ಹಾಡುಗಳ ಮೂಲಕವೇ ಯುವ ಮನಸುಗಳನ್ನು ಆವರಿಸಿಕೊಳ್ಳುವ ಅಪರೂಪದ ಕಲೆಯೊಂದು ನಿರ್ದೇಶಕ ಯೋಗರಾಜ ಭಟ್ಟರಿಗೆ ಸಿದ್ಧಿಸಿಬಿಟ್ಟಿದೆ. ಈ ಕಾರಣದಿಂದಲೇ ಅವರೊಂದು ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆಂದಾಕ್ಷಣವೇ ಉಳಿಕೆ ವಿಚಾರಗಳೆಲ್ಲ ಗೌಣವಾಗಿ ಹಾಡುಗಳಿಗಾಗಿಯೇ ಕಾದು ಕೂರುವಂಥಾ ವಾತಾವರಣ ನಿರ್ಮಾಣಗೊಂಡಿದೆ. ಈ ತಿಂಗಳ ಕೊನೆಯಲ್ಲಿ ಬಿಡುಗಡೆಯಾಗಲು ತಯಾರಾಗಿರುವ ಪಂಚತಂತ್ರ ಕೂಡಾ ಇದಕ್ಕೆ ಹೊರತಾಗಿಲ್ಲ.
ಪಂಚತಂತ್ರ ಇದೇ ತಿಂಗಳ 29ರಂದು ರಾಜ್ಯಾಧ್ಯಂತ ತೆರೆಕಾಣುತ್ತಿದೆ. ರಾಜ್ಯಾಧ್ಯಂತ ಈ ಚಿತ್ರಕ್ಕಾಗಿನ ಕಾತರ ಕೂಡಾ ನಿಗಿನಿಗಿಸುತ್ತಿದೆ. ಅದನ್ನು ಮತ್ತಷ್ಟು ಪ್ರಜ್ವಲಿಸುವಂತೆ ಮಾಡಲೆಂದೇ ಭಟ್ಟರು ಊರೂರು ತಿರುಗುತ್ತಾ ಪ್ರಮೋಷನ್ ಕಾರ್ಯದಲ್ಲಿ ಕಳೆದು ಹೋಗಿದ್ದಾರೆ. ವಿಶೇಷವೆಂದರೆ, ಈ ಚಿತ್ರ ಪ್ರೇಕ್ಷಕರನ್ನ ಈ ಪಾಟಿ ಸೆಳೆದುಕೊಂಡಿರೋದು ಹಾಡುಗಳ ಕಾರಣದಿಂದಲೇ!
ಇದೀಗ ಭಟ್ಟರ ಬತ್ತಳಿಕೆಯಿಂದ ಮತ್ತೊಂದು ಹಾಡು ಹೊರ ಬಂದಿದೆ. ಬ್ಯಾಡ ಹೋಗು ಅಂದ್ಬುಟ್ಳು ಎಂಬ ಈ ಟಪ್ಪಾಂಗುಚ್ಚಿ ಹಾಡಂತೂ ಪಂಚತಂತ್ರದ ಈ ವರೆಗಿನ ದಾಖಲೆಯನ್ನೇ ಮೀರಿಸುವಂತಿದೆ. ಮೂರು ದಿನಗಳ ಹಿಂದೆ ಬಿಡುಗಡೆಯಾಗಿರೋ ರ್ಯಾಪ್ ಶೈಲಿಯ ಈ ಹಾಡೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿಬಿಟ್ಟಿದೆ. ವಿ ಹರಿಕೃಷ್ಣ ಸಂಗೀತವಿರೋ ಈ ಹಾಡನ್ನ ವಾಸುಕಿ ವೈಭವ್ ಹಾಡಿದ್ದಾರೆ.
ಈ ಹಿಂದೆ ಶೃಂಗಾರದ ಹೊಂಗೇಮರ ಹೂ ಬಿಟ್ಟಿದೆ ಎಂಬ ಹಾಡಿನ ಮೂಲಕ ಪಂಚತಂತ್ರ ಭಾರೀ ಸದ್ದು ಮಾಡುತ್ತು. ಇದಂತೂ ಎವರ್ ಗ್ರೀನ್ ಹಾಡು. ಇದು ಯೋಗರಾಜ ಭಟ್ರೊಳಗಿನ ನಿಜವಾದ ಕವಿತ್ವದ ಕಸುವಿಗೆ ಸಾಕ್ಷಿಯಂತಿರೋ ಹಾಡೂ ಹೌದು. ಈ ಹಾಡಿನ ಅಲೆ ಜೋರಾಗಿರುವಾಗಲೇ ಯುವಕರಿಗೆ ಒಂದೇ ಕ್ಷಣದಲ್ಲಿ ಕನೆಕ್ಟಾಗುವಂಥಾ ಬ್ಯಾಡ ಹೋಗು ಅಂದ್ಬುಟ್ಳು ಹಾಡಿನ ಹವಾ ಶುರುವಾಗಿದೆ!
No Comment! Be the first one.