ಸ್ಯಾಂಡಲ್ ವುಡ್ ನಲ್ಲಿ ಗೂಗ್ಲಿ ಬಾರಿಸಿ ಗೆದ್ದು, ನಂತರ ರಣ ವಿಕ್ರಮ್, ನಟ ಸಾರ್ವಭೌಮನ ಹಿಂದೆ ಬಿದ್ದ ಪವನ್ ಒಡೆಯರ್ ಸದ್ಯ ಏನ್ ಮಾಡ್ತಿದ್ದಾರೆ ಅನ್ನೋದು ಬಹಳಷ್ಟು ಮಂದಿಯ ಅಳಲು. ನಟಸಾರ್ವಭೌಮ ಸಿನಿಮಾದ ನಂತರ ಯುವ ನಟನೊಬ್ಬನಿಗಾಗಿ ಹೊಸ ಸಿನಿಮಾವೊಂದನ್ನು ಮಾಡಲು ಪವನ್ ರೆಡಿಯಾಗಿದ್ದಾರೆ. ಹೌದು ರೋಗ್ ಚಿತ್ರ ಖ್ಯಾತಿಯ ನಟ ಇಶಾನ್ ಗೆ ಪವನ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇಶಾನ್ ಅಭಿನಯದ ರೋಗ್ ಚಿತ್ರವನ್ನು ಪೂರಿ ಜಗನ್ನಾಥ್ ನಿರ್ದೇಶಿಸಿದ್ದರು.
ಸದ್ಯ ಎರಡನೇ ಚಿತ್ರವನ್ನು ಪವನ್ ಜೊತೆ ಮಾಡುವ ತರಾತುರಿಯಲ್ಲಿದ್ದಾರೆ ಇಶಾನ್. ಮೊದಲ ಸಿನಿಮಾ ‘ರೋಗ್’ ಕನ್ನಡ ಮತ್ತು ತೆಲುಗು ಎರಡು ಭಾಷೆಯಲ್ಲೂ ತೆರೆಕಂಡಿತ್ತು. ರೋಗ್’ ಮೂಲಕ ರೋಮ್ಯಾಂಟಿಕ್ ಹೀರೋ ಆಗಿ ಮಿಂಚಿದ್ದ ಇಶಾನ್ ಪವನ್ ಒಡೆಯರ್ ಸಿನಿಮಾದಲ್ಲಿ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಸದ್ಯಕ್ಕಿದ್ದು, ಸದ್ಯದಲ್ಲೇ ಎಲ್ಲ ಮಾಹಿತಿಗಳು ಅಧಿಕೃತವಾಗಿ ಹೊರಬೀಳಲಿದೆ.
Leave a Reply
You must be logged in to post a comment.