಡ ನಿಖರವಾದ ಮಾಹಿತಿ ಬಿಟ್ಟು ಕೊಟ್ಟಿಲ್ಲ. ಆದರೆ ಅವರಿಲ್ಲಿ ಡಿಫರೆಂಟಾದ ಪಾತ್ರವೊಂದಕ್ಕೆ ಜೀವ ತುಂಬಲಿರೋದು ಮಾತ್ರ ಸತ್ಯ. ಇದಲ್ಲದೇ ಭರಾಟೆ ಚಿತ್ರದಲ್ಲಿ ಸಾಯ ಸಹೋದರರ ಮಹಾ ಸಂಗಮವೇ ಸಂಭವಿಸಲಿದೆ. ಸಾಯಿಕುಮಾರ್ ಸಹೋದರ ಅಯ್ಯಪ್ಪ ಕೂಡಾ ಈ ಚಿತ್ರದಲ್ಲಿ ಮುಖ್ಯ ಪಾತ್ರವೊಂದನ್ನ ನಿರ್ವಹಿಸಲಿದ್ದಾರೆ.ಇದೀಗ ಭರಾಟೆ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಚೇತನ್ ನಿರ್ದೇಶನದ ಈ ಸಿನಿಮಾದಲ್ಲಿ ಶ್ರೀಲೀಲಾ ಶ್ರೀಮುರುಳಿಗೆ ಜೋಡಿಯಾಗಿ ನಟಿಸುತ್ತಿದ್ದಾರೆ.
#
No Comment! Be the first one.