ಕನ್ನಡ ಚಿತ್ರರಂಗದ ಮೇಲೆ ರಶ್ಮಿಕಾ ಲವ್!


ಕಿರಿಕ್ ಪಾರ್ಟಿ ಚಿತ್ರದ ಮೂಲಕ ನಾಯಕಿಯಾಗಿ ಅವತರಿಸಿದ್ದಾಕೆ ರಶ್ಮಿಕಾ ಮಂದಣ್ಣ. ಇದೊಂದೇ ಒಂದು ಸಿನಿಮಾ ಮೂಲಕ ಈಕೆ ಪಡೆದುಕೊಂಡಿದ್ದ ಪ್ರಚಾರ, ಗಿಟ್ಟಿಸಿಕೊಂಡ ಅವಕಾಶಗಳನ್ನ ಕಂಡು ಎಲ್ಲರೂ ಅಚ್ಚರಿಗೊಂಡಿದ್ದರು. ಆದರೆ ತೆಲುಗು ಚಿತ್ರರಂಗದಲ್ಲಿ ಅವಕಾಶ ಪಡೆಯುತ್ತಲೇ ಕನ್ನಡವನ್ನ ತಾತ್ಸಾರ ಮಾಡಲಾರಂಭಿಸಿದ್ದಾಳೆಂಬ ಗಂಭೀರ ಆರೋಪವೂ ರಶ್ಮಿಕಾ ಮೇಲೆ ಕೇಳಿ ಬಂದಿತ್ತು. ಇದೀಗ ಖುದ್ದು ರಶ್ಮಿಕಾಳೇ ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾಳೆ!
ಈ ಮೂಲಕವೇ ಕಿರಿಕ್ ಹುಡುಗಿ ಕನ್ನಡ ಚಿತ್ರರಂಗದ ಮೇಲೆ ತನಗಿರೋ ಪ್ರೀತಿಯ ಬಗ್ಗೆಯೂ ಹೇಳಿಕೊಂಡಿದ್ದಾಳೆ.

ಇಂಗ್ಲಿಷ್ ಮಾಧ್ಯಮವೊಂದರಲ್ಲಿ ರಶ್ಮಿಕಾ ಮಂದಣ್ಣ ಕನ್ನಡವನ್ನ ಕಡೆಗಣಿಸುತ್ತಿದ್ದಾಳೆಂಬ ತಾತ್ಪರ್ಯವಿರೋ ವರದಿಯೊಂದು ಪ್ರಕಟವಾಗಿತ್ತಂತೆ. ತೆಲುಗು ಮುಂತಾದ ಭಾಷೆಗಳಲ್ಲಿ ಹೆಚ್ಚಿನ ಸಂಭಾವನೆ ಸಿಗುತ್ತಿರೋದರಿಂದ ರಶ್ಮಿಕಾ ಕನ್ನಡವನ್ನ ತಾತ್ಸಾರ ಮಾಡುತ್ತಿದ್ದಾಳೆ ಎಂಬರ್ಥದಲ್ಲಿ ಅದರಲ್ಲಿ ವರದಿಯಾಗಿತ್ತು. ಇದನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿರೋ ರಶ್ಮಿಕಾ, ಇದನ್ನೆಲ್ಲ ಯಾರು ನಿಮಗೆ ಹೇಳಿದರೋ ಯಾವ ಆಧಾರದಲ್ಲಿ ಬರೆದಿದ್ದೀರೋ ಗೊತ್ತಿಲ್ಲ. ಆದರೆ ನನ್ನ ಕನ್ನಡ ಚಿತ್ರರಂಗ ನನ್ನ ಮೇಲೆ ಸಿಟ್ಟಾಗಿದೆ ಅಂತ ಬರೆಯೋದರಲ್ಲಿ ಯಾವ ಅರ್ಥವೂ ಇಲ್ಲ. ನಾನು ಎಲ್ಲಿಯೇ ಇದ್ದರೂ ಕನ್ನಡ ಚಿತ್ರರಂಗಕ್ಕೇ ಮೊದಲ ಆಧ್ಯತೆ ಕೊಡುತ್ತೇನೆ ಅಂತೆಲ್ಲ ಹೇಳಿಕೊಂಡಿದ್ದಾಳೆ.

ರಶ್ಮಿಕಾಳ ಈ ಅಭಿಪ್ರಾಯಕ್ಕೆ ಅಭಿಮಾನಿ ಪಡೆ ಭಾರೀ ಬೆಂಬಲ ವ್ಯಕ್ತ ಪಡಿಸಿದೆ. ಕೆಲ ಮಂದಿ ಅಲ್ಲಿಯೂ ರಶ್ಮಿಕಾಗೆ ಟಾಂಗ್ ನೀಡಿದ್ದಾರೆ. ಇದೆಲ್ಲ ಏನೇ ಇದ್ದರೂ ಯಜಮಾನ ಚಿತ್ರದ ನಂತರದಲ್ಲಿ ರಶ್ಮಿಕಾ ಕನ್ನಡದಲ್ಲಿಯೇ ನೆಲೆ ಕಾಣುವ ನಿರ್ಧಾರ ಮಾಡಿದಂತಿದೆ. ಧ್ರುವ ಜೊತೆಗೂ ಈಕೆ ಪೊಗರು ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾಳೆ. ಇದರ ಬೆನ್ನಿಗೇ ಮತ್ತಷ್ಟು ಚಿತ್ರಗಳನ್ನ ಒಪ್ಪಿಕೊಳ್ಳೋ ಸಾಧ್ಯತೆಗಳಿವೆ.

#


Posted

in

by

Tags:

Comments

Leave a Reply