ರಾಜವರ್ಧನ್ ಬಿಚ್ಚುಗತ್ತಿ ಭರಮಣ್ಣನ ಪಾತ್ರದಲ್ಲಿ ನಟಿಸುತ್ತಿರೋದು, ಅದಕ್ಕಾಗಿ ಅವರು ಮಾಡಿಕೊಂಡಿರೋ ಭರಪೂರ ತಯಾರಿಗಳ ಬಗ್ಗೆ ಈಗಾಗಲೇ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದೆ. ಇದೀಗ ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಗೆ ದಿನಾಂಕ ನಿಗಧಿಯಾಗಿದೆ. ವಿಶೇಷವೆಂದರೆ ಈ ಫಸ್ಟ್ ಲುಕ್ ಪೋಸ್ಟರ್ ಅನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆಗೊಳಿಸಲಿದ್ದಾರೆ.
ಇದೇ ಹದಿನೈದನೇ ತಾರೀಕಿನಂದು ಬೆಳಗ್ಗೆ ಒಂಬತ್ತು ಘಂಟೆಗೆ ಸರಿಯಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಡೆಯಿಂದ ಈ ಪೋಸ್ಟರ್ ಅನಾವರಣಗೊಳ್ಳಲಿದೆ. ಬಿಚ್ಚುಗತ್ತಿ ದಳವಾಯಿ ದಂಗೆಯ ರೋಚಕ ಕಥೆ ಮತ್ತು ವೀರ ಸೇನಾನಿ ಭರಮಣ್ಣ ನಾಯಕನ ಕುರಿತಾದ ಚಿತ್ರ. ಇದನ್ನು ಯುವ ನಿರ್ದೇಶಕ ಹರಿ ಸಂತು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಮೂಲಕ ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ಹೊಸಾ ಅವತಾರದಲ್ಲಿ, ಎಲ್ಲರೂ ಅಚ್ಚರಿಗೊಳ್ಳುವಂತೆ ಪ್ರೇಕ್ಷಕರ ಮುಂದೆ ಬರಲು ತಯಾರಿ ನಡೆಸಿದ್ದಾರೆ.
#
No Comment! Be the first one.