ಭಾರತದ ಹೊರತಾಗಿಯೂ ಸಿನಿಮೋತ್ಸವಗಳಲ್ಲಿ ಸ್ಪರ್ಧಿಸಿ ಪ್ರಶಸ್ತಿಗಳನ್ನು ಬಾಚಿಕೊಳ್ಳುತ್ತಿರುವ ಆದರ್ಶ್ ಈಶ್ವರಪ್ಪ ಆಕ್ಷನ್ ಕಟ್ ಹೇಳಿರುವ
ಭಿನ್ನ ಚಿತ್ರಕ್ಕೆ ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಟ್ ಆಮೀರ್ ಖಾನ್ ಪ್ರಶಂಸೆ ಸಿಕ್ಕಿದೆ. ಭಿನ್ನ ಸಿನಿಮಾದ ಟ್ರೇಲರ್ ವೀಕ್ಷಣೆ ಮಾಡಿರುವ ಅವರು, ಚಿತ್ರ ತಂಡದ ಪ್ರಯತ್ನಕ್ಕೆ ಭೇಷ್ ಎಂದಿದ್ದಾರೆ. ಅಲ್ಲದೇ ಸಿನಿಮಾ ನೋಡುವ ಇಂಗಿತವನ್ನು ಹೊರಹಾಕಿದ್ದಾರೆ. ಇತ್ತೀಚೆಗಷ್ಟೇ 9ನೇ ದಾದಾ ಸಾಹೇಬ್ ಫಾಲ್ಕೆ ಫಿಲ್ಮ್ ಫೆಸ್ಟಿವಲ್ನಲ್ಲಿ ‘ಅತ್ಯುತ್ತಮ ಸ್ಕ್ರೀನ್ಪ್ಲೇ’ ವಿಭಾಗದಲ್ಲಿ ‘ಭಿನ್ನ’ ಪ್ರಶಸ್ತಿ ಗಿಟ್ಟಿಸಿಕೊಂಡಿತ್ತು. ಅದಾದ ಬಳಿಕ ಇಟಲಿಯ ಒನಿರೋಸ್ ಸಿನಿಮೋತ್ಸವದಲ್ಲಿ ‘ಅತ್ಯುತ್ತಮ ಥ್ರಿಲ್ಲರ್ ಚಿತ್ರ’, ‘ಅತ್ಯುತ್ತಮ ನಿರ್ದೇಶಕ’, ‘ಬೆಸ್ಟ್ ಒರಿಜಿನಲ್ ಸೌಂಡ್ಟ್ರ್ಯಾಕ್’ ವಿಭಾಗದಲ್ಲಿ ಅವಾರ್ಡ್ಗಳನ್ನು ಪಡೆದುಕೊಂಡಿದೆ. ಯೂರೋಪಿಯನ್ ಸಿನಿಮಾಟೋಗ್ರಾಫಿ ಫೆಸ್ಟಿವಲ್ನಲ್ಲಿ ‘ಅತ್ಯುತ್ತಮ ಫೀಚರ್ ಫಿಲಂ’ ಪ್ರಶಸ್ತಿ ಬಂದಿದೆ.
ಚಿತ್ರದ ಡಿಜಿಟಲ್ ವ್ಯವಹಾರದ ಸಲುವಾಗಿ ಸೋಮವಾರ ಮುಂಬೈಗೆ ತೆರಳಿದ್ದ ಚಿತ್ರದ ಕಾರ್ಯಕಾರಿ ನಿರ್ವಪಕ ಗಣೇಶ್ ಪಾಪಣ್ಣ, ಆಮೀರ್ ಖಾನ್ರನ್ನು ಭೇಟಿ ಮಾಡಿದ್ದಾರೆ. ಅವರೊಂದಿಗೆ ‘ಭಿನ್ನ’ ಸೇರಿ ಕನ್ನಡ ಸಿನಿಮಾರಂಗದಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ಚರ್ಚಿಸಿದ್ದಾರೆ. ಸೈಕಲಾಜಿಕಲ್ ಥ್ರಿಲ್ಲರ್ ವಿಷಯವನ್ನು ಹೊಂದಿರುವ ಈ ಚಿತ್ರದಲ್ಲಿ ರಂಗಭೂಮಿ ಹಿನ್ನೆಲೆಯ ಶಶಾಂಕ್ ಪುರುಷೋತ್ತಮ್ ಸಿದ್ಧಾರ್ಥ್ ಮಾಧ್ಯಮಿಕ, ಪಾಯಲ್ ರಾಧಾಕೃಷ್ಣ, ಸೌಮ್ಯಾ ಜಗನ್ಮೂರ್ತಿ ನಟಿಸಿದ್ದಾರೆ. ಸದ್ಯದಲ್ಲಿಯೇ ಭಿನ್ನ ರಿಲೀಸ್ ಆಗಲಿದೆ.
No Comment! Be the first one.