ಬಸಣ್ಣಿ ಬಾ ಬಸಣ್ಣಿ ಬಾ ಹಾಡಿಗೆ ಚಾಲೆಂಜಿಂಗ್ ಸ್ಟಾರ್ ಜತೆ ಮೈ ಮರೆತು ಕುಣಿದಿದ್ದ ತಾನ್ಯ ಹೋಪ್ ಸದ್ಯ ಸ್ಯಾಂಡಲ್ ವುಡ್ ನ ಮಟ್ಟಿಗೆ ಬೇಡಿಕೆಯ ನಟಿಯಾಗಿ ಹೋಗಿದ್ದಾರೆ. ಹಾಗಂತ ಕನ್ನಡಕ್ಕೆ ಮಾತ್ರವಲ್ಲದೇ ಏಕಕಾಲಕ್ಕೆ ತೆಲುಗು, ತಮಿಳು ಸಿನಿಮಾ ರಂಗದಲ್ಲಿಯೂ ಫುಲ್ ಬ್ಯುಸಿಯಾಗಿದ್ದಾರೆ. ಯಜಮಾನ ನಂತರ ತಾನ್ಯ ಸದ್ಯ ಅಭಿಷೇಕ್ ಅಂಬರೀಶ್ ಜತೆ ಅಮರ್ ಸಿನಿಮಾದಲ್ಲಿಯೂ ಡ್ಯುಯೇಟ್ ಆಡಿದ್ದು, ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ. ಇದರ ಜತೆಗೆ ಈಗಾಗಲೇ ಚಿರಂಜೀವಿ ಸರ್ಜಾ ಜತೆಗೆ ಖಾಕಿ ಸಿನಿಮಾದಲ್ಲಿ ಉಪೇಂದ್ರ ಜತೆ ಹೋಂ ಮಿನಿಸ್ಟರ್ ಸಿನಿಮಾದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.

ಇದರ ಜತೆ ಜತೆಗೆ ಕನ್ನಡದ ಇನ್ನಷ್ಟು ಕಥೆಗಳನ್ನು ಕೇಳಿರುವ ತಾನ್ಯ ಹೋಪ್ ಪೆಂಡಿಂಗ್ ಲಿಸ್ಟ್ ನಲ್ಲಿಯೂ ಇಟ್ಟಿದ್ದಾರೆ. ಇನ್ನು ತೆಲುಗಿನಲ್ಲಿ ಸುದೀಪ್ ಕೃಷ್ಣನ್ ಜತೆಯೂ ಒಂದು ಸಿನಿಮಾದಲ್ಲಿ ನಟಿಸಲಿರುವುದು ನಿಕ್ಕಿಯಾಗಿದೆ. ಜತೆಗೆ ತಮಿಳಿನ ಸಿನಿಮಾವೊಂದಕ್ಕೆ ಆಯ್ಕೆಯಾಗಿದ್ದು, ಆ ಚಿತ್ರದ ಶೂಟಿಂಗ್ ಮುಂದಿನ ತಿಂಗಳು ಆರಂಭವಾಗಲಿದೆ. ಸಾಲು ಸಾಲು ಅವಕಾಶಗಳ ಸುರಿಮಳೆಯನ್ನೇ ಪಡೆದುಕೊಳ್ಳುತ್ತಿರುವ ತಾನ್ಯ ಹೋಪ್ ರವರು ತನಗೆ ಎಷ್ಟೇ ಅವಕಾಶಗಳು ಒದಗಿ ಬಂದರೂ ಕನ್ನಡ ಸಿನಿಮಾದಲ್ಲಿ ನಟಿಸಲು ನನ್ನ ಮೊದಲ ಆದ್ಯತೆಯನ್ನು ನೀಡುತ್ತೇನೆ. ನಾನು ಕರ್ನಾಟಕ ಜತೆಗೆ ಹತ್ತಿರವಾಗಲು ಬಯಸುವುದಾಗಿ ಅಭಿಪ್ರಾಯ ವ್ಯಕ್ತಪಡಿಸಿರುವುದು ವಿಶೇಷವಾಗಿದೆ.

CG ARUN

ಮತ್ತೆ ಹನುಮಂತನ ಬಾಲ ಹಿಡಿದ ಹರ್ಷ ಮಾಸ್ಟರ್!

Previous article

ಜೈ ಹೋ ನಾಯಕಿಗೆ ಮದುವೆ ಇಲ್ಲದೇ ಮಗುವಾಗಲಿದೆ!

Next article

You may also like

Comments

Leave a reply

Your email address will not be published. Required fields are marked *