ಇತ್ತೀಚಿಗೆ ಅಮಲಾ ಪೌಲ್ ಆಡೈ ಚಿತ್ರದ ಅರೆಬೆತ್ತಲೆ ಫೋಸಿಗೆ ಸೋಶಿಯಲ್ ಮೀಡಿಯಾದಲ್ಲಿ ಬಾರಿ ಟೀಕೆ ವ್ಯಕ್ತವಾಗಿತ್ತು. ಕಮೆಂಟಿಗರು ಅಮಲಾ ಪೌಲ್ ಗೆ ಸಿಕ್ಕಾಪಟ್ಟೆ ಕ್ಲಾಸ್ ಕೂಡ ತೆಗೆದುಕೊಂಡಿದ್ದರು. ಆ ಸುದ್ದಿ ಮಾಸುವ ಮುನ್ನವೇ ಸ್ವತಃ ನಟಿಯೊಬ್ಬಳು ನಾನು ಸಿನಿಮಾದಲ್ಲಿ ನಗ್ನವಾಗಿ ನಟಿಸಲು ಸಿದ್ಧ ಎಂದು ಸ್ಟೇಟ್ ಮೆಂಟ್ ಕೊಡುವ ಮೂಲಕ ಶಾಕ್ ನೀಡಿದ್ದಾರೆ.
ಯೆಸ್.. ಇತ್ತೀಚಿಗೆ ಅಮಲಾ ಪೌಲ್ ಅವರ ಆಡೈ ಸಿನಿಮಾ ನೋಡಿದ ಮೇಲೆ ತೆಲುಗು ನಟಿ ಬಿಂದು ಮಾಧವಿ ನಾನು ಇಂತಹ ಸಿನಿಮಾಗಳಲ್ಲಿ ಲೈಕ್ ಮಾಡುತ್ತೇನೆ. ನಾನು ನಗ್ನವಾಗಿ ನಟಿಸಲು ಸಿದ್ಧ ಎಂದು ತಿಳಿಸಿ ಕೇಳುಗರ ಕಣ್ಣರಳುವಂತೆ ಮಾಡಿದ್ದಾರೆ. ನಾಯಕರಂತೆ ನಾಯಕಿಯರು ನಟಿಸಬಲ್ಲರು ಎಂಬುದಕ್ಕೆ ಮಹಿಳೆಯರ ಮೇಲೆ ಕೇಂದ್ರಿತವಾದ ಇನ್ನಷ್ಟು ಸಿನಿಮಾಗಳು ಬರಬೇಕು. ಅಂತಹ ಮಹಿಳಾ ಪ್ರಧಾನ ಚಿತ್ರಗಳಲ್ಲಿ ನಾಯಕಿ ಪಾತ್ರಕ್ಕೆ ಹೆಚ್ಚು ಮಹತ್ವವಿರಬೇಕು. ಆಗ ನಾನು ನಗ್ನವಾಗಿ ನಟಿಸುತ್ತೇನೆ” ಎಂದು ಬಿಂದು ಮಾಧವಿ ಹೇಳಿಕೊಂಡಿದ್ದಾರೆ.
No Comment! Be the first one.