ಟೈಟಲ್ ನಿಂದ ಆರಂಭವಾಗಿ ಈಗಾಗಲೇ ತನ್ನ ವಿಭಿನ್ನ ಟೀಸರ್, ಟ್ರೇಲರ್ ಮತ್ತು ಹಾಡುಗಳ ಮೂಲಕ ಸದ್ದು ಮಾಡುತ್ತಿರುವ ‘ಹಫ್ತಾ’ ಚಿತ್ರವು ರಿಲೀಸ್ ಗೆ ರೆಡಿಯಾಗಿದೆ. ಸದ್ಯ ಈ ಸಿನಿಮಾದ ಡ್ಯೂಯೆಟ್ ಸಾಂಗೊಂದನ್ನು ದುನಿಯಾ ವಿಜಯ್ ರಿಲೀಸ್ ಮಾಡಿದ್ದಾರೆ. ‘ನೀನೆ ನೀನೆ ಜೊತೆಯಲಿ’ ಎಂದು ಶುರುವಾಗುವ ಈ ಹಾಡನ್ನು ನಿರಂಜನ್ ಬರೆದಿದ್ದು, ಹರಿಚರಣ್ ಹಾಗೂ ಅನುರಾಧಾ ಭಟ್ ಹಾಡಿದ್ದಾರೆ. ಚಿತ್ರಕ್ಕೆ ವಿಜಯ್ ರ್ಯಾರ್ಡ್ಲಿ ಸಂಗೀತ ನೀಡಿದ್ದಾರೆ. ಈ ಲಿರಿಕಲ್ ವಿಡಿಯೋದಲ್ಲಿ ಚಿತ್ರದ ಮೇಕಿಂಗನ್ನು ಸಹ ನೋಡಬಹುದಾಗಿದೆ.
ರಮೇಶ್ ಅರವಿಂದ್ ಮತ್ತು ದಯಾಳ್ ಜತೆಗೆ ಕೆಲಸ ಮಾಡಿರುವ ಪ್ರಕಾಶ್ ಹಫ್ತಾ ಸಿನಿಮಾದ ಮೂಲಕ ಸ್ವತಂತ್ರ್ಯ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಮೂಲಕ ವರ್ಧನ್ ತೀರ್ಥಹಳ್ಳಿ ನಾಯಕನಟರಾಗಿ ಕಾಣಿಸಿಕೊಳ್ಳುತ್ತಿದ್ದು, ರಾಘವ್ ನಾಗ್ ಸಹ ಚಿತ್ರದಲ್ಲಿದ್ದಾರೆ. ಉಳಿದಂತೆ ಬಿಂಬಶ್ರೀ, ಸೌಮ್ಯ ಸೇರಿದಂತೆ ಅನೇಕರಿದ್ದಾರೆ. ಕಡಲ ತೀರದ ಭೂಗತಲೋಕದ ಚಟುವಟಿಕೆಗಳು ಮತ್ತು ಸುಪಾರಿ ಕಿಲ್ಲಿಂಗ್ ಅಂಶಗಳೇ ಈ ಚಿತ್ರದ ಕಥಾ ವಸ್ತುವಾಗಿದ್ದು, ಸೆಸ್ಪನ್ಸ್- ಥ್ರಿಲ್ಲರ್ ಶೈಲಿಯಲ್ಲಿ ತೆರೆಮೇಲೆ ಬರುತ್ತಿದೆ. ಕೆಟ್ಟವರನ್ನು ಸಂಹಾರ ಮಾಡಲು ಕೆಟ್ಟವನೇ ಬರಬೇಕು’ ಎಂಬುದು ಚಿತ್ರದ ಕಥೆಯ ಒಂದು ಎಳೆ ಎನ್ನುತ್ತದೆ ಚಿತ್ರ ತಂಡ. ಮೈತ್ರಿ ಪ್ರೊಡಕ್ಷನ್ ಬ್ಯಾನರ್ ನಡಿ ಸಿನಿಮಾ ಮೂಡಿ ಬರುತ್ತಿರುವ ಚಿತ್ರಕ್ಕೆ ಮಂಜುನಾಥ್ ಬಂಡವಾಳ ಹೂಡಿದ್ದಾರೆ..
No Comment! Be the first one.