ನಿನ್ನೆಯಷ್ಟೇ ವಾಣಿ ಹರಿಕೃಷ್ಣ ತಮ್ಮ ಪತಿ ಹರಿಕೃಷ್ಣ ಮೇಲೆ ಅಸಮಧಾನಗೊಂಡು ಫೇಸ್ ಬುಕ್ ನಲ್ಲಿ ಪೋಸ್ಟ್ ಒಂದನ್ನು ಹಾಕಿದ್ದರು. ಈ ಹಿನ್ನೆಲೆಯಲ್ಲಿ ಸುದ್ದಿ ಮಾಧ್ಯಮಗಳು ಇಲ್ಲ ಸಲ್ಲದ ಊಹಾ ಪೋಹಾಗಳನ್ನು ಸೃಷ್ಟಿಸಿ ವಾಣಿ ಮತ್ತು ಹರಿಕೃಷ್ಣ ದಾಂಪತ್ಯವೇ ಮುರಿದು ಬಿತ್ತು ಎಂಬಂತೆ ಕಪೋಲಕಲ್ಪಿತ ಸುದ್ದಿಗಳನ್ನು ಬಿಟ್ಟೂ ಬಿಡದಂತೆ ಪ್ರಸಾರ ಮಾಡಿದ್ದರು. ಈ ಕುರಿತು ಸಂಗೀತ ನಿರ್ದೇಶಕ ಕಮ್ ವಾಣಿ ಪತಿ ಹರಿಕೃಷ್ಣ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
ವಾಣಿ ಮತ್ತು ತಮ್ಮ ದಾಂಪತ್ಯ ಜೀವನದ ಕುರಿತು ಮಾತನಾಡಿರುವ ಹರಿಕೃಷ್ಣ ‘ನಾವು ಚೆನ್ನಾಗಿಯೇ ಇದ್ದೇವೆ. ವಾಣಿ ಅವರು ಬೇಜಾರಿನಲ್ಲಿ ಪೋಸ್ಟ್ ಮಾಡಿದ್ದಾರೆ. ಅದು ಸಹ ವೃತ್ತಿಗೆ ಸಂಬಂಧಿಸಿದ್ದೇ ವೈಯಕ್ತಿಕ ಜೀವನಕ್ಕಲ್ಲ” ಆದರೆ ‘ತಮ್ಮ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ’ ಎಂದು ಕೆಲವು ಮಾಧ್ಯಮಗಳಲ್ಲಿ ಹಬ್ಬಿರುವ ಸುದ್ದಿಗೆ ಸ್ಪಷ್ಟನೆ ಕೊಟ್ಟು “ಇವೆಲ್ಲ ಕಪೋಲ ಕಲ್ಪಿತ ಸುದ್ದಿಗಳು ಎಂದಿದ್ದಾರೆ. ಅಲ್ಲದೇ ನಮ್ಮಿಬ್ಬರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂದು ಮಾಧ್ಯಮಗಳಲ್ಲಿ ಸುದ್ದಿಯಾಗಿರುವುದು ಸತ್ಯಕ್ಕೆ ದೂರವಾದುದು. ನಾವಿಬ್ಬರೂ ಚೆನ್ನಾಗಿಯೇ ಇದ್ದೇವೆ. ಅವಳು ಹಾಡಿದ್ದ ಹಾಡನ್ನು ಮತ್ತೆ ಬೇರೆಯವರು ಹಾಡಿದ್ದಕ್ಕೆ ಬೇಸರವಾಗಿ ‘ಫೇಸ್ಬುಕ್’ನಲ್ಲಿ ಮಾಡಿದ ಪೋಸ್ಟ್ ಏನೇನೋ ಟರ್ನ್ ತೆಗೆದುಕೊಂಡು ಸತ್ಯಕ್ಕೆ ದೂರವಾದ ಸುದ್ದಿ ಬಿತ್ತರವಾಗಿದೆ. ನಾವಿಬ್ಬರೂ ಈ ಮೊದಲಿನಂತೆ ಅನ್ಯೋನ್ಯವಾಗಿಯೇ ಇದ್ದೇವೆ” ಎಂದು ತಿಳಿಸುವ ಮೂಲಕ ಗಾಳಿಸುದ್ದಿಗೆ ಬ್ರೇಕ್ ಹಾಕಿದ್ದಾರೆ.
No Comment! Be the first one.