ಸಿನಿಮಾ ಜತೆಗೆ ರಾಜಕೀಯದಲ್ಲೂ ಸಕ್ರಿಯರಾಗಲೂ ತುದಿಗಾಲಿನಲ್ಲಿದ್ದ ಉಪೇಂದ್ರ ಪ್ರಜಾಕೀಯದ ಮೂಲಕ ಲೋಕಸಭಾ ಚುನಾವಣೆಯಲ್ಲಿಯೂ ಸ್ವಲ್ಪ ಮಟ್ಟಿಗೆ ಸುದ್ದಿಯಲ್ಲಿದ್ದರು. ಚುನಾವಣೆಯ ನಂತರ ಮತ್ತೆ ಸ್ಯಾಂಡಲ್ ವುಡ್ ಗೆ ಕಮ್ ಬ್ಯಾಕ್ ಆಗಿರುವ ಉಪೇಂದ್ರ ಈಗಾಗಲೇ ಐ ಲವ್ ಯು ಸಿನಿಮಾ ರಿಲೀಸ್ ಗೆ ದಿನಗಣನೆ ಮಾಡುತ್ತಿದ್ದಾರೆ.
ಈ ನಡುವೆ ಹೊಸ ಸಿನಿಮಾವನ್ನು ಉಪೇಂದ್ರ ಒಪ್ಪಿಕೊಂಡಿದ್ದು, ಆ ಚಿತ್ರಕ್ಕೆ ಬುದ್ದಿವಂತ 2 ಎಂದು ಹೆಸರಿಡಲಾಗಿದೆ. ಚಿತ್ರದಲ್ಲಿ ಉಪ್ಪಿಗೆ ಸೋನಲ್ ಮತ್ತು ಮೇಘನಾ ರಾಜ್ ನಾಯಕಿಯರಾಗಿ ಜತೆಯಾಗಿದ್ದು, ಡಿಡ್ಲಿ ಆದಿತ್ಯ ವಿಲನ್ ಆಗಿಯೂ ನಟಿಸಲಿದ್ದಾರೆ. ಇನ್ನು ಬುದ್ದಿವಂತ 2 ಸಿನಿಮಾವನ್ನು ಕ್ರಿಸ್ಟಲ್ ಪಾರ್ಕ್ ನಿರ್ಮಾಣ ಮಾಡುತ್ತಿದೆ. 2008ರಲ್ಲಿ ರಿಲೀಸ್ ಭಾಗ್ಯ ಕಂಡಿದ್ದ ಬುದ್ದಿವಂತ ಸಿನಿಮಾಕ್ಕೂ 2019ರ ಬುದ್ದಿವಂತ 2ಗೂ ಎಲ್ಲಿಂದೆಲ್ಲಿಯ ಸಂಬಂಧವೂ ಇಲ್ಲ.
No Comment! Be the first one.