ಒಂದಷ್ಟು ನೆನಪಿಡುವಂಥಾ ಪಾತ್ರಗಳಲ್ಲಿ ನಟಿಸಿ ಪ್ರೇಕ್ಷಕರರನ್ನು ಸೆಳೆದುಕೊಂಡಿದ್ದವರು ನಟಿ ಭಾವನಾ. ನಟನೆಯಿಂದ ಏಕಾಏಕಿ ರಾಜಕಾರಣದತ್ತ ಎದ್ದು ಹೋಗಿದ್ದ ಭಾವನಾ ಆ ನಂತರ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬಾಲಭವನದ ಸುತ್ತ ಕಾಣಿಸಿಕೊಂಡು ಇತ್ತೀಚೆಗೆ ಕಣ್ಮರೆಯಾಗಿ ಬಿಟ್ಟಿದ್ದರು. ಅವರನ್ನೀಗ ನಿರ್ದೇಶಕಿ ಕವಿತಾ ಲಂಕೇಶ್ ಪತ್ತೆಹಚ್ಚಿದ್ದಾರೆ!
ಭಾವನಾ ಕಲಿತಾ ಲಂಕೇಶ್ ನಿರ್ದೇಶನದ ಒಂದಷ್ಟು ಚಿತ್ರಗಳಲ್ಲಿ ಭಿನ್ನ ಬಗೆಯ ಪಾತ್ರಗಳಿಗೆ ಜೀವ ತುಂಬಿದ್ದರು. ಓರ್ವ ಪ್ರತಿಭಾವಂತ ನಟಿಯಾಗಿ ಗುರುತಿಸಿಕೊಂಡಿದ್ದ ಭಾವನಾ ಎಂಥಾ ಪಾತ್ರಗಳಿಗಾದರೂ ಜೀವ ತುಂಬ ಬಲ್ಲರೆಂಬ ವಿಚಾರ ಬೆರಗಿನಂತೆ ಪ್ರೇಕ್ಷಕರನ್ನು ತಲುಪಿಕೊಂಡಿದ್ದು ಕೂಡಾ ಕವಿತಾ ಲಂಕೇಶ್ ಸಾರಥ್ಯದ ಚಿತ್ರಗಳಿಂದಲೇ.
ಇದೀಗ ಕವಿತಾ ಲಂಕೇಶ್ ಅವರು ಭಾವನಾರ ಜೊತೆಗಿರೋ ಫೋಟೋವೊಂದನ್ನು ಫೇಸ್ ಬುಕ್‌ನಲ್ಲಿ ಹಾಕಿ ಬಹಳಷ್ಟು ವರ್ಷಗಳ ನಂತರ ಈ ಪ್ರತಿಭಾವಂತ ನಟಿಯನ್ನು ಮತ್ತೆ ಭೇಟಿಯಾದ ಸಂತಸ ಹಂಚಿಕೊಂಡಿದ್ದಾರೆ. ಜೊತೆಗೆ ಇಷ್ಟರಲ್ಲಿಯೇ ಮತ್ತೊಂದು ಚಿತ್ರದ ಮೂಲಕ ಭಾವನಾ ಜೊತೆಯಾಗೋ ಸೂಚನೆಯನ್ನೂ ನೀಡಿದ್ದಾರೆ. ಈ ಮೂಲಕವೇ ತಮ್ಮ ಮುಂದಿನ ಚಿತ್ರಕ್ಕೆ ತಯಾರಿ ಚಾಲ್ತಿಯಲ್ಲಿರುವ ಸುಳಿವನ್ನೂ ಕವಿತಾ ಲಂಕೇಶ್ ಬಿಟ್ಟು ಕೊಟ್ಟಿದ್ದಾರೆ.
ಭಾವನಾ ಈ ಹಿಂದೆ ಕಲಿತಾ ಲಂಕೇಶ್ ನಿರ್ದೇಶನದ ದೇವೀರಿ, ಪ್ರೀತಿ ಪ್ರೇಮ ಪ್ರಣಯ, ಅಲೆಮಾರಿ ಮುಂತಾದ ಚಿತ್ರಗಳಲ್ಲಿಯೂ ನಟಿಸಿದ್ದರು. ಈಗ ಭಾವನಾ ಕಲವಿತಾ ಲಂಕೇಶ್ ಅವರ ಚಿತ್ರದಲ್ಲೊಂದು ಪಾತ್ರ ಮಾಡಲಿದ್ದಾರಾ? ಅವರೇ ನಾಯಕಿಯಾಗಿ ನಟಿಸುತ್ತಾರಾ? ಅಷ್ಟಕ್ಕೂ ಕವಿತಾ ನಿರ್ದೇಶನದ ಹೊಸಾ ಚಿತ್ರ ಯಾವುದು ಎಂಬುದಕ್ಕೆಲ್ಲ ಇಷ್ಟರಲ್ಲಿಯೇ ಉತ್ತರ ಸಿಗಲಿದೆ!
Leave a Reply
You must be logged in to post a comment.