ಜನಪದ ಕಲೆಗಳಲ್ಲೇ ಗಂಡು ಕಲೆ ಎಂದು ಗುರುತಿಸಿಕೊಂಡಿರುವ ಕಲೆ ಬಯಲಾಟ. ಗ್ರಾಮೀಣ ಭಾಗಗಳಲ್ಲಿ ಮನರಂಜನೆಗಾಗಿ ಗ್ರಾಮಸ್ಥರು ಈ ಬಯಲಾಟವನ್ನು ಸಾಧನವಾಗಿ ಬಳಸುವ ರೂಢಿಯೂ ಇದೆ. ಸಾಮಾಜಿಕ ಬದಲಾವಣೆಯ ಕಾರಣ ಹಾಗೂ ಆಧುನೀಕರಣದ ಪರಿಣಾಮದಿಂದಲಾಗಿ ಬಯಲಾಟವನ್ನು ನಂಬಿದವರ ಬದುಕು ಬವಣೆಗಳನ್ನು ಕೇಳುವವರಿಲ್ಲದೇ ಸೂತ್ರ ಹರಿದ ಗಾಳಿಪಟದಂತೆಯೂ ಆಗಿದೆ. ಇಂತಹ ಕಲೆಯನ್ನು ಜೀವನದ ಉಸಿರಾಗಿಸಿಕೊಂಡ ಅನಕ್ಷರಸ್ಥ ಕಲಾವಿದನ ಸುತ್ತ ಸ್ಯಾಂಡಲ್ ವುಡ್ ನಲ್ಲಿ ಹೊಸ ಸಿನಿಮಾವೊಂದು ನಿರ್ಮಾಣವಾಗಿದ್ದು ಅದಕ್ಕೆ ಬಯಲಾಟದ ಭೀಮಣ್ಣ ಎಂದು ಟೈಟಲ್ ಇಡಲಾಗಿದೆ. ಈ ಚಿತ್ರವನ್ನು ಹಿರಿಯ ನಿರ್ದೇಶಕ ಬರಗೂರು ರಾಮಚಂದ್ರಪ್ಪ ನಿರ್ದೇಶನ ಮಾಡಿದ್ದಾರೆ.

ಇತ್ತೀಚಿಗಷ್ಟೇ ಚಿತ್ರದ ಧ್ವನಿ ಸುರಳಿ ಬಿಡುಗಡೆಗೆ ಬಂದಿದ್ದ ಚಿತ್ರತಂಡ ಸಿನಿಮಾದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿತು. ಈ ಸಂದರ್ಭದಲ್ಲಿ ಭೀಮಣ್ಣನ ಪಾತ್ರವನ್ನು ನಿರ್ವಹಿಸಿರುವ ನಟ ಸುಂದರ್ ರಾಜ್ ಮಾತನಾಡಿ ‘ನಾನು 20 ವರ್ಷದ ಹಿಂದೆ ಈ ಪಾತ್ರದಲ್ಲಿ ನಟಿಸಿದ್ದರೆ ಇನ್ನೂ ಚೆನ್ನಾಗಿ ಕುಣಿಯುತ್ತಿದ್ದೆ ಎಂದು ಮಾತು ಆರಂಭಿಸಿ ಬರಗೂರು ಮೇಷ್ಟ್ರು ಜೊತೆಗೆ ನನಗೆ ಹಲವು ವರ್ಷಗಳಿಂದ ಒಡನಾಟವಿದೆ.  ಅವರು ಕಲಾವಿದರನ್ನು ದುಡಿಸಿಕೊಳ್ಳುವ ರೀತಿಗೆ ನಾನು ಬಹಳಷ್ಟು ಬಾರಿ ಬೆರಗಾಗಿದ್ದೇನೆ’ ಎಂದರು.

ಬರಗೂರು ರಾಮಚಂದ್ರಪ್ಪ ಅವರ ನಿರ್ದೇಶನದ ‘ಬೆಕ್ಕು’ ಚಿತ್ರದ ಮೂಲಕ ಸಂಗೀತ ನಿರ್ದೇಶನಕ್ಕೆ ಕಾಲಿಟ್ಟ ಗಾಯಕಿ ಶಮಿತಾ ಮಲ್ನಾಡ್‌. ಭೀಮಣ್ಣನ ಕುಣಿತಕ್ಕೂ ಸಂಗೀತ ನೀಡಿದ ಖುಷಿಯಲ್ಲಿದ್ದರು. ‘ಮೇಷ್ಟ್ರು ಜೊತೆಗೆ ನನಗಿದು ಮೂರನೇ ಚಿತ್ರ’ ಎಂದು ಸಂತಸ ಹಂಚಿಕೊಂಡರು ಶಮಿತಾ. ಚಿತ್ರದಲ್ಲಿ ಐದು ಹಾಡುಗಳಿದ್ದು, ವಿಶೇಷವೆಂದರೆ ಐಪಿಎಸ್‌ ಅಧಿಕಾರಿ ಡಿ. ರೂಪಾ, ನಟ ಸಂಚಾರಿ ವಿಜಯ್, ಹನುಮಂತಪ್ಪ ಬಟ್ಟೂರು, ಸುಂದರರಾಜ್‌ ಕಂಠದಾನ ಮಾಡಿದ್ದಾರೆ. ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆಯ ಜವಾಬ್ದಾರಿಯನ್ನು ಬರಗೂರು ರಾಮಚಂದ್ರಪ್ಪ ಅವರೇ ಹೊತ್ತಿದ್ದಾರೆ. ಕೃಷ್ಣವೇಣಿ ನಂಜಪ್ಪ ಕಾಳೇಗೌಡ ಮತ್ತು ಧನಲಕ್ಷ್ಮಿ ಕೃಷ್ಣ‍ಪ್ಪ ಚಿತ್ರಕ್ಕೆ  ಬಂಡವಾಳ ಹೂಡಿದ್ದಾರೆ.

CG ARUN

ಅರ್ಜುನ್ ಗೌಡ ಟೀಸರ್ ಬಿಡುಗಡೆ!

Previous article

ನಾಯಿ ಮರಿ ಗಿಫ್ಟ್ ಕೊಟ್ಟ ಕುಲವಧು ಧನ್ಯ!

Next article

You may also like

Comments

Leave a reply

Your email address will not be published. Required fields are marked *