ಯಾರು ಏನೇ ಠೀಕಿಸಿದರೂ, ಕಾಲೆಳೆದರೂ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ‘ಉಫ್ ಅಂದು ಮುಂದೆ ಸಾಗುವುದು ಬಹುಮುಖ ಪ್ರತಿಭೆಯುಳ್ಳ ಶ್ರೀ ಚಂದ್ರಚೂಡ್ ಚಕ್ರವರ್ತಿ ಅವರ ಮೂಲಗುಣ.

ಸ್ಯಾಂಡಲ್‌ವುಡ್‌ಗೆ ಹಲವಾರು ಕ್ಷೇತ್ರಗಳಿಂದ ಬಂದು ಇಲ್ಲಿ ನೆಲೆನಿಂತು ತಮ್ಮದೇ ಆದ ಛಾಪು ಮೂಡಿಸಿದವರು ಸಾಕಷ್ಟು ಜನರಿದ್ದಾರೆ.
ಈಗ, ಇದೇ ಹಾದಿಯಲ್ಲಿ ತಮ್ಮನ್ನು ತಾವು ನಟನಾಗಿ ಕೂಡ ಸೈ ಅನ್ನಿಸಿಕೊಳ್ಳುಲು ಬರುತ್ತಿದ್ದಾರೆ ಚಕ್ರವರ್ತಿ ಚಂದ್ರಚೂಡ್. ಚಂದ್ರಚೂಡ್ ಪ್ರಕರ್ತರಾಗಿ, ಸಿನಿಮಾ ಬರಹಗಾರರಾಗಿ ಈಗಾಗಲೇ ಛಾಪು ಮೂಡಿಸಿದ್ದಾರೆ. ನಿರ್ದೇಶಿಸಿದ ಸಿನಿಮಾದಲ್ಲೂ ಉತ್ತಮ ಹೆಸರು ಗಳಿಸಿದ್ದಾರೆ.

ಚಂದ್ರಚೂಡ್ ಒಂಥರಾ ಸಕಲಕಲಾವಲ್ಲಭ. ಜೊತೆಗೆ ಯಾವುದಕ್ಕೇ ಕೈ ಇಟ್ಟರೂ ಅದರಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಮನೋಭಾವ ಅವರದ್ದು. ಪತ್ರಕರ್ತನಾಗಿದ್ದಾಗ ಯಾರೆಂದರೆ ಅವರನ್ನು ಮೈಮೇಲೆಳೆದುಕೊಂಡು ಬರೆದವರು. ಜೊತೆಜೊತೆಗೇ ಪ್ರಗತಿಪರ ಚಿಂತಕನಾಗಿ, ಸಾಮಾಜಿಕ ಹೋರಾಟಗಾರನಾಗಿ ಕೂಡಾ ಹೆಸರು ಮಾಡುತ್ತಾ ಬಂದಿದ್ದಾರೆ. ಚಂದ್ರಚೂಡ್ ಎದುರಿಗೆ ಯಾರನ್ನೇ ಮಾತಿಗೆ ಕೂರಿಸಿದರೂ ಗೆಲುವು ಚಕ್ರವರ್ತಿಗೇ. ಅದು ರಾಜಕಾರಣವಾಗಿರಬಹುದು, ಸಿನಿಮಾ ಆಗಬಹುದು, ಮತ್ತೊಂದು ಯಾವುದೇ ವಿಚಾರವೇ ಆದರೂ ಲೀಲಾಜಾಲವಾಗಿ ಮಾತಾಡುವ ಕಲೆ ಚಂದ್ರಚೂಡ್‌ಗೆ ಸಿದ್ಧಿಸಿದೆ. ಬರವಣಿಗೆ-ಮಾತುಗಾರಿಕೆ ಎರಡನ್ನೂ ಒಲಿಸಿಕೊಂಡ ಪತ್ರಕರ್ತರ ಸಂಖ್ಯೆ ಕಡಿಮೆ. ಅದರಲ್ಲಿ ಚಕ್ರವರ್ತಿ ಚಂದ್ರಚೂಡ್ ಕೂಡಾ ಒಬ್ಬರು. ಚಂದ್ರಚೂಡ್ ಒಳಗಿರುವ ಕವಿಯ ತಾಕತ್ತೇನು ಅಂತಾ ತಿಳಿದುಕೊಳ್ಳಲು ಅವರೇ ಬರೆದಿರುವ ಖಾಲಿ ಶಿಲುಬೆ ಮತ್ತು ಮೈಲುತುತ್ತಗಳೆಂಬ ಎರಡು ಪುಸ್ತಕಗಳು ಸಾಕು. ಇನ್ನು ಗಾಸಿಪ್ಪು-ವಿವಾದಗಳಿಗೂ ಚಂದ್ರಚೂಡ್ ಅವರೆಂದರೆ ಬಲು ಪ್ರೀತಿ. ಆದರೆ ಯಾರು ಏನೇ ಠೀಕಿಸಿದರೂ, ಕಾಲೆಳೆದರೂ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ‘ಉಫ್ ಅಂದು ಮುಂದೆ ಸಾಗುವುದು ಬಹುಮುಖ ಪ್ರತಿಭೆಯುಳ್ಳ ಶ್ರೀ ಚಂದ್ರಚೂಡ್ ಚಕ್ರವರ್ತಿ ಅವರ ಮೂಲಗುಣ.

ಇವೆಲ್ಲ ಏನೇ ಇರಲಿ, ಈತನಕ ತೆರೆಯೆ ಹಿಂದೆಯಷ್ಟೇ ಇದ್ದ ಚಂದ್ರಚೂಡ್ ಈಗ ಬಿ.ನವೀನ್‌ಕೃಷ್ಣ ನಿರ್ದೇಶದ, ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿವಿಜಯ್ ಅಭಿನಯದ ಮೇಲೊಬ್ಬ ಮಾಯಾವಿ ಚಿತ್ರದ ಮೂಲಕ ಪ್ರಮುಖ ಖಳನಾಯಕನಾಗಿ ಎಂಟ್ರಿಕೊಡ್ತಿದ್ದಾರೆ. ಈಗಾಗಲೇ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಅದರಲ್ಲಿನ ಇವರ ಖಡಕ್‌ಲುಕ್ ಸಿನಿಪ್ರಿಯರನ್ನು ಮೆಚ್ಚಿಸಿದೆ. ಚಿತ್ರದಲ್ಲಿ ಚಂದ್ರಚೂಡ್ ಅವರದ್ದು ಸುಲೈಮಾನ್ ಅನ್ನುವ ಹೆಸರಿನ ಪಾತ್ರ. ಸುಲೈಮಾನ್ ಪಾತ್ರ ಟೀಸರ್ ಮೂಲಕ ಅನಾವರಣಗೊಂಡಿದ್ದೇ, ಚಂದ್ರಚೂಡ್ ಈಗ ಹಲವು ಚಿತ್ರಗಳಿಗೆ ಖಳನಾಯಕನಾಗಿ ಅಭಿನಯಿಸುತ್ತಿದ್ದಾರೆ.

ಅವುಗಳಲ್ಲಿ ಪ್ರಮುಖವಾದುವು ಡೆಮೋಪೀಸ್ ಮತ್ತು ರಂಗನಾಯಕಿ. ಇದಿಷ್ಟೇ ಇಲ್ಲದೇ ಮೇಲೊಬ್ಬ ಮಾಯಾವಿಯ ಸುಲೈಮಾನ್ ಪಾತ್ರ, ಚಂದ್ರಚೂಡ್ ಅವರನ್ನು ಮಲಯಾಳಂನ ಫುಟ್ಬಾಲ್ ಮರಿಯಮ್ಮನ್ ಅನ್ನುವ ಬಿಗ್ ಬಜೆಟ್‌ನ ಚಿತ್ರಕ್ಕೂ ದಾರಿಮಾಡಿಕೊಟ್ಟಿದೆ. ಇಲ್ಲಿವರೆಗೆ ಬೆಳ್ಳಿತೆರೆಯ ಹಿಂದೆ ಸಿನಿಮಾದ ನಾನಾ ವಿಭಾಗಗಳಲ್ಲಿ ತೊಡಿಗಿಸಿಕೊಂಡಿದ್ದ ಚಂದ್ರಚೂಡ್ ಇನ್ನುಮುಂದೆ ಖಳ ನಟನಾಗಿ ಮಿಂಚುವಂತಾಗಲಿ…

CG ARUN

ಉದ್ಘಾಟನೆ ಮಾಡಿದರುಶ್ರೀಮುರಳಿ

Previous article

ಇದು ನಿಜವಾದ ಅಭಿಮಾನ!

Next article

You may also like

Comments

Leave a reply

Your email address will not be published. Required fields are marked *