ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ, ಎ.ವಿ. ಚಿಂತನ್ ನಿರ್ದೇಶನದ ಚಕ್ರವರ್ತಿ ಚಿತ್ರವೀಗ ಹಿಂದಿ ಭಾಷೆಗೂ ಡಬ್ ಆಗಿದೆ. ಕಳೆದ ವರ್ಷ ಬಿಡುಗಡೆಯಾಗಿದ್ದ ಚಿಂತನ್ ನಿರ್ದೇಶನದ ಈ ಚಿತ್ರದ ಹಿಂದಿ ಡಬ್ಬಿಂಗ್ ವರ್ಷನ್ ಯೂಟ್ಯೂಬ್ನಲ್ಲಿ ಹೊಸಾ ಅಲೆಯನ್ನೇ ಎಬ್ಬಿಸಿದೆ!
ಈ ತಿಂಗಳ ಮೂರನೇ ತಾರೀಕಿನಂದು ಚಕ್ರವರ್ತಿ ಚಿತ್ರದ ಹಿಂದಿ ಡಬ್ಬಿಂಗ್ ವರ್ಷನ್ ಯೂಟ್ಯೂಬ್ನಲ್ಲಿ ಬಿಡುಗಡೆಯಾಗಿತ್ತು. ಅದಾಗಿ ಎರಡು ದಿನ ಕಳೆಯೋದರೊಳಗೇ ಏಳು ಮಿಲಿಯನ್ಗೂ ಅಧಿಕ ಮಂದಿ ಇದನ್ನು ವೀಕ್ಷಿಸಿದ್ದಾರೆ. ಒಟಾರೆ ಚಿತ್ರದ ಬಗ್ಗೆ ಭಾರೀ ಮೆಚ್ಚುಗೆಗಲೂ ಹರಿದು ಬಂದಿವೆ. ಈ ಮೂಲಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಚಿತ್ರವನ್ನು ಹಿಂದಿಯ ಪ್ರೇಕ್ಷಕರೂ ಮೆಚ್ಚಿಕೊಂಡಿದ್ದಾರೆ.
ದರ್ಶನ್ ಅಭಿನಯದ ಈ ಚಿತ್ರ ಕಳೆದ ವರ್ಷದ ಅತಿ ದೊಡ್ಡ ಬಜೆಟಿನ ಚಿತ್ರವಾಗಿ ಹೊರ ಹೊಮ್ಮಿತ್ತು. ಬಾಲಿವುಡ್ ಚಿತ್ರಗಳನ್ನೇ ಸರಿಗಟ್ಟುವಂತೆ ಟ್ರೆಂಡಿಂಗ್ ಕ್ರಿಯೇಟ್ ಮಾಡಿದ್ದ ಈ ಚಿತ್ರದ ಆರಂಭಿಕ ಅಬ್ಬರ ಇಡೀ ಭಾರತೀಯ ಚಿತ್ರರಂಗವೇ ಕನ್ನಡದತ್ತ ತಿರುಗಿ ನೋಡುವಂತೆ ಮಾಡಿದ್ದದ್ದು ಸುಳ್ಳಲ್ಲ.
ಭೂಗತದ ಛಾಯೆಯೊಂದಿಗೆ ಖದರ್ ತುಂಬಿದ ಕಥೆಯೊಂದನ್ನು ಹೊಂದಿದ್ದ ಈ ಚಿತ್ರ ಕನ್ನಡದಲ್ಲಿ ತಕ್ಕಮಟ್ಟಿಗೆ ಯಶ ಕಂಡಿತ್ತು. ಇದೀಗ ಅಖಂಡ ವರ್ಷದ ನಂತರ ಚಕ್ರವರ್ತಿ ಹಿಂದಿಯಲ್ಲಿ ಅಬ್ಬರಿಸುತ್ತಿದ್ದಾನೆ!
https://www.youtube.com/watch?v=RgcD826Cg-M #
No Comment! Be the first one.