- ಸಂತೋಷ್ ಸಕ್ರೆಬೈಲು
2019ರಲ್ಲಿ ಬಾಲಿವುಡ್ ನಟಿ ರಿಯಾ ಚಕ್ರವರ್ತಿ, ‘ಚೆಹೆರೆ’ ಸಿನಿಮಾದ ಬಗ್ಗೆ ಸೋಶಿಯಲ್ ಮಿಡಿಯಾದಲ್ಲಿ ಮಾಹಿತಿ ಶೇರ್ ಮಾಡಿದ್ದರು. ‘ಚೆಹೆರೆ’ ಸಿನಿಮಾದಲ್ಲಿ ಆಕೆ ನಟಿಸುತ್ತಿರೋದಾಗಿ ಕೆಲ ಸಂಗತಿಗಳನ್ನ ಹಂಚಿಕೊಂಡಿದ್ದರು, ಅದ್ಯಾವಾಗ ಬಾಲಿವುಡ್ ಬ್ಯೂಟಿಫುಲ್ ಸ್ಟಾರ್ ಸುಶಾಂತ್ ಸಿಂಗ್ ಸಾವನ್ನಪ್ಪಿದರೋ ಅಲ್ಲಿಂದಲೇ ಈಕೆಗೆ ಹಿನ್ನೆಡೆಯಾಯಿತು. ಮುಂಬೈ ಡ್ರಗ್ಸ್ ಕೇಸ್ ನಲ್ಲಿ ರಿಯಾ ಚಕ್ರವರ್ತಿ ಜೈಲುವಾಸವನ್ನು ಅನುಭವಿಸಿದಳು. ಈ ಜೈಲುವಾಸವೇ ರಿಯಾ ಸಿನಿಮಾ ಕ್ಷೇತ್ರಕ್ಕೆ ಪೆಟ್ಟುಬಿತ್ತಾ ಎಂಬ ಪ್ರಶ್ನೆ ಮೂಡಿದೆ
2019ರಲ್ಲಿ ‘ಚೆಹೆರೆ’ ಸಿನಿಮಾ ನಿರ್ಮಾಣಕ್ಕೆ ಸರ್ವ ತಯಾರಿಯು ನಡೆದಿತ್ತು, ಅದರಂತೆ ಸಿನಿಮಾದಲ್ಲಿ ನಟಿಸುವವರು ಯಾರು ಎಂಬುದುರ ಬಗ್ಗೆಯೆಲ್ಲಾ ಚರ್ಚೆಯಾಗಿ, ಅಂತಿಮವಾಗಿ ತಾರಾಗಣವನ್ನ ಪ್ರಕಟಿಸಿದ್ದರು. ಈ ಚಲನಚಿತ್ರದಲ್ಲಿ ಬಿಗ್ ಬಿ ಅಮಿತಾಬ್ ಕೂಡ ನಟಿಸುತ್ತಿದ್ದಾರೆ. ಜೊತೆಗೆ ರಿಯಾ ಚಕ್ರವರ್ತಿ ಕೂಡ ಇರುತ್ತಾರೆ ಎಂಬ ಮಾಹಿತಿಯಿತ್ತು. ಇದೀಗ ‘ಚೆಹೆರೆ’ ಸಿನಿಮಾದ ಪೋಸ್ಟರ್ ರಿಲೀಸ್ ಮಾಡಲಾಗಿದೆ, ಆದರೆ ಆ ಪೋಸ್ಟರ್ ನಲ್ಲಿ ನಟಿ ರಿಯಾ ಚಕ್ರವರ್ತಿಯೇ ಇಲ್ಲವಾಗಿದ್ದಾರೆ. ಈ ಬಗ್ಗೆ ನಿರ್ಮಾಪಕ ಆನಂದ್ ಪಂಡಿತ್ ಕೂಡ ಮೌನ ವಹಿಸಿದ್ದರು. ಆಕೆಯನ್ನ ಸಿನಿಮಾದಿಂದ ಕೈ ಬಿಟ್ಟಿದ್ದೀರಾ ಎಂಬ ಪ್ರಶ್ನೆಗೆ, ಅವರ ಉತ್ತರವೇ ಬೇರೆಯಾಗಿತ್ತು..
ಮುಂಬೈ ಡ್ರಗ್ಸ್ ಕೇಸ್ ನಲ್ಲಿ ರಿಯಾ ಲಾಕ್ ಆಗಿದ್ದರಿಂದ ಆಕೆಯ ಕರಿಯರ್ ಗೆ ದೊಡ್ಡ ಹೊಡೆತ ಬಿತ್ತು ಅಂದರೂ ತಪ್ಪಾಗಲ್ಲ.. ‘ಚೆಹೆರೆ’ ಸಿನಿಮಾದ ಮೊದಲ ಪೋಸ್ಟರ್ ಔಟ್ ಆಗಿದ್ರು ಆಕೆಯ ಮುಖವೇ ಕಾಣದಾಗಿದೆ, ಅದ್ರಲ್ಲೂ ಅಮಿತಾಬ್ ನಟನೆ ಮಾಡುವ ಮೂವಿಯಲ್ಲಿ ಆಕೆಯನ್ನೇ ಹೊರದಬ್ಬಿದ್ದಾರಾ ಎಂಬ ಪ್ರಶ್ನೆಗಳು ಸಿನಿ ಗಲ್ಲಿಯಲ್ಲಿ ಚರ್ಚೆಯಾಗ್ತಿದೆ. ಈ ಬಗ್ಗೆ ನಿರ್ಮಾಪಕ ಆನಂದ್ ಪಂಡಿತ್ ತಮ್ಮದೇ ದಾಟಿಯಲ್ಲಿ ಉತ್ತರಿಸಿದ್ದಾರೆ. ರಿಯಾ ಈ ಸಿನಿಮಾದ ಒಂದು ಭಾಗ, ಆದರೆ ಈ ವಿಷಯದ ಬಗ್ಗೆ ಈಗಲೇ ಯಾವುದೇ ಮಾಹಿತಿಯನ್ನ ನೀಡೋಕೆ ಸಾಧ್ಯವಾಗಲ್ಲ, ಸರಿಯಾದ ಸಮಯ ನೋಡಿಕೊಂಡು, ಸೂಕ್ತ ನಿರ್ಧಾರ ತೆಗೆದುಕೊಂಡು, ಎಲ್ಲವನ್ನು ಹೇಳ್ತೀವಿ ಅಂತ ಫುಲ್ ಸ್ಟಾಪ್ ಇಟ್ಟರು..
ಇನ್ನು ‘ಚೆಹೆರೆ’ ಸಿನಿಮಾ ರೂಮಿ ಜೆಫ್ರಿ ನಿರ್ದೇಶನದಲ್ಲಿ ಮೂಡಿ ಬರುತ್ತಿದ್ರೆ, ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ತಾರಾಗಣದಲ್ಲಿ ಕಾಣಿಸಲಿದ್ದಾರೆ, ರೋಮ್ಯಾಂಟಿಕ್ ಹಿರೋ ಇಮ್ರಾನ್ ಹಶ್ಮಿ, ಅನು ಕಪೂರ್, ಕ್ರಿಸ್ಟಲ್ ಡಿಸೌಜಾ ಮತ್ತಿತ್ತರು ಬಣ್ಣಹಚ್ಚಿದ್ದಾರೆ. ಆದರೆ ಈ ಲೀಸ್ಟ್ ನಲ್ಲಿ ರಿಯಾ ಚಕ್ರವರ್ತಿಯ ಹೆಸರೇ ಕೈಬಿಟ್ಟು ಹೋಗಿದೆ. ಹೀಗಾಗಿ ಸಿನಿಮಾದ ಮುಂದಿನ ನಡೆ ಏನು.. ಸಿನಿಮಾದ ನಟಿ ಯಾರು ಎಂಬ ಕೌತುಕ ಮತ್ತಷ್ಟು ಹೆಚ್ಚಿಸಿದೆ.
ನಟಿ ರಿಯಾ ಚಕ್ರವರ್ತಿ ಪೋಸ್ಟರ್ ನಲ್ಲಿ ಇಲ್ಲದಿರುವುರ ಬಗ್ಗೆ ಯಾವುದೇ ಕಮೆಂಟ್ಸ್ ನೀಡಲ್ಲ, ರಿಯಾ ಸಿನಿಮಾದಲ್ಲಿ ಇರುತ್ತಾಳಾ.. ಇಲ್ವಾ ಎಂಬುದರ ಬಗ್ಗೆ ಶೀಘ್ರದಲ್ಲೇ ಯಾವುದೇ ಮಾಹಿತಿ ನೀಡೋಕೆ ಆಗೋದಿಲ್ಲ ಅಂತ ನಿರ್ಮಾಪಕ ಆನಂದ್ ಪಂಡಿತ್ ಸ್ಪಷ್ಟಪಡಿಸಿದ್ದಾರೆ. ಒಟ್ಟಾರೆ, ರಿಯಾಗೆ ಡ್ರಗ್ಸ್ ಪ್ರಕರಣವೇ ಮುಳುವಾಯ್ತಾ, ಈಕೆ ಸಿನಿಮಾದಲ್ಲಿ ನಟಿಸಿದ್ರೆ ಚಿತ್ರತಂಡಕ್ಕೂ ಆಪತ್ತು ಇದ್ಯಾ ಎಂಬ ಚರ್ಚೆ ಮಾಡುತ್ತಿದೆ.
No Comment! Be the first one.